ಕಾಂಗ್ರೆಸ್ ಮುಖಂಡನ ಉಚ್ಛಾಟನೆಗಾಗಿ ದೂರು

First Published 15, Jul 2018, 10:49 AM IST
Congress Leaders Complaint Against Vijayananda Kashappanavar
Highlights

ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮಾಜಿ ಶಾಸಕರೋರ್ವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ದೂರು ನೀಡಿದ್ದಾರೆ. 

ಬೆಂಗಳೂರು :  ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ದೂರು ನೀಡಿದ್ದಾರೆ. 

ತಮ್ಮ ಜಿಲ್ಲೆಗಳ ಪದಾಧಿಕಾರಿ ಗಳ ಸಭೆ ಬೇರೆ ದಿನ ನಿಗದಿಯಾಗಿ ತ್ತಾದರೂ ಶನಿವಾರ ಸಭೆಗೆ ಆಗಮಿಸಿದ ಮೂರೂ ಜಿಲ್ಲೆಗಳ ಕೆಲ ಪದಾಧಿಕಾರಿಗಳು, ವಿಜಯಾನಂದ ಕಾಶಪ್ಪನವರ್ ತಮ್ಮದೇ ತಪ್ಪುಗಳಿಂದ ಈ ಬಾರಿಯ ಚುನಾವಣೆಯಲ್ಲಿ ಸೋಲನು ಭವಿಸಿದ್ದಾರೆ. 

ಆದರೆ, ಅನಗತ್ಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ .ಪಾಟೀಲ್ ಅವರು ನನ್ನ ಸೋಲಿಗೆ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಅವರ ಈ ವರ್ತ ನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

loader