ಬೆಂಗಳೂರು: ಕ್ರೂರ ಮನಸ್ಥಿತಿ.. ವರನಟ ಡಾ. ರಾಜ್ ಪುತ್ಥಳಿ ಮಂಟಪ ಧ್ವಂಸ
ಕನ್ನಡದ ಮೇರು ನಟನ ಪ್ರತಿಮೆ ಉದ್ಘಾಟನೆಗೆ ಅಡ್ಡಿ/ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ ದ್ವಂಸ ಗೊಳಿಸಿರುವ ಕಿಡಿಗೇಡಿಗಳು/ ವಿದ್ಯಾರಣ್ಯಪುರದ ಇಂದಿರಾಕ್ಯಾಂಟಿನ್ ಬಳಿ ಘಟನೆ/
ಬೆಂಗಳೂರು(ಫೆ. 12) ಕನ್ನಡದ ಮೇರು ನಟನ ಪ್ರತಿಮೆ ಉದ್ಘಾಟನೆಗೆ ಅಡ್ಡಿ ವ್ಯಕ್ತವಾಗಿದೆ ಅದು ರಾಜಧಾನಿ ಬೆಂಗಳೂರಿನಲ್ಲಿಯೇ. ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪವನ್ನು ಧ್ವಂಸಗೊಳಿಸಲಾಗಿದೆ.
ವಿದ್ಯಾರಣ್ಯಪುರದ ಇಂದಿರಾಕ್ಯಾಂಟಿನ್ ಬಳಿ ಘಟನೆ ನಡೆದಿದೆ. ಅದ್ದೂರಿಯಾಗಿ ಡಾ.ರಾಜ್ ಪುತ್ಥಳಿ ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ಜಾಗದಲ್ಲಿ ಕಿಡಿಗೇಡಿಗಳು ಉಪಟಳ ಮೆರೆದಿದ್ದಾರೆ.
ವಿಷ್ಣು ಪ್ರತಿಮೆಗೆ ಅಪಮಾನ ಮಾಡಿದ್ದು ಯಾರು?
ಬಿಬಿಎಂಪಿ ವತಿಯಿಂದ ವರನಟನಪ್ರತಿಮೆಗೆ ಜಾಗ ಮೀಸಲಿಡಲಾಗಿತ್ತು. ಪುತ್ಥಳಿ ಸ್ಥಾಪನೆಯ ಬಹುತೇಕ ಕೆಲಸ ಪೂರ್ಣವಾಗಿತ್ತು. ಇಂದು ಏಕಾಏಕಿ ಪುತ್ಥಳಿ ನಿರ್ಮಾಣ ಜಾಗದಲ್ಲಿ ಉದ್ಧಟತನ ತೋರಿಸಿದ್ದಾರೆ. ವರನಟನಿಗೆ ಅವಮಾನ ಮಾಡಿರೋದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಕನ್ನಡದ ಹಿರಿಯ ನಟರಿಗೆ, ಮೇರು ಕಲಾವಿದರಿಗೆ ಅವಮಾನ ಮಾಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ತೆಲುಗು ನಟನೊಬ್ಬ ಡಾ. ವಿಷ್ಣುವರ್ಧನ್ ಬಗ್ಗೆ ಸಲ್ಲದ ಆರೋಪ ಮಾಡಿ ನಂತರ ಕ್ಷಮೆ ಕೇಳಿದ್ದ.