Asianet Suvarna News Asianet Suvarna News

ಶಕ್ತಿ, ಗೃಹಲಕ್ಷ್ಮೀ ಯೋಜನೆ ಪುರುಷರಿಗೂ ವಿಸ್ತರಿಸುವಂತೆ ವಾಟಾಳ್ ಪ್ರತಿಭಟನೆ

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಯೋಜನೆಗಳನ್ನು ಘೋಷಿಸಿದಂತೆ ಪುರುಷರಿಗೂ ಉಚಿತ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಇಂದು ಕನ್ನಡ ಒಕ್ಕೂಟ ನಾಯಕ, ಮಾಜಿ ಶಾಸಕ ಕನ್ನಡ ಚಳವಳಿಗಾರ ವಾಟಾಳ ನಾಗರಾಜ್ ಮೆಜೆಸ್ಟಿಕ್‌ನಲ್ಲಿ ಟಿಕೆಟ್ ಇಲ್ಲದೇ ಬಿಬಿಎಂಪಿ ಬಸ್ ಹತ್ತುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Congress guarantee scheme for men too Vatal Nagaraj protests against Govt at bengaluru rav
Author
First Published Oct 22, 2023, 1:15 PM IST

ಬೆಂಗಳೂರು (ಅ.22): ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಯೋಜನೆಗಳನ್ನು ಘೋಷಿಸಿದಂತೆ ಪುರುಷರಿಗೂ ಉಚಿತ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಇಂದು ಕನ್ನಡ ಒಕ್ಕೂಟ ನಾಯಕ, ಮಾಜಿ ಶಾಸಕ ಕನ್ನಡ ಚಳವಳಿಗಾರ ವಾಟಾಳ ನಾಗರಾಜ್ ಮೆಜೆಸ್ಟಿಕ್‌ನಲ್ಲಿ ಟಿಕೆಟ್ ಇಲ್ಲದೇ ಬಿಬಿಎಂಪಿ ಬಸ್ ಹತ್ತುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬಿಎಂಟಿಸಿ ಬಸ್ ನಿಲ್ದಾಣದ ಒಳಗಡೆ ಖಾಸಗಿ ಕಾರಿನಲ್ಲೇ ಬಂದಿಳಿದ ವಾಟಾಳ್ ನಾಗರಾಜ್. ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳು ಬರುವಂತಿಲ್ಲ.ಆದ್ರೂ ಬಸ್ ಒಳಗಡೆ ನುಗ್ಗಿದ ವಾಟಾಳ್ ನಾಗರಾಜ್.

ಮತ್ತೊಂದು ಹೋರಾಟಕ್ಕೆ ಮುಂದಾದ ವಾಟಾಳ್; ಇಂದು ಪುರುಷರ ಪರವಾಗಿ ಪ್ರತಿಭಟನೆ

ನಾಡಹಬ್ಬ ಮೈಸೂರು ದಸರಾ ಬಹಳ ಸುಂದರವಾದ ಉತ್ಸವ. ಈ ಸಂಭ್ರಮವನ್ನ ವಿನೂತನ ಚಳುವಳಿಗೆ ಉಪಯೋಗಿಸುತ್ತಿದ್ದೇವೆ. ಮೈಸೂರು ದಸರಾಗೆ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನ ಬರ್ತಾರೆ. ಕರ್ನಾಟಕದ ಮೂಲೆ ಮೂಲೆಯಿಂದಲೂ ಮಹಿಳೆಯರು ಪುರುಷರು ಅಧಿಕವಾಗಿ ಬರ್ತಾರೆ. ಹೀಗಾಗಿ ಈ ಸಂದರ್ಭವನ್ನು ನಾನು ಉಪಯೋಗಿಸಿಕೊಂಡಿದ್ದೇನೆ ಎಂದರು.

 ಸಿದ್ದರಾಮಯ್ಯ ಅವರ ಸರ್ಕಾರ ಧನಲಕ್ಷ್ಮಿ ಗೃಹಲಕ್ಷ್ಮಿ ಗೆ ನಾನಾ ರೀತಿಯ ಹೆಸರಿನಿಂದ ಕರೆಯುತ್ತಾರೆ. ಅದರಲ್ಲಿ ಮನೆಯ ಯಾಜಮಾನಿಗೆ ಗೃಹಲಕ್ಷ್ಮೀ ಅಂತಾ ಗ್ಯಾರಂಟಿ ಹಣ ಕೊಡುತ್ತಿದ್ದಾರೆ. ಮನೆ ಯಾಜಮಾನಿಗೆ ಹಣ ಕೊಟ್ಟಿದ್ದು ಬಹಳ ಸಂತೋಷ ಆದರೆ ಮನೆ ಯಾಜಮಾನನ ಪರಿಸ್ಥಿತಿ ಏನು? ಇದ್ರಿಂದಾಗಿ ಅವರು ಅವರು ತಲೆತಗ್ಗಿಸಬೇಕಾಗುತ್ತೆ. ಗಂಡಸರಿಗೆ ನೀವು ನೀವಾಗೇ ಅಪಮಾನ ಮಾಡುತ್ತಿದ್ದೀರಿ. ಸಿಎಂ ಸಿದ್ದರಾಮಯ್ಯ ಅವರಿಗೆ ಕಳಕಳಿ ಮನವಿ ಮಹಿಳೆಯರಿಗೆ ಗೃಹಲಕ್ಷ್ಮೀ ಕೊಡಿ. ಆದರೆ ಅದರ ಜೊತೆಗೆ ಯಜಮಾನನಿಗೂ ಅಷ್ಟೇ ಹಣವನ್ನು ಕೊಡಬೇಕು. ಇಡೀ ರಾಜ್ಯದ ಎಲ್ಲ ಪುರುಷರಿಗೂ ಗೃಹಲಕ್ಷ್ಮಿಯನ್ನ ವಿಸ್ತಾರ ಮಾಡುವಂತೆ ವಾಟಾಳ್ ನಾಗರಾಜ ಆಗ್ರಹಿಸಿದರು.

News Hour: ಬುರ್ಖಾ ಧರಿಸಿ ಪ್ರತಿಭಟಿಸಿದ ವಾಟಾಳ್‌, ಇದು ಹೆಂಗಸರ ಸರ್ಕಾರ ಎಂದ ಹೋರಾಟಗಾರರು!

ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದೆ.ಅದೇ ರೀತಿ ಪುರುಷರಿಗೂ  ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು. ನಿಮ್ಮ ಗ್ಯಾರಂಟಿ ಕೇವಲ ಹೆಂಗಸರಿಗೆ ಮಾತ್ರ ಸೀಮಿತವಾಗಿರಬಾರದು ಗಂಡಸರಿಗೂ ಹೋಗಬೇಕು ಎಂದು ಒತ್ತಾಯಿಸಿದರು ಈ ವೇಳೆ ಟಿಕೆಟ್ ಪಡೆಯದೇ ಬಿಎಂಟಿಸಿ ಹತ್ತುವ ಮೂಲಕ ಪ್ರತಿಭಟನೆ ನಡೆಸಿದರು. ಟಿಕೆಟ್ ಇಲ್ಲದೇ ಬಸ್ ಪ್ರಯಾಣಕ್ಕೆ ಮುಂದಾದ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದ ಪೊಲೀಸರು.

Follow Us:
Download App:
  • android
  • ios