ಪರಿಷ್ಕೃತ ಪಠ್ಯ ವಿರುದ್ಧ ಕಾಂಗ್ರೆಸ್ ಕುಪ್ಪಳಿ- ತೀರ್ಥಹಳ್ಳಿ ಪಾದಯಾತ್ರೆ: ಕಿಮ್ಮನೆ ರತ್ನಾಕರ್
‘ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಆಗಿದೆ. ಆದರೆ, ಅಧ್ವಾನವಾದ ಪಠ್ಯಗಳು ಹಾಗೆಯೇ ಉಳಿದುಕೊಂಡಿವೆ. ಹೀಗಾಗಿ ಪಠ್ಯಗಳಲ್ಲಿ ಅಧ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿವಮೊಗ್ಗ (ಜೂ.12): ‘ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಆಗಿದೆ. ಆದರೆ, ಅಧ್ವಾನವಾದ ಪಠ್ಯಗಳು ಹಾಗೆಯೇ ಉಳಿದುಕೊಂಡಿವೆ. ಹೀಗಾಗಿ ಪಠ್ಯಗಳಲ್ಲಿ ಅಧ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆಯಲ್ಲಿ ಮಹಾ ತಪ್ಪುಗಳೇ ಆಗಿದ್ದರೂ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು?
ಬೋಧನಾ ಅನುಭವ ಏನೆಂಬುದು ಯಾರಿಗೂ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಷ್ಕರಣೆ ಸಂಬಂಧ ಇದುವರೆಗೂ ಪಿಡಿಎಫ್ ಬಿಡುಗಡೆ ಮಾಡಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಆಗಿರುವ ಅಧ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15 ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಅಂದು ಬೆಳಗ್ಗೆ 7ಕ್ಕೆ ಕುವೆಂಪು ಸಮಾಧಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಸುಮಾರು 18 ಕಿ.ಮೀ. ಜಾಥಾ ಸಾಗಿ ಮಧ್ಯಾಹ್ನ 12 ಗಂಟೆಗೆ ತೀರ್ಥಹಳ್ಳಿಯ ಟೌನ್‌ಹಾಲ್ ಬಳಿ ಬಂದು, ಬಹಿರಂಗ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪಠ್ಯ ಲೋಪ ಸರಿಪಡಿಸುವ ಕೆಲಸ ಶುರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೇ ಉಸ್ತುವಾರಿ
ಬಹಿರಂಗ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಬಸವರಾಜ್ ಹೊರಟ್ಟಿ, ವೈ.ಎಸ್.ವಿ. ದತ್ತ ಸೇರಿದಂತೆ ವಿವಿಧ ನಾಯಕರು, ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಮೇಶ್ ಹನಗವಾಡಿ, ರಾಜೇಂದ್ರ ಚೆನ್ನಿ, ರೈತ ಹೋರಾಟಗಾರರಾದ ಎಚ್.ಆರ್.ಬಸವರಾಜಪ್ಪ, ಕೆ.ಟಿ.ಗಂಗಾಧರ್ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದರು.
ಗೃಹ ಸಚಿವ ಆರಗ ಜೈಲಲ್ಲಿರಬೇಕಿತ್ತು: ಕೇಂದ್ರದಲ್ಲಿ ನೋಡಿದರೆ ಎರಡು ವರ್ಷ ಜೈಲಿನಲ್ಲಿದ್ದವರು ಗೃಹ ಸಚಿವರಾಗಿದ್ದಾರೆ. ಇಲ್ಲಿ ನೋಡಿದರೆ ಇಷ್ಟೆಲ್ಲಾ ಗಲಭೆ ಮಾಡಿದವರು ಗೃಹ ಸಚಿವರಾಗಿದ್ದಾರೆ. ಪಠ್ಯ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಎನ್‌ಎಸ್‌ಯುಐ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪ್ರತಿಭಟನೆಗೆ ಬಂಧಿಸುವುದಾದರೆ ಆರಗ ಜ್ಞಾನೇಂದ್ರ ಅವರು ಜೈಲಿನಲ್ಲಿರಬೇಕಿತ್ತು. ಅಷ್ಟೊಂದು ಪ್ರತಿಭಟನೆ, ಗಲಭೆಗಳನ್ನು ಅವರು ನಮ್ಮ ಕ್ಷೇತ್ರದಲ್ಲಿ ಮಾಡಿದ್ದರು ಎಂದು ಕಿಮ್ಮನೆ ರತ್ನಾಕರ್ ಕಿಡಿಕಾರಿದರು.
ರೋಹಿತ್ ಚಕ್ರತೀರ್ಥ ಸಮಿತಿ ವಜಾಗೊಳಿಸಿಬೇಕು, ಪರಿಷ್ಕೃತ ಪಠ್ಯ ರದ್ದುಗೊಳಿಸಬೇಕು. ಇಲ್ಲದಿದ್ದರೆ ಪಾದಯಾತ್ರೆ ಮಾಡಲು ಸಾಹಿತಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಪ್ರೊ. ಜಿ.ಎಸ್. ಸಿದ್ದರಾಮಯ್ಯ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಇದೀಗ ಸರ್ಕಾರ ಪರಿಷ್ಕೃತ ಪಠ್ಯ ಹಿಂಪಡೆದು ಹಳೆಯ ಪಠ್ಯವನ್ನೇ ಬೋಧಿಸಬೇಕು. ಪಠ್ಯಪರಿಷ್ಕರಣೆಗೆ ಹೊಸದಾಗಿ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.
ಪಠ್ಯ ಪುಸ್ತಕಗಳ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪ ಇರಬಾರದು: ಬಸವರಾಜ ಹೊರಟ್ಟಿ
ಭವಿಷ್ಯದೊಂದಿಗೆ ಚೆಲ್ಲಾಟ: ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ಹೊಟೇಲ್‌ನಲ್ಲಿ ಹೋಗಿ ಬೇಕಾದ ತಿನಿಸು ಖರೀದಿಸದಂತಲ್ಲ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಪಠ್ಯ ಪುಸ್ತಕದಲ್ಲಿ ಆಟವಾಡಲು ಮುಂದಾಗುವುದಾದರೆ ಅವರು ಸರ್ಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ಕೇವಲ 2 ತಿಂಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ಅಂದರೆ 1 ಕೋಟಿ ವಿದ್ಯಾರ್ಥಿಗಳ ಪಠ್ಯ ಪರಿಷ್ಕರಣೆ ಸಾಧ್ಯವೇ? ಒಂದೇ ಸಮುದಾಯದವರು ಸೇರಿಕೊಂಡು ಇವರಿಗೆ ಬೇಕಾದವರ ಸಾಹಿತಿಗಳ ಬರಹ ಸೇರಿಸಿಕೊಂಡು, ಪ್ರಮುಖರ ಲೇಖನಗಳು, ಮಹಾನ್ ವ್ಯಕ್ತಿಗಳ ಇತಿಹಾಸ ಕೈ ಬಿಡುವುದನ್ನು ಒಪ್ಪಲು ಸಾಧ್ಯವೇ ಎದು ಪ್ರಶ್ನಿಸಿದರು.