ಹಿಜಾಬ್ ವಿವಾದ: ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಜಮೀರ್
* ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ಕಿಚ್ಚು
* ಹಿಜಾಬ್‌ಗೆ ಹೆಲ್ಮೆಟ್ ಕಡ್ಡಾಯದ ಉದಾಹರಣೆ ನೀಡಿದ ಶಾಸಕ ಜಮೀರ್
* ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಎಂದ ಜಮೀರ್ ಅಹಮ್ಮದ್ ಖಾನ್
ಹಾವೇರಿ, (ಫೆ.14): ಹಿಜಾಬ್ (Hijab Row)ಕುರಿತಾಗಿ ಮಾಜಿ ಸಚಿವ ಜಮೀರ ಅಹಮ್ಮದ್ ಖಾನ್ (Zameer Ahmed Khan) ವಿವಾದಾತ್ಮಕ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಇದೀಗ ಈ ವಿಚಾರವಾಗಿ ಇಂದು(ಸೋಮವಾರ) ಹಾವೇರಿ(Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಖಾದ್ರಿ ದರ್ಗಾ ಬಳಿ ಮಾತನಾಡಿರುವ ಜಮೀರ್ , ಸೌಂದರ್ಯ ಕಾಣದಿರಲು ಹಾಗೂ ತಮ್ಮ ರಕ್ಷಣೆಗಾಗಿ ಹಿಜಾಬ್‍ನ್ನು ಧರಿಸುತ್ತಾರೆ ಎಂದಿದ್ದೆ. ಈ ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
Hijab Row: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು: ಡಿಕೆಶಿ
ನಾನು ಹಿಜಾಬ್ ಹಾಕದೇ ಇದ್ದರೆ ರೆಪ್ ಆಗುತ್ತೆ ಎಂದು ಹೇಳಿಲ್ಲ. ಬೇರೆಯವರು ಗೊಂದಲ ಸೃಷ್ಟಿ ಮಾಡಿಕೊಂಡರೆ ನಾನು ಏನು ಮಾಡಲಿ? ಹಿಜಬ್ ಹಾಕಿದರೆ ಬ್ಯೂಟಿ ಕಾಣಲ್ಲ, ಸೇಫ್ಟಿಗಾಗಿ ಹಾಕ್ಕೊತಾರೆ ಎಂದು ಹೇಳಿದ್ದೆ. ಬೇರೆಯವರ ಕಣ್ಣು ಬೀಳಬಾರದು ಎಂದು ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳುತ್ತಾರೆ ಅಷ್ಟೇ ಎಂದು ಹೇಳಿದರು.
ನಮ್ಮಲ್ಲಿ ರೇಪ್ ರೆಟ್ ಜಾಸ್ತಿ ಇದೆ. ಈ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳಲಾಗಿದೆ. ಕೆಲವರು ಹಿಜಾಬ್ ಹಾಕುತ್ತಾರೆ, ಕೆಲವರು ಹಾಕಲ್ಲ. ಇಸ್ಲಾಂನಲ್ಲಿ ಹಿಜಾಬ್ ಹಾಕಬೇಕು ಎಂದು ಇದೆ ಎಂದು ತಿಳಿಸಿದರು
ದೇಶದಲ್ಲಿ ರೇಪ್ (Rape) ರೆಟ್ ಜಾಸ್ತಿ ಇದೆ. ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಜಾಸ್ತಿ ಇದೆ. ಹಿಜಬ್ ಧರಿಸುವುದರಿಂದ ಏನು ಎಂದು ಹೇಳಿದ್ದೇನೆ ಅಷ್ಟೇ. ಉದಾಹರಣೆಗೆ ಹೆಲ್ಮೆಟ್ ಹಾಕಿಕೊಳ್ಳೊರು ಸೆಫ್ಟಿಗಾಗಿ ಅಲ್ಲವೇ. ಹೆಲ್ಮೆಟ್ ಹಾಕಲು ಸರ್ಕಾರ ಆದೇಶ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಹಿಜಾಬ್ ಆದೇಶಕ್ಕೆ ತಲೆ ಬಾಗುತ್ತೇವೆ. ಅದಕ್ಕೆ ಸ್ವಾಗತ ಮಾಡುತ್ತೇವೆ ಎಂದರು.
ಈಗ ಎಲೆಕ್ಷನ್ ಹತ್ತಿರ ಬರ್ತಿದೆ. ಹಿಂದೂ ಮುಸ್ಲಿಂ ವಿಚಾರ ಬಳಸಿಕೊಳ್ಳೋದು. ಅವರಿಗೆ ಹೇಳಿಕೊಳ್ಳಲು ಅಭಿವೃದ್ಧಿ ಕೆಲಸಗಳಿಲ್ಲ. ರಾಜ್ಯದ ಜನರು ದಡ್ಡರಲ್ಲ. 2023ರ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸ್ತಾರೆ.ಬಿಜೆಪಿಯವರಿಗೆ ಏನು ಟಾಂಗ್ ಕೊಡೋಕೆ ಆಗುತ್ತೆ. ನಾವು ಟಾಂಗ್ ಕೊಟ್ರೆ ಒಂದಕ್ಕೆ ಇನ್ನೊಂದು ಸೇರಿಸಿ ಹೇಳ್ತಾರೆ. ಅವರಿಗೆ ಬೇರೆ ವಿಷಯಗಳಿಲ್ಲ. ಜಮೀರ್ ಏನಾದ್ರೂ ಹೇಳಿದ್ರೆ ಅದಕ್ಕೊಂದು ಸೇರಿಸಿ ಮಾತಾಡ್ತಾರೆ. ಅದಕ್ಕೆ ಸುಮ್ಮನೆ ಇರೋದು ವಾಸಿ ಎಂದರು.
ನಮ್ಮಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಲು ಅವಕಾಶವಿದೆ. ನಮಾಜ್ ಮಾಡಲು ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ನಮಾಜ್ ಮಾಡಬಹುದು. ಮನೆಯಲ್ಲಿ ಅವಕಾಶ ಸಿಕ್ಕರೂ ನಮಾಜ್ ಮಾಡಬಹುದು ಎಂದು ಹೇಳಿದರು.
ಹಿಜಾಬ್ ಧರಿಸೋದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಷ್ಟು ದಿನಗಳಿಂದ ಇಲ್ಲದಿರೋದು ಈಗ್ಯಾಕೆ. ಕೇಸರಿ ಶಾಲು ಧರಿಸೋದು ಯಾವಾಗ ಅರಂಭ ಆಗಿದೆ. ಮಕ್ಕಳನ್ನ ರಾಜಕೀಯ ಭವಿಷ್ಯಕ್ಕೆ ಬಳಸಿಕೊಳ್ತಿದ್ದಾರೆ. ಮಕ್ಕಳಲ್ಲಿ ಜಾತಿ ಬೀಜ ಬಿತ್ತುತ್ತಿದ್ದಾರೆ. ಇದು ಮಕ್ಕಳಿಗೆ ಗೊತ್ತಾಗ್ತಿಲ್ಲ. ಪಾಪ ಇದು ಮಕ್ಕಳಿಗೆ ಏನೂ ಅಂತಾನೆ ಗೊತ್ತಿಲ್ಲ. ಕೇಸರಿ ಶಾಲು ಹಾಕಿ ವಿಷಬೀಜ ಬಿತ್ತುತ್ತಿದ್ದಾರೆ. ಹಿಜಾಬ್ ಹಾಕೋದು ಅವರ ರಕ್ಷಣೆಗೋಸ್ಕರ, ಅವರ ಬ್ಯೂಟಿ ಕಾಪಾಡಿಕೊಳ್ಳೋದಕ್ಕೋಸ್ಕರ ಎಂದು ತಿಳಿಸಿದರು.
ಡಿಕೆಶಿ ಗರಂ
ಹಿಜಾಬ್ ವಿವಾದದ ಬಗ್ಗೆ ಶಾಸಕ ಜಮೀರ್ ಅಹಮದ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಅವರು ಆ ಮಾತನ್ನು ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವಪಕ್ಷೀಯ ಶಾಸಕರ ವಿರುದ್ಧ ಗರಂ ಆಗಿದ್ದಾರೆ.
ನಿನ್ನೆ ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ.