Asianet Suvarna News Asianet Suvarna News

ಡಿಜೆ ಹಳ್ಳಿ ಗಲಭೆಯಲ್ಲಿ ಅಮಾಯಕರಿದ್ದಾರೆ, ಸರ್ಕಾರದ ವಿರುದ್ಧವೇ ಗುಡುಗಿದ ತನ್ವೀರ್‌ ಸೇಠ್‌!

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಕೇಸ್‌ನಲ್ಲಿ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್‌ ವರದಿಯನ್ನು ಒಪ್ಪಿ ರಾಜ್ಯಪತ್ರ ಹೊರಡಿಸಲಾಗಿದೆ. ಹಾಗಿದ್ದರೂ, ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಡಿಜೆ ಹಳ್ಳಿ ಗಲಭೆ ಕೇಸ್‌ನಲ್ಲಿ ಅಮಾಯಕರಿದ್ದಾರೆ ಎಂದು ಹೇಳಿದ್ದಾರೆ.

Congress MLA Tanveer Sait on DJ Halli  KG Halli roits Case Magistrates inquiry report accepted by Govt san
Author
First Published Sep 30, 2023, 4:29 PM IST

ಮೈಸೂರು (ಸೆ.30): ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಸರ್ಕಾರ ಮ್ಯಾಜಿಸ್ಟ್ರೇಟ್‌ ವರದಿಯನ್ನು ಒಪ್ಪಿ ರಾಜ್ಯಪತ್ರ ಹೊರಡಿಸಿದೆ. ಚುನಾವಣೆಗೂ ಮುನ್ನ ಇದೇ ವರದಿಯನ್ನು ಟೀಕೆ ಮಾಡಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಮ್ಯಾಜಿಸ್ಟ್ರೇಟ್‌ ವರದಿಯನ್ನು ಒಪ್ಪಿಕೊಂಡಿದೆ. ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್‌ ನಡೆಸಿದವರು ಅಮಾಯಕರು ಎಂದಿದ್ದ ತನ್ವೀರ್‌ ಸೇಠ್‌ ಅವರನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬರೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಸರ್ಕಾರ ಮ್ಯಾಜಿಸ್ಟ್ರೇಟ್‌ ವರದಿ ಒಪ್ಪಿದರೂ ತನ್ವೀರ್‌ ಸೇಠ್‌ ಮತ್ತೊಮ್ಮೆ ಇದೇ ಮಾತು ಹೇಳಿದ್ದಾರೆ. ರಾಜ್ಯದಲ್ಲಿ ನಡೆದಿರುವ ಆಕಸ್ಮಿಕ ಗಲಭೆಗಳಲ್ಲಿಅಪರಾಧಿಗಳಿಗೆ ಶಿಕ್ಷೆ ಆಗಬೇಕಿರುವುದು ಹಾಗೂ ಜನರಿಗೆ ಕಾನೂನಿನ ಅರಿವು ಮೂಡಿಸಬೇಕಾಗಿರುವುದು ನಮ್ಮ ಕರ್ತವ್ಯ. ನಾನು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೆ. ಈ ಪ್ರಕರಣದಲ್ಲಿ ಅಮಾಯಕರು ಯಾರಾದರೂ ಇದ್ದಲ್ಲಿ, ಅದನ್ನು ಮರುಪರಿಶೀಲನೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿಕೊಂಡಿದ್ದೆ. ಇನ್ನು ಮ್ಯಾಜಿಸ್ಟ್ರೇಟ್‌ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ, ವರದಿಯಲ್ಲಿ ಏನಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ ಎಂದು ತನ್ವೀರ್‌ ಸೇಠ್‌ ಮೈಸೂರಿನಲ್ಲಿ ಹೇಳಿದ್ದಾರೆ.

ನನ್ನ ಮನಸ್ಸಲ್ಲಿ ಇರುವಂಥದ್ದು, ಅಂದು ಹಾಲು ತರೋಕೆ ಹೊರಗಡೆ ಬಂದವರ ಮೇಲೆ 144 ಉಲ್ಲಂಘನೆ ಮಾಡಿದ್ದಾರೆ ಎಂದು ಕೇಸ್‌ ಹಾಕಿ, ಬಾಡಿ ವಾರಂಟ್‌ ಹೊರಡಿಸಿದ್ದರು. ಇದರಲ್ಲಿರುವ ಅಮಾಯಕರನ್ನು ಮರುಪರಿಶೀಲನೆ ಮಾಡಿ ಎಂದು ಬರೆದಿದ್ದೆ. ಡಿಜೆ ಹಳ್ಳಿ-ಕೆಜೆ ಹಳ್ಳಿ ಕೇಸ್‌ನಲ್ಲಿ ಇಂದಿಗೂ ನೂರಕ್ಕೆ ನೂರರಷ್ಟು ಅಮಾಯಕರು ಇದ್ದಾರೆ. ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ ಬೆನ್ನಲ್ಲಿಯೇ ಆತನ ಮೇಲೆ ಕ್ರಮ ಕೈಗೊಂಡಿದ್ದರೆ, ಗಲಭೆಯಾಗುವ ಅವಕಾಶವೇ ಇರುತ್ತಿರಲಿಲ್ಲ. ಗಲಭೆ ಆದ ಸಮಯದಲ್ಲೂ ಬೇರೆ ಬೇರೆ ಟ್ವಿಸ್ಟ್‌ಗಳನ್ನು ಕೊಟ್ಟು, ಪೊಲೀಸ್‌ ಸ್ಟೇಷನ್‌ಗೆ ಬೆಂಕಿ ಹಚ್ಚಿದ್ರು ಅಂತೆಲ್ಲಾ ಹೇಳಲಾಯಿತು.. ತಪ್ಪು ಆಗಿಲ್ಲ ಎಂದು ನಾನು ಈಗಲೂ ಹೇಳುತ್ತಿಲ್ಲ. ಈ ಸರ್ಕಾರ ತಪ್ಪು ಮಾಡಿಲ್ಲ ಎಂದು ಹೇಳಿಲ್ಲ. ಈ ವಿಚಾರದಲ್ಲಿ ನ್ಯಾಯ ಸಿಗೋವರೆಗೀ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮ್ಯಾಜಿಸ್ಟ್ರೇಟ್ ತನಿಖಾ ವರದಿ ಅಂಗೀಕರಿಸಿದ ಸರ್ಕಾರ: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಕೇಸ್‌ನಲ್ಲಿ  ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆದಿದ್ದಲ್ಲದೆ, ಬಳಿಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಕೂಡ ಕಿಡಿಗೇಡಿಗಳು ಮುಂದಾಗಿದ್ದರು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಕೂಡ ವಿಫಲರಾಗಿದ್ದರು. ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು ಈ ವೇಳೆ ಗೋಲಿಬಾರ್‌ ಮಾಡಿದ್ದರು. ಈ ಹಂತದಲ್ಲಿ ಮೃತ ಆರೋಪಿಗಳ ಕುಟುಂಬ ಇದು ನಕಲಿ ಎನ್‌ಕೌಂಟ್‌ ಎಂದು ಪ್ರಶ್ನೆ ಮಾಡಿತ್ತು. ಘಟನೆಯನ್ನ ಖಂಡಿಸಿ ಸರ್ಕಾರದ ಕೈವಾಡದ ಬಗ್ಗೆ ಕಾಂಗ್ರೆಸ್‌ ಕೂಡ ಶಂಕೆ ವ್ಯಕ್ತಪಡಿಸಿತ್ತು. ಸಮುದಾಯ ಟಾರ್ಗೆಟ್ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಹೀಗಾಗಿ ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಬಿಜೆಪಿ ಸರ್ಕಾರ ವಹಿಸಿತ್ತು. 

 

ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣ, ಬೆಂಕಿ ಹಚ್ಚಿದವರ ರಕ್ಷಣೆಗೆ ಸರ್ಕಾರದಿಂದ ವೇದಿಕೆ ಸಿದ್ಧ!

ಶನಿವಾರ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಯ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಮ್ಯಾಜಿಸ್ಟ್ರೇಟ್, ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ವರದಿಯನ್ನು ಸಲ್ಲಿಕೆ ಮಾಡಿತ್ತು. ಪೊಲೀಸರ ಗೋಲಿಬಾರ್ ಕ್ರಮ ಸರಿಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಅಂದು ಪೋಲಿಸರು ಗೋಲಿಬಾರ್ ಮಾಡಿರದಿದ್ದರೆ ಇಡೀ ಠಾಣೆ ಬೆಂಕಿ ಹಚ್ಚುತ್ತಿದ್ದರು. ಸ್ವಯಂ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ಕಾಪಾಡಲು ಗೋಲಿಬಾರ್ ನಡೆದಿದೆ ಎಂದು ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ. 2023ರ ಜನವರಿ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್‌ ಈ ವರದಿ ನೀಡಿತ್ತು. ಕಾಂಗ್ರೆಸ್‌ ಈ  ಮ್ಯಾಜಿಸ್ಟ್ರೇಟ್ ವರದಿಯನ್ನು ಕೂಡ ಟೀಕೆ ಮಾಡಿತ್ತು. ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಿವೆ ಎಂದು ಕಾಂಗ್ರೆಸ್‌ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ರಿಪೋರ್ಟ್ಅನ್ನು ಒಪ್ಪಿಕೊಂಡಿದೆ. ಬಿಜೆಪಿ ಸರ್ಕಾರದ ಕ್ಯಾಬಿನೆಟ್ ನಿರ್ಧಾರವನ್ನ ಒಪ್ಪಿ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

 

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

Follow Us:
Download App:
  • android
  • ios