ಬೆಂಗಳೂರು [ಅ.26]:  ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಹೈನೋದ್ಯಮಕ್ಕೆ ಮಾರಕ ಹೊಡೆತ ನೀಡುವ ಸಾಧ್ಯತೆಯುಳ್ಳ ಆಸಿಯಾನ್‌ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ತರಾತುರಿಯಲ್ಲಿ ಸಹಿ ಹಾಕದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಆಸಿಯಾನ್‌ ದೇಶಗಳ ನಡುವಿನ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಅಡಿಯಲ್ಲಿನ ಮುಕ್ತ ವ್ಯಾಪಾರ ಒಪ್ಪಂದದ ಅಂಶಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಗ್ರಾಮೀಣ ಆರ್ಥಿಕ ತಜ್ಞರು, ವಿಷಯ ತಜ್ಞರೊಂದಿಗೆ ವಿಶದವಾದ ಚರ್ಚೆ ನಡೆಸಿ ಜನಾಭಿಪ್ರಾಯ ರೂಪಿಸಬೇಕು. ಆ ನಂತರವೇ ಈ ದಿಸೆಯಲ್ಲಿ ಸರ್ಕಾರ ಹೆಜ್ಜೆಯಿಡಬೇಕು. ಈ ರೀತಿ ಮಾಡದೇ ಗೌಪ್ಯವಾಗಿಯೇನಾದರೂ ಸರ್ಕಾರ ಒಪ್ಪಂದಕ್ಕೆ ಮುಂದಾದರೆ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ, ಈ ಒಪ್ಪಂದದ ವ್ಯಾಪ್ತಿಯಿಂದ ಹೈನೋದ್ಯಮವನ್ನು ಹೊರಗಿಡುವಂತೆ ಪ್ರಧಾನಿಗಳ ಮೇಲೆ ಒತ್ತಡ ತರಲು ಸಂಸದರ ನಿಯೋಗ ಒಯ್ಯುವುದಾಗಿ ಹೇಳಿರುವ ಯಡಿಯೂರಪ್ಪ ಅವರು, ಸರ್ವ ಪಕ್ಷಗಳ ನಾಯಕರ ಸಭೆ ಕರೆಯಬೇಕು ಹಾಗೂ ಈ ನಾಯಕರ ನಿಯೋಗವನ್ನು ಪ್ರಧಾನಿ ಬಳಿಗೆ ಒಯ್ಯಬೇಕು ಎಂದು ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಷ್ಯಾದ 10 ಆಸಿಯಾನ್‌ ರಾಷ್ಟ್ರ (ಬ್ರೂನೈ, ಕಾಂಬೋಡಿಯಾ, ಸಿಂಗಾಪುರ, ಫಿಲಿಪ್ಪೀನ್ಸ್‌, ಇಂಡೋನೇಷಿಯಾ, ಲಾವೋಸ್‌, ಥಾಯ್ಲೆಂಡ್‌, ಮಲೇಷಿಯಾ, ವಿಯೆಟ್ನಾಂ, ಮ್ಯಾನ್ಮಾರ್‌) ಹಾಗೂ ಈ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಆಸ್ಪ್ರೇಲಿಯಾ, ಭಾರತ, ಚೀನಾ, ಜಪಾನ್‌, ಕೊರಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳ ನಡುವೆ ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ ಅಡಿಯಲ್ಲಿ ನಡೆಯಲಿರುವ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ನವೆಂಬರ್‌ 4ರಂದು ಸಹಿ ಹಾಕಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಒಪ್ಪಂದಕ್ಕೆ ಸಹಿ ಆದರೆ 16 ದೇಶಗಳು ಶೇ.80ರಿಂದ 90ರಷ್ಟುಸರಕುಗಳನ್ನು ಯಾವುದೇ ಆಮದು ಸುಂಕ ಇಲ್ಲದೆ ಆಮದು ಮಾಡಿಕೊಳ್ಳಬಹುದಾಗಿದೆ. ಈ ವ್ಯಾಪಾರ ಒಪ್ಪಂದ ಮುಂದಿನ ದಿನಗಳಲ್ಲಿ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ ಎಂದರು.

ಏನಿದು RCEP ಚರ್ಚೆ? ಯಾರಿಗೆ ಲಾಭ, ಯಾರಿಗೆ ನಷ್ಟ?: ಸಿದ್ದರಾಮಯ್ಯ ಬರೀತಾರೆ.......

ಈ ಗುಂಪಿನಲ್ಲಿರುವ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತವೆ. ಇದರಿಂದಾಗಿ ಕೇವಲ ಹೈನುಗಾರಿಕೆ ಮಾತ್ರವಲ್ಲ. ಗದ್ದೆಯ ಮತ್ತು ತೋಟದ ಬೆಳೆಗಳು, ಸಾಂಬಾರ್‌ ಪದಾರ್ಥಗಳು ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮೇಲೆಯೂ ಒಪ್ಪಂದ ಪರಿಣಾಮ ಬೀರಲಿದೆ. ಔಷಧಿಗಳ ಬೆಲೆ ಕೂಡ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

10 ಕೋಟಿ ಹೈನೋದ್ಯಮಿಗಳಿಗೆ ಸಂಕಷ್ಟ:

ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಮಾಡಿದರೆ ದೇಶದ ಸುಮಾರು 10 ಕೋಟಿ ಹೈನೋದ್ಯಮಿಗಳ ಬದುಕು ಬೀದಿ ಪಾಲಾಗಲಿದೆ. ಕರ್ನಾಟಕದಲ್ಲೇ 1.5 ಕೋಟಿ ಜನರು ಹೈನೋದ್ಯಮವನ್ನು ಅವಲಂಬಿಸಿದ್ದಾರೆ. ರಾಜ್ಯದ ಹಾಲು ಉತ್ಪಾದನಾ ಸಂಘಗಳಲ್ಲಿ 25 ಲಕ್ಷ ಮಂದಿ ಸದಸ್ಯರಿದ್ದಾರೆ. ಈ ಪೈಕಿ 9 ಲಕ್ಷ ಮಂದಿ ಮಹಿಳೆಯರು. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಶಕ್ತಿ ತಂದುಕೊಟ್ಟಿರುವ ಉದ್ಯಮವಿದು. ಇಂತಹ ಉದ್ಯಮವನ್ನು ಹಾಳುಗೆಡಹುವ ಈ ಒಪ್ಪಂದಕ್ಕೆ ಕೇಂದ್ರ ಯಾವುದೇ ಕಾರಣಕ್ಕೂ ಸಹಿ ಮಾಡಬಾರದು ಎಂದು ಆಗ್ರಹಿಸಿದರು.

ಹಾನಿ ಬಗ್ಗೆ ರೈತರು ಎಚ್ಚೆತ್ತುಕೊಳ್ಳಿ:

ಆಮದು ಉತ್ಪನ್ನಗಳಿಂದ ಈಗಾಗಲೇ ರಾಜ್ಯದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಚೀನಾದಿಂದ ರೇಷ್ಮೆ ಉತ್ಪನ್ನಗಳ ಆಮದಿನಿಂದ ದೇಶದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯದ ರೈತರು ಸಂಕಷ್ಟಅನುಭವಿಸುತ್ತಿದ್ದಾರೆ. ವಿಯೆಟ್ನಾಂ ಹಾಗೂ ಕಾಂಬೋಡಿಯಾದಿಂದ ಸಾಂಬಾರ್‌ ಪದಾರ್ಥಗಳನ್ನು ಆಮದು ಮಾಡಿಕೊಂಡು ರಾಜ್ಯದ ಸಾಂಬಾರು ಪದಾರ್ಥಗಳ ಬೆಲೆ ಕುಸಿದಿದೆ. ಕ್ಷೀರ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದೀಗ ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ವಿದೇಶಗಳಿಂದ ಸುಂಕರಹಿತವಾಗಿ ಕ್ಷೀರ ಉತ್ಪನ್ನಗಳ ಆಮದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂಲಕ ಹೈನುಗಾರಿಕೆ ನೆಚ್ಚಿಕೊಂಡ ರೈತರ ಬೆನ್ನೆಲುಬು ಮುರಿಯಲು ಕೇಂದ್ರ ಸರ್ಕಾರ ಸಜ್ಜಾಗಿದೆ.ಈ ಬಗ್ಗೆ ನಾಡಿನ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಪ್ರತಿಯೊಬ್ಬರೂ ವಿರೋಧಿಸಬೇಕು:

ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ಶೇ.95ರಷ್ಟುಕೃಷಿ ಉತ್ಪನ್ನ, ಕ್ಷೀರೋತ್ಪನ್ನ ಹಾಗೂ ಸಾಂಬಾರು ಪದಾರ್ಥಗಳನ್ನು ವಿದೇಶಗಳಿಂದ ಸುಂಕರಹಿತವಾಗಿ ಆಮದು ಮಾಡಿಕೊಳ್ಳುವ, ತನ್ಮೂಲಕ 10 ಕೋಟಿಗೂ ಹೆಚ್ಚು ರೈತರ ಬದುಕು ಮುಳುಗಿಸುವ ಆಘಾತಕಾರಿ ಒಪ್ಪಂದಕ್ಕೆ ಸಹಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ, ಜನರು ಕೇಂದ್ರ ಸರ್ಕಾರದ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯದ ಪ್ರತಿಯೊಬ್ಬರೂ ವಿರೋಧಿಸಬೇಕಾಗುತ್ತದೆ. ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಮುಕ್ತ ವ್ಯಾಪಾರ ಒಪ್ಪಂದಕ್ಕೆ ನನ್ನ ಸಂಪೂರ್ಣ ವಿರೋಧವಿಲ್ಲ. ಆದರೆ ಕರಡು ಪ್ರತಿಯನ್ನು ಸಾರ್ವಜನಿಕರ ಸಲಹೆಗಳಿಗಾಗಿ ಬಿಡುಗಡೆ ಮಾಡಬೇಕು. ಯಾವುದೇ ಚರ್ಚೆಗಳಿಲ್ಲದೆ ಕೃಷಿ ಉತ್ಪನ್ನ, ಕ್ಷೀರೋತ್ಪನ್ನ, ಸಾಂಬಾರು ಪದಾರ್ಥ ಸೇರಿದಂತೆ ಹಲವು ರೀತಿಯ ಉತ್ಪನ್ನಗಳನ್ನು ಸುಂಕರಹಿತ ಹಾಗೂ ಕಡಿಮೆ ಸುಂಕದಲ್ಲಿ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದರಿಂದ ದೇಶದ ರೈತರು ಬೀದಿಗೆ ಬೀಳಲಿದ್ದಾರೆ. ಹೀಗಾಗಿ, ಕೃಷಿ, ಕ್ಷೀರ, ಸಾಂಬಾರು ಪದಾರ್ಥ ಹಾಗೂ ಬೀಜ ಕಂಪನಿಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಪ್ಪಂದದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.

10 ಕೋಟಿ ಹೈನೋದ್ಯಮಿಗಳಿಗೆ ಸಂಕಷ್ಟ:

ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಮಾಡಿದರೆ ದೇಶದ ಸುಮಾರು 10 ಕೋಟಿ ಹೈನೋದ್ಯಮಿಗಳ ಬದುಕು ಬೀದಿ ಪಾಲಾಗಲಿದೆ. ಕರ್ನಾಟಕದಲ್ಲೇ 1.5 ಕೋಟಿ ಜನರು ಹೈನೋದ್ಯಮವನ್ನು ಅವಲಂಬಿಸಿದ್ದಾರೆ. ರಾಜ್ಯದ ಹಾಲು ಉತ್ಪಾದನಾ ಸಂಘಗಳಲ್ಲಿ 25 ಲಕ್ಷ ಮಂದಿ ಸದಸ್ಯರಿದ್ದಾರೆ. ಈ ಪೈಕಿ 9 ಲಕ್ಷ ಮಂದಿ ಮಹಿಳೆಯರು. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಶಕ್ತಿ ತಂದುಕೊಟ್ಟಿರುವ ಉದ್ಯಮವಿದು. ಇಂತಹ ಉದ್ಯಮವನ್ನು ಹಾಳುಗೆಡಹುವ ಈ ಒಪ್ಪಂದಕ್ಕೆ ಕೇಂದ್ರ ಯಾವುದೇ ಕಾರಣಕ್ಕೂ ಸಹಿ ಮಾಡಬಾರದು ಎಂದು ಆಗ್ರಹಿಸಿದರು.

ವಿಶ್ವದಲ್ಲೇ ಹೈನೋದ್ಯಮದಲ್ಲಿ ನ್ಯೂಜಿಲೆಂಡ್‌ ಹಾಗೂ ಆಸ್ಪ್ರೇಲಿಯಾ ಮುಂಚೂಣಿ ದೇಶಗಳಾಗಿವೆ. ಈ ದೇಶಗಳಲ್ಲಿ ಮಿತಿ ಮೀರಿ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಪ್ರಸ್ತುತ ಶೇ. 25ರಷ್ಟುಅಮದು ಸುಂಕವಿದೆ. ಈ ಸುಂಕವನ್ನು ತೆಗೆದು ಹಾಕಿದರೆ ಈ ದೇಶಗಳ ಹಾಲು ಹಾಗೂ ಹಾಲಿನ ಉಪ ಉತ್ಪನ್ನಗಳು ಅತ್ಯಂತ ಅಗ್ಗದ ದರದಲ್ಲಿ ಭಾರತ ಪ್ರವೇಶಿಸುತ್ತವೆ. ಈ ಪೈಪೋಟಿಯನ್ನು ಭಾರತೀಯ ಹೈನೋದ್ಯಮಿಗಳು ಎದುರಿಸಲು ಸಾಧ್ಯವೇ ಇಲ್ಲ. ಜಿಡಿಪಿ ಹಾಗೂ ನೋಟು ಅಪನಗದೀಕರಣದಿಂದ ಈಗಾಗಲೇ ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಈ ಪೈಪೋಟಿಯು ಆರಂಭವಾದರೇ ದೇಶದ ಜಿಡಿಪಿ ಮತ್ತಷ್ಟುಕುಸಿಯಲಿದೆ ಎಂದು ಅವರು ಎಚ್ಚರಿಸಿದರು.

ಗೋಪಾಲಕರಿಗೆ ಶಿಕ್ಷಿಸುತ್ತೀರಾ?:

ಪ್ರಸ್ತುತ ವಿದೇಶಿ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ಮಾತ್ರ ಹೈನುಗಾರಿಕೆಯ ಕ್ಷೇತ್ರ ಪ್ರವೇಶಿಸಲು ಸಾಧ್ಯ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ವಿಶ್ವದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ಇಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿವೆ. ಇದರಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ನಮ್ಮ ಹಾಲಿನ ಒಕ್ಕೂಟಗಳು ನಾಶವಾಗಲಿವೆ. ನಮ್ಮ ಅಸಹಾಯಕ ರೈತರು ಈ ವಿದೇಶಿ ಕಂಪನಿಗಳ ಜೀತದಾರರಾಗಲಿದ್ದಾರೆ. ಭಾರತದಲ್ಲಿ ಹಸು-ಎಮ್ಮೆಗಳನ್ನು ಮನೆ ಸದಸ್ಯರಂತೆ ಲಾಲನೆ-ಪಾಲನೆ ಮಾಡುತ್ತಾರೆ. ಗೋವನ್ನು ದೇವರೆಂದು ಪೂಜಿಸುತ್ತೇವೆ ಎಂದು ಹೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಪರಿವಾರದ ನಾಯಕರು ಗೋವುಗಳನ್ನು ಪ್ರೀತಿ-ಕಾಳಜಿಯಿಂದ ಸಾಕುತ್ತಿರುವುದಕ್ಕಾಗಿಯೇ ಜನರನ್ನು ಶಿಕ್ಷಿಸಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದರು.