ಹಿಜಾಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಚ್‌ನ ದ್ವಿ ಸದಸ್ಯ ಪೀಠ ವಿಭಿನ್ನ ಆದೇಶ ನೀಡಿರುವ ಬಗ್ಗೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಬಿಜೆಪಿ ಸಮಾವೇಶದ ಬಗ್ಗೆ ಕೂಡ ಮಾತನಾಡಿದ್ದಾರೆ.
ಬೆಂಗಳೂರು (ಅ.13): ಹಿಜಾಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಚ್‌ನ ದ್ವಿ ಸದಸ್ಯ ಪೀಠ ವಿಭಿನ್ನ ಆದೇಶ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಸುಪ್ರೀಂ ಕೋರ್ಟ್ ಹಿಜಾಬ್ ಸಂಬಂಧಿಸಿದಂತೆ ಎರಡು ತೀರ್ಪು ನೀಡಿದ್ದಾರೆ. ಒಬ್ಬ ನ್ಯಾಯಮೂರ್ತಿ ವಿದ್ಯಾರ್ಥಿಗಳಿಗೆ ಆಯ್ಕೆ ಕೊಡಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಜಡ್ಜ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಮೇಲ್ಮನವಿ ಹೋಗಿದ್ದಾರೆ. ನಮಗೆ ಕಾನೂನಿನಲ್ಲಿ ವಿಶ್ವಾಸವಿದೆ. ಈ ದೇಶದ ಏಕತೆ, ಸಮಗ್ರತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ವ್ಯವಸ್ಥೆ ವಂಚಿತವಾಗದಂತೆ ವಿದ್ಯಾರ್ಥಿಗಳು ಪರ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಭಾರತ್ ಜೋಡೊ ಯಾತ್ರೆ ಬಗ್ಗೆ; ರಾಹುಲ್ ಜೀಯವರ ಭಾರತ್ ಜೋಡೊ ಯಾತ್ರೆಯ ಯಶಸ್ಸನ್ನು ಬಿಜೆಪಿಯವರಿಗೆ ಸಹಿಸೋಕೆ ಆಗ್ತಿಲ್ಲ. ರಾಹುಲ್ ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರ ಮಾಡ್ತಿದ್ದಾರೆ. ರಾಹುಲ್‌ಜಿ ಅದ್ಯಾವುದನ್ನು ತಲೆಗೆ ತೆಗೆದುಕೊಳ್ಳುತ್ತಿಲ್ಲ. ಯಾತ್ರೆ ಆರಂಭಕ್ಕೂ ಮುನ್ನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಅಪಪ್ರಚಾರ ಮಾಡಿದ್ರು. ಆದ್ರೆ ಜನ ಅದಕ್ಕೆ ಕ್ಯಾರೆ ಎನ್ನದೆ ಯಾತ್ರೆಗೆ ಬರ್ತಿದ್ದಾರೆ. ರಾಹುಲ್ ಬಗ್ಗೆ ಬಿಎಸ್‌ವೈ ಹೇಳಿಕೆ ಕೊಟ್ಟ ಅಪ ಪ್ರಚಾರ ದ ಪರದೆಯನ್ನು ದೇಶದ ಜನ ಕಿತ್ತೊಗೆಯುತ್ತಾರೆ. ಇದಕ್ಕೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ರಾಹುಲ್ ಬದ್ದತೆ ಬಗ್ಗೆ ಯಾರು ಪ್ರಶ್ನಿಸುವಂತಿಲ್ಲ. ರಾಹುಲ್‌ರನ್ನ ಲೈಟಾಗಿ ತೆಗೆದುಕೊಳ್ಳಬೇಡಿ ಎಂದು ಸ್ವತಃ ಆರ್‌ಎಸ್‌ಎಸ್ ಮುಖ್ಯಸ್ಥರೇ ಹೇಳಿದ್ದಾರೆ. ಈ ದೇಶದ ಜನ ರಾಹುಲ್ ಜೊತೆ ಇದ್ದಾರೆ ಎಂದರು.
ಮೀಸಲಾತಿ ಘೋಷಣೆ ನಂತರ ಯುದ್ಧೋತ್ಸಾಹದಲ್ಲಿ ಬಿಜೆಪಿ..!
ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂಬ ಬಿಜೆಪಿ ಟೀಕೆ ವಿಚಾರಕ್ಕೆ ಸಬಂಧಿಸಿದಂತೆ ಮಾತನಾಡಿದ ಯುಟಿ ಖಾದರ್ , ಸಣ್ಣ ಮಕ್ಕಳ ಹಾಗೆ ಇವರಿಗೆ ಯಾಕೆ ಟೆನ್ಶನ್, ರಾಹುಲ್ ಗಾಂಧಿ ಯಾರ ಜೊತೆ ಬೇಕಾದ್ರೂ ಓಡಲಿ ಇವರಿಗೇನು? ಇವರಿಗಿನ್ನು ಸಚಿವ ಸಂಪುಟ ಭರ್ತಿ ಮಾಡೋಕೆ ಆಗಿಲ್ಲ. ನಾಳೆ ಸರ್ಕಾರ ಬೀಳಲಿದೆ ಎಂಬ ಭಯದಿಂದ ಸರ್ಕಾರ ತುಂಬಲು ಆಗಿಲ್ಲ. ಇಂದು ಸರ್ಕಾರದ ಸವಲತ್ತುಗಳನ್ನು ಜನರಿಗೆ ನೀಡುವ ಯೋಗ್ಯತೆ ಸರ್ಕಾರಕ್ಕಿಲ್ಲ. ಈ ಯೋಗ್ಯತೆ ಇಲ್ಲದವರು ರಾಹುಲ್,ಡಿಕೆಶಿ,ಸಿದ್ದರಾಮಯ್ಯ ಬಗ್ಗೆ ಯಾಕೆ ಮಾತನಾಡಬೇಕು. ನಮ್ಮ ಒಗ್ಗಟಿನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ನಿರ್ಧಾರ ಕೊಡ್ತಾರೆ ಎಂದು ಖಾರವಾಗಿ ಪ್ರತಿಕ್ರಯಿಸಿದರು.
Hijab Case: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬ್ಯಾನ್ ಮುಂದುವರಿಯುತ್ತೆ!
ಸಿಎಂ,ಬಿಎಸ್‌ವೈ ಒಟ್ಟಾಗಿ ಸಮಾವೇಶ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಖಾದರ್, ಅವರ ಯಾತ್ರೆಯ ಬಗ್ಗೆ ಏನು ಹೇಳುವುದಿಲ್ಲ. ಏನು ಬೇಕಾದ್ರೂ ಮಾಡಲಿ. ಜವಾಬ್ದಾರಿಯುತ ಸರ್ಕಾರ ನಿರ್ವಹಿಸಲಿ. ಬಿಎಸ್‌ವೈ, ಸಿಎಂ ಅಲ್ಲದೇ ಇನ್ನೂ 10 ಜನರನ್ನು ಸೇರಿಸಿಕೊಂಡು ಸಮಾವೇಶ ಮಾಡಿದ್ರೂ ಕಾಂಗ್ರೆಸ್‌ಗೆ ತೊಂದರೆಯಿಲ್ಲ ಎಂದರು.
