ಬೆಂಗಳೂರಿಗೆ ರಾಮನಗರ ಸೇರಿಸುವ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಇತ್ತ ವಿಜಯನಗರ ಮತ್ತೆ ಬಳ್ಳಾರಿಗೆ ಸೇರಿಸುವ ಚಿಂತನೆ!

ಅತ್ತ ರಾಮನಗರವನ್ನು ಬೆಂಗಳೂರಿಗೆ ಸೇರಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಚಿಂತನೆ ನಡೆಸಿದ್ರೆ ಇತ್ತ ಕಳೆದೆರಡು ವರ್ಷದ ಹಿಂದೆ ಬಳ್ಳಾರಿಯಿಂದ ಬೇರ್ಪಟ್ಟಿರೋ ವಿಜಯನಗರವನ್ನು ಮತ್ತೆ ಜೋಡಿಸೋ ಬಗ್ಗೆ ಚರ್ಚೆ ಆರಂಭವಾಗಿದೆ.

Congress plan to add Vijayanagar district back to Bellary rav

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಅ.27) : ಅತ್ತ ರಾಮನಗರವನ್ನು ಬೆಂಗಳೂರಿಗೆ ಸೇರಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಚಿಂತನೆ ನಡೆಸಿದ್ರೆ ಇತ್ತ ಕಳೆದೆರಡು ವರ್ಷದ ಹಿಂದೆ ಬಳ್ಳಾರಿಯಿಂದ ಬೇರ್ಪಟ್ಟಿರೋ ವಿಜಯನಗರವನ್ನು ಮತ್ತೆ ಜೋಡಿಸೋ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಈ ವಿಚಾರ ಹಾಲಿ ಕಾಂಗ್ರೆಸ್ಸಿನ ಸಚಿವ ಮತ್ತು ಶಾಕಸರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಅಷ್ಟಕ್ಕೂ ಬೇರ್ಪಟ್ಟಿರೋ ಬಳ್ಳಾರಿ ಜಿಲ್ಲೆ ಒಂದು ಮಾಡೋ ವಿಚಾರ ಯಾಕೆ ಈಗ ಬಂತು ಅನ್ನೋದು ಗೊತ್ತಾ?

ಎರಡು ಜಿಲ್ಲೆ ಮತ್ತು ಒಂದು ಮಾಡುವ ಯತ್ನ:

ಅಖಂಡ ಜಿಲ್ಲೆ ವಿಭಜನೆ ಮಾಡಿ ಮತ್ತೊಂದು ಜಿಲ್ಲೆ ಸ್ಥಾಪನೆಯಾದ ಇತಹಾಸವಿದೆ. ಆದರೆ  ವಿಭಜನೆಯಾದ ಜಿಲ್ಲೆಯನ್ನು ಒಂದು ಮಾಡಲು ಸಾಧ್ಯವಿದೆಯೇ? ರಾಮನಗರ ಬೆಂಗಳೂರು ಒಂದು ಮಾಡೋ ಬಗ್ಗೆ ನಡೆದಿರೋ ಚರ್ಚೆ ಮಧ್ಯೆ ವಿಭಜನೆಗೊಂಡ ಬಳ್ಳಾರಿ ವಿಜಯನಗರ ಒಂದು ಮಾಡೋ ವಿಚಾರ ಮುನ್ನೆಲೆಗೆ ಬಂದಿದೆ. ಹೌದು, ಕಳೆದೆರಡು  ದಶಕದಿಂದ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸಪೇಟೆ ಕೇಂದ್ರವಾಗಿರಿಸಿಕೊಂಡು ವಿಜಯನಗರ ಜಿಲ್ಲೆ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು. ಜಿಲ್ಲೆಯಾಗಿದ್ದು ಮಾತ್ರ 2021ರಲ್ಲಿ. ಸತತ ಹೋರಾಟದ ಜೊತೆಗೆ ವಿಜಯನಗರ ಜಿಲ್ಲೆಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಅಂದು ಆನಂದ ಸಿಂಗ್ ರಾಜೀನಾಮೆ ನೀಡಿದ್ರು. ಇಷ್ಟೇಲ್ಲ ಹರಸಾಹಸದ ಬಳಿಕ 2019ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಆನಂದ ಸಿಂಗ್ ಬೇಡಿಕೆಯಂತೆ 2021ರಲ್ಲಿ ನೂತನ ವಿಜಯನಗರ ಜಿಲ್ಲೆ ಅಸ್ಥಿತ್ವಕ್ಕೆ ಬಂದಿತ್ತು. 

ಕುಮಾರಸ್ವಾಮಿಗೆ ರಾಮನಗರ ಬಗ್ಗೆ ಪರಿಜ್ಞಾನವೇ ಇಲ್ಲ: ಡಿಕೆಶಿ ಕಿಡಿ

ಬಳ್ಳಾರಿ ಭಾಗದ ಜನರ ಮತ್ತು ಜನಪ್ರತಿನಿಧಿಗಳ ವಿರೋಧದ ಮಧ್ಯೆಯೂ ವಿಜಯನಗರ ಜಿಲ್ಲೆ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ರಾಮನಗರ ವಿಚಾರ ಚರ್ಚೆ ನಡೆದಿರೋವಾಗ ಬಳ್ಳಾರಿ ಉಸ್ತುವಾರಿ ಸಚಿವರಾಗಿರೋ ನಾಗೇಂದ್ರ  ಹಂಪಿ, ತುಂಗಭದ್ರ ಕಳೆದುಕೊಂಡ ಬಳ್ಳಾರಿ ಜಿಲ್ಲೆ ಹೃದಯ ಮತ್ತು ಕಳಶವನ್ನು ಕಳೆದುಕೊಂಡಂತಾಗಿದೆ. ಈಗಲೂ ವಿಜಯನಗರ ಜಿಲ್ಲೆಯ ಜನರು ಒಪ್ಪಿದ್ರೇ ಎರಡು ಜಿಲ್ಲೆ ಒಂದು ಮಾಡುವುದಾಗಿ ಹೇಳಿದ್ದಾರೆ. 

ಕಾಂಗ್ರೆಸ್ ಶಾಸಕರಿಂದಲೇ ವಿರೋಧ:

ಇಷ್ಟು ದಿನ ತಣ್ಣಗಿದ್ದ ಬಳ್ಳಾರಿ ವಿಜಯನಗರ ಒಂದು ಮಾಡೋ ವಿಚಾರ. ಅತ್ತ ರಾಮನಗರ ಬೆಂಗಳೂರಿಗೆ ಸೇರಿಸುತ್ತೇವೆ ಅನ್ನೋ ಡಿ.ಕೆ. ಶಿವಕುಮಾರ ಅವರ ಹೇಳಿಕೆಯಿಂದ ಮತ್ತೆ ಪುಷ್ಟಿ ನೀಡಿದಂತಾಗಿದೆ. ವಿಜಯನಗರ ಜಿಲ್ಲೆಯನ್ನು ಬಳ್ಳಾರಿಗೆ ಮತ್ತೆ ಸೇರ್ಪಡೆ ಮಾಡೋ ಬಗ್ಗೆ  ಸಚಿವ ನಾಗೇಂದ್ರ ಅವರ ಹೇಳಿಕೆಗೆ ಕಾಂಗ್ರೆಸ್ ನಲ್ಲಿಯೇ ವಿರೋಧ ವ್ಯಕ್ತವಾಗಿದೆ. ಸಚಿವ ನಾಗೇಂದ್ರ ಹೇಳಿಕೆಗೆ ಸ್ವಪಕ್ಷದ ಹೊಸಪೇಟೆ ಶಾಸಕ ಗವಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲೆ ಮತ್ತೊಮ್ಮೆ ಒಗ್ಗೂಡಿಸಬೇಕು ಎಂದು ಪದೇ ಪದೇ ಹೇಳೋದು ಸರಿಯಲ್ಲ, ವಿಜಯನಗರ ಜಿಲ್ಲೆಯ ಆಡಳಿತ ಸುಗಮವಾಗಿ ನಡೆಯುತ್ತಿದೆ. ಮತ್ತೆ ಅದನ್ನು  ಬದಲು ಮಾಡೋದಕ್ಕೆ ಆಗೋದಿಲ್ಲ ಎಂದಿದ್ದಾರೆ...

 

ಬೆಂಗಳೂರು ನಂಟಿಗೆ ಡಿಕೆಶಿ ಶಾರ್ಟ್‌ಕಟ್‌ ಮಾರ್ಗ: ಮಾಜಿ ಸಚಿವ ಅಶ್ವತ್ಥ ನಾರಾಯಣ

ಬಳ್ಳಾರಿ ಜಿಲ್ಲೆ ವಿಭಜಯಾಗಿ ಈಗಾಗಲೇ ಎರಡು ವರ್ಷಗಳು ಕಳೆದಿವೆ. ಬಹುತೇಕ ಎಲ್ಲಾ ಕಛೇರಿಗಳು ಸ್ಥಾಪನೆಯಾಗಿ ಅಧಿಕಾರಿಗಳು ನೇಮಕಾತಿಯೂ ನಡೆದಿದೆ. ಹೀಗಿರುವಾಗ ಒಡೆದು ಹೋದ ಜಿಲ್ಲೆಯನ್ನು ಮತ್ತೆ ಒಂದು ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕುತ್ತದೆಯೇ? ಅಥವಾ ಕೇವಲ ರಾಜಕೀಯ ಹೇಳಿಕೆ ಮಾತ್ರ ಸೀಮಿತವಾಗುತ್ತದೆಯೇ ಅನ್ನೋದನ್ನ ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios