Asianet Suvarna News Asianet Suvarna News

ಮಲ್ಯ ಪರ ವಾದಿಸಿದ ಕಾಂಗ್ರೆಸ್‌ ನಾಯಕ ಚಿದಂಬರಂ!

ಅತ್ತ ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೋದಿಯನ್ನು ಟೀಕಿಸುತ್ತ೬ಇದೆ. ಹೀಗಿರುವಗಲೇ ಇತ್ತ ಇತ್ತ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಲ್ಯ ಬಚಾವಿಗೆ ಯತ್ನ ನಡೆಸಿ, ಹೈ ಕೋರ್ಟ್‌ನಲ್ಲಿ ಅವರ ಪರ ವಾದಿಸಿದ್ದಾರೆ.

Congress leader P Chidambaram argued in favour of Vijay Mallya in high court of karnataka
Author
Bangalore, First Published Nov 29, 2018, 8:45 AM IST
  • Facebook
  • Twitter
  • Whatsapp

ಬೆಂಗಳೂರು[ನ.29]: ದೇಶದ ಬ್ಯಾಂಕ್‌​ಗ​ಳಿಗೆ ಕೋಟ್ಯಂತರ ರು. ವಂಚನೆ ಮಾಡಿದ ಮದ್ಯದ ದೊರೆ ವಿಜಯ ಮಲ್ಯ ವಿದೇ​ಶಕ್ಕೆ ಪರಾ​ರಿ​ಯಾ​ಗಲು ನೆರವು ನೀಡಿ​ದ್ದಾರೆ ಎಂದು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷ ತೀವ್ರ ವಾಗ್ದಾಳಿ ನಡೆ​ಸು​ತ್ತಿ​ರು​ವಾ​ಗಲೇ, ಕಾಂಗ್ರೆ​ಸ್‌ನ ಪ್ರಮುಖ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಅವರು ಮಲ್ಯ ಪರ​ವಾಗಿ ಬುಧ​ವಾರ ಹೈಕೋ​ರ್ಟ್‌​ನಲ್ಲಿ ವಾದ ಮಂಡನೆ ಮಾಡಿ​ದ​ರು.

ಮಲ್ಯ ಅವರ ಯುನೈಟೆಡ್‌ ಸ್ಪಿರಿಟ್‌ ಲಿಮಿಟೆಡ್‌ (ಯುಎಸ್‌ಎಲ್‌) ಕಂಪನಿ ತಾನು ಪಡೆದ ಸಾಲವನ್ನು ಮರುಪಾವತಿ ಮಾಡಿದ್ದರೂ ಐಡಿಬಿಐ ಬ್ಯಾಂಕ್‌ ವಿಜಯ್‌ ಮಲ್ಯ ಅವರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಾಲ ಋುಣಮುಕ್ತ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ಯುಎಸ್‌ಎಲ್‌ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಪ್ರಕ​ರ​ಣ​ದಲ್ಲಿ ಯುಎಸ್‌ಎಲ್‌ ಪರ ವಾದ ಮಂಡಿಸಿದ ಪಿ.ಚಿದಂಬರಂ, ಯುಎಸ್‌ಎಲ್‌ ಪ್ರತ್ಯೇಕ ಕಂಪನಿ. ಯುುಎಸ್‌ಎಲ್‌ಗೂ ವಿಜಯ್‌ ಮಲ್ಯ ಅವರ ಇತರ ಪ್ರಕರಣಗಳಿಗೂ ಸಂಬಂಧವಿಲ್ಲ. ಮಲ್ಯ ಯುಎಸ್‌ಎಲ್‌ನಲ್ಲಿ ಕೇವಲ ಶೇ.2ರಷ್ಟು ಷೇರು ಹೊಂದಿದ್ದಾರೆ. ವಿಜಯ್‌ ಮಲ್ಯ ಕಿಂಗ್‌ಫಿಷರ್‌ ವಿಮಾನಯಾನ ಕಂಪನಿಗಾಗಿ ಐಡಿಬಿಐನಿಂದ ಸಾಲ ಪಡೆದಿದ್ದರು. ಆಗ ಯುಎಸ್‌ಎಲ್‌ಗೂ ವಿಜಯ್‌ ಮಲ್ಯ ಅಧ್ಯಕ್ಷರಾಗಿದ್ದರು.

ಯುಎಸ್‌ಎಲ್‌ ತಾನು ಪಡೆದಿದ್ದ ಎಲ್ಲ ಸಾಲವನ್ನೂ ತೀರಿಸಿದೆ. ಆದರೂ ಐಡಿಬಿಐ ಬ್ಯಾಂಕ್‌ ಯುಎಸ್‌ಎಲ್‌ ಕಂಪನಿಗೆ ಸಾಲ ಋುಣಮುಕ್ತ ಪತ್ರ ನೀಡುತ್ತಿಲ್ಲ ಎಂದು ವಾದಿ​ಸಿ​ದರು. ಅಲ್ಲದೆ, ಸಾಲ ಪಾವತಿಸಿರುವ ಹಿನ್ನೆಲೆಯಲ್ಲಿ ಯುಎಸ್‌ಎಲ್‌ ಕಂಪನಿಯನ್ನು ಸಾಲದ ಹೊಣೆಯಿಂದ ಬಿಡುಗಡೆಗೊಳಿಸುವಂತೆ ಐಡಿಬಿಐಗೆ ನಿರ್ದೇಶನ ನೀಡಬೇಕು ಎಂದು ಪಿ.ಚಿದಂಬರಂ ಕೋರಿದರು.

ಈ ವಾದಕ್ಕೆ ಆಕ್ಷೇಪಿಸಿದ ಐಡಿಬಿಐ ಪರ ವಕೀಲರು, ಸಾಲ ನೀಡುವಾಗ ವಿಜಯ್‌ ಮಲ್ಯ ಯುಎಸ್‌ಎಲ್‌ ಅಧ್ಯಕ್ಷರಾಗಿದ್ದರು. ಹೀಗಾಗಿಯೇ ಕಿಂಗ್‌ಫಿಷರ್‌ ವಿಮಾನಯಾನ ಸಂಸ್ಥೆಗೆ ಸಾಲ ನೀಡಿದ್ದೇವೆ. ಆ ಸಾಲಕ್ಕೆ ಯುಎಸ್‌ಎಲ್‌ ಕಾರ್ಪೊರೇಟ್‌ ಗ್ಯಾರಂಟಿ ನೀಡಿದೆ. ಆದ್ದರಿಂದ ಸಾಲದ ಹೊಣೆಯಿಂದ ಬಿಡುಗಡೆ ಮಾಡಲಾಗದು ಎಂದು ತಿಳಿಸಿದರು.

ನಂತರ ಹೆಚ್ಚಿನ ವಾದ ಮಂಡನೆಗೆ ಐಡಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

ರಾಜಕೀಯ ಬೇರೆ, ವೃತ್ತಿಯೇ ಬೇರೆ:

ಐಡಿಬಿಐ ಬ್ಯಾಂಕ್‌ ಹಾಗೂ ಕಿಂಗ್‌ಫಿಷರ್‌ ನಡುವಿನ ಪ್ರಕರಣದಲ್ಲಿ ಪಿ.ಚಿದಂಬರಂ ಅವರು ವೃತ್ತಿಪರ ವಕೀಲರಾಗಿ ಬಂದು ಕಿಂಗ್‌ಫಿಷರ್‌ ಪರ ವಾದ ಮಂಡಿಸಿದ್ದಾರೆ. ವೃತ್ತಿಯೇ ಬೇರೆ ರಾಜಕಾರಣವೇ ಬೇರೆ. ಕಕ್ಷೀದಾರರು ತಮ್ಮ ಬಳಿಗೆ ಬಂದು ನೀಡುವ ಮಾಹಿತಿ ಆಧಾರದ ಮೇಲೆ ಅವರಿಗೆ ಸರಿ ಎನಿಸಿದವರ ಪರ ವಾದಿಸಲು ವಕೀಲರು ಒಪ್ಪುತ್ತಾರೆ. ಇದು ಅವರ ವೃತ್ತಿಗೆ ಸಂಬಂಧಿಸಿದ ವಿಷಯವೇ ಹೊರತು ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸರ್ಕಾರವು ಮೈಸೂರು ಅರಮನೆಯ ಆಸ್ತಿ ವಶಪಡಿಸಿಕೊಂಡ ಬಗ್ಗೆ ಸರ್ಕಾರ ಹಾಗೂ ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ನಡುವಿನ ಪ್ರಕರಣದಲ್ಲಿ ಶ್ರೀಕಂಠದತ್ತ ಒಡೆಯರ್‌ ಪರವಾಗಿಯೂ ಪಿ.ಚಿದಂಬರಂ ವಾದ ಮಂಡಿಸುತ್ತಿದ್ದಾರೆ. ಇದರಲ್ಲಿ ವಿಶೇಷವೇನೂ ಇಲ್ಲ.

- ಬಿ.ಎಲ್‌. ಶಂಕರ್‌, ಕೆಪಿಸಿಸಿ ಉಪಾಧ್ಯಕ್ಷ

ಕಾಂಗ್ರೆಸ್‌ ಪಕ್ಷವು ರಾಷ್ಟ್ರ​ಮ​ಟ್ಟ​ದಲ್ಲಿ ವಿಜಯ್‌ ಮಲ್ಯ ಅವ​ರು ವಿದೇ​ಶಕ್ಕೆ ಪರಾ​ರಿ​ಯಾ​ಗಲು ಕೇಂದ್ರ ಸರ್ಕಾರ ಅದ​ರಲ್ಲೂ ಮುಖ್ಯ​ವಾಗಿ ಪ್ರಧಾನ ಮಂತ್ರಿ ನರೇಂದ್ರ​ ಮೋದಿ ಅವರು ನೆರ​ವಾ​ಗಿ​ದ್ದಾರೆ ಎಂದು ಪದೇ ಪದೇ ಆರೋಪ ಮಾಡು​ತ್ತಿದೆ. ದೇಶದ ಬ್ಯಾಂಕ್‌​ಗಳ ಕೋಟ್ಯಂತರ ರು. ಸಾಲ ಮರು​ಪಾ​ವ​ತಿ​ಸದೆ ವಂಚಿ​ಸಿ​ರುವ ಮಲ್ಯ ಅವರ ಪರಾ​ರಿಗೆ ಕೇಂದ್ರದ ಹಣ​ಕಾಸು ಸಚಿವ ಜೇಟ್ಲಿ ಅವರು ಮೋದಿ ಅವರ ಅಣತಿ ಮೇರೆಗೆ ನೆರವು ನೀಡಿ​ದ್ದಾರೆ ಎಂದು ಆರೋ​ಪಿ​ಸು​ತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯ​ಕ​ರಾದ ಹಾಗೂ ಹಿಂದಿನ ಯುಪಿಎ ಸರ್ಕಾ​ರ​ದಲ್ಲಿ ಪ್ರಭಾವಿ ಸಚಿ​ವ​ರಾ​ಗಿದ್ದ ಪಿ.ಚಿದಂಬರಂ ಅವರು ಮಲ್ಯ ಪರ ನ್ಯಾಯಾ​ಲ​ಯ​ದಲ್ಲಿ ವಾದ ನಡೆ​ಸುತ್ತಿ​ರು​ವುದು ಹುಬ್ಬೇ​ರು​ವಂತೆ ಮಾಡಿದೆ. ಇದು ಕಾಂಗ್ರೆಸ್‌ ಪಕ್ಷದ ದ್ವಂದ್ವ ನೀತಿ​ಯನ್ನು ತೋರಿ​ಸು​ತ್ತದೆ. ಮಲ್ಯ ಅವ​ರನ್ನು ದೇಶಕ್ಕೆ ವಂಚನೆ ಮಾಡಿ​ದ​ವರು ಎನ್ನುವ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯ​ಕರೇ ಮಲ್ಯ ಪರ​ವಾಗಿ ವಾದ ನಡೆ​ಸುವ ಮೂಲಕ ನೀಡು​ತ್ತಿ​ರುವ ಸಂದೇ​ಶ​ವೇನು ಎಂದು ಪ್ರಶ್ನಿ​ಸಲಾಗು​ತ್ತಿದೆ.

Follow Us:
Download App:
  • android
  • ios