ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯದಲ್ಲಿ ಸಂವಿಧಾನಬದ್ಧ ಅಧಿಕಾರ ಇರುವವರು ಸರಿಯಾಗಿ ತೀರ್ಮಾನ ಮಾಡದಿದ್ದರೆ ಬಾಂಗ್ಲಾದೇಶದ ರೀತಿಯಲ್ಲಿ ಘಟನೆ ನಡೆಯುತ್ತವೆ ಎಂದು ಉದಾಹರಣೆಯಾಗಿ ಹೇಳಿದ್ದೇನೆಯೇ ಹೊರತು ಬಾಂಗ್ಲಾದೇಶ ನನ್ನ ಮಾದರಿ ಎಂದು ಹೇಳಿಲ್ಲ ಎಂದ ಐವಾನ್‌ ಡಿಸೋಜಾ  

ಬೆಂಗಳೂರು(ಆ.22): ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯದಲ್ಲಿ ಸಂವಿಧಾನಬದ್ಧ ಅಧಿಕಾರ ಇರುವವರು ಸರಿಯಾಗಿ ತೀರ್ಮಾನ ಮಾಡದಿದ್ದರೆ ಬಾಂಗ್ಲಾದೇಶದ ರೀತಿಯಲ್ಲಿ ಘಟನೆ ನಡೆಯುತ್ತವೆ ಎಂದು ಉದಾಹರಣೆಯಾಗಿ ಹೇಳಿದ್ದೇನೆಯೇ ಹೊರತು ಬಾಂಗ್ಲಾದೇಶ ನನ್ನ ಮಾದರಿ ಎಂದು ಹೇಳಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್‌ ಡಿಸೋಜಾ ಸ್ಪಷ್ಟನೆ ನೀಡಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಜೆಡಿಎಸ್‌ನವರು ಏನು ಮಾತನಾಡಿ ದರು ಎಂಬ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. 

ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ

ಬಾಂಗ್ಲಾ ಘಟನೆ ಉದಾಹರಣೆ ಕೊಟ್ಟಿದ್ದೇನೆ. ಬಾಂಗ್ಲಾದೇಶ ನನ್ನ ಮಾಡೆಲ್ ಅಂತ ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದರು.