ಶಾಸಕ ಜಮಿರ್ ಅಹಮದ್ ಖಾನ್ಗೆ ಹೃದಯಾಘಾತ| ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಮೀರ್ | ಜಮೀರ್ರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ ಆಪ್ತರು | ಸ್ಟಂಟ್ ಅಳವಡಿಸಿರುವ ವೈದ್ಯರು, ಆರೋಗ್ಯದಲ್ಲಿ ಚೇತರಿಕೆ| ನಾಳೆ ಜಮೀರ್ ಅಹ್ಮದ್ ಖಾನ್ ಡಿಸ್ಚಾರ್ಜ್ ಸಾಧ್ಯತೆ| ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಪರಮೇಶ್ವರ್

ಬೆಂಗಳೂರು[ಅ.20]: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಲಘು ಹೃದಯಾಘಾತವಾಗಿದ್ದು, ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಬೆಳಗ್ಗೆ 10 ಗಂಟೆಗೆ ಜಮೀರ್ ಅಹ್ಮದ್ ಗೆ ಹೃದಯಾಘಾತವಾಗಿದ್ದು, ಕೂಡಲೇ ಆಪ್ತರು ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಜಮೀರ್‌ಗೆ ಸಿಬಿಐ ನೋಟಿಸ್‌: ಹಾಜರಿಗೆ 5 ದಿನ ಕಾಲಾವಕಾಶ

ಸ್ಟಂಟ್ ಅಳವಡಿಸಿರುವ ವೈದ್ಯರು, ಆರೋಗ್ಯ ಚೇತರಿಕೆಯಾಗಿದೆ ಎಂದಿದ್ದಾರೆ. ನಾಳೆ ಜಮೀರ್ ಅಹ್ಮದ್ ಖಾನ್ ಡಿಸ್ಚಾರ್ಜ್ ಸಾಧ್ಯತೆಗಳಿದ್ದು, ಮಾಜಿ ಡಿಸಿಎಂ ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಹೆಸರು ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ಕೆಖಳಿ ಬಂದಿತ್ತು.

ಜಮೀರ್ ಕೈಯಲ್ಲಿ ಕಂತೆ ಕಂತೆ ಹಣ: ಇಷ್ಟೊಂದು ಹಣ ಯಾಕಣ್ಣ?