ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದು ಎಲಲ್‌ಪಿಜಿ ಸಿಲಿಂಡರ್‌ ಬೆಲೆ ಕನಿಷ್ಠ 150 ರು. ಇಳಿಕೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ

ಬೆಂಗಳೂರು (ಸೆ.12): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದು ಎಲಲ್‌ಪಿಜಿ ಸಿಲಿಂಡರ್‌ ಬೆಲೆ ಕನಿಷ್ಠ 150 ರು. ಇಳಿಕೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. 

ಬಿಜೆಪಿ ಸರ್ಕಾರದ ಜನ ವಿರೋಧಿ ನೀರಿಗಳ ಒಂದು ಪ್ರಸ್ನೆ ಸರಣಿ ಆರಮಭಿಸಿರುವ ಅವರು ಕಳೆದ ಒಂದ ವಾರದಿಮದ ಆರಂಭವಾಗಿರುವ ಜನಪರ ವಿಚಾರಗಳ ಸರಣಿಯ ಭಾಗವಾಗಿ ಈ ವಾರ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ900 ರು. ಗಡಿ ತಲುಪಿದ್ದು ಬೀದರ್ ಜಿಲ್ಲೆಯಲ್ಲಿ ಶನಿವಾರ 956 ರು. ಆಗಿದೆ. 

ಕೋವಿಡ್ ಸಂಕಷ್ಟ, ಗ್ಯಾಸ್ ಬೆಲೆ ಏರಿಕೆ ನ್ಯಾಯಾನಾ.? ಜನರಿಂದ ಉತ್ತರದ ನಿರೀಕ್ಷೆಯಲ್ಲಿ ಡಿಕೆಶಿ

ರಿಲೀಫ್‌ ಸಿಲಿಂಡರ್‌ ಬೆಲೆ ಒಂದು ಸಾವಿರ ರು. ತಲುಪಬಹುದು. ದರ ಏರಿಕೆಯಿಂದ ಬಡ ಕುಟುಂಬಗಳಂತೂ ಮಕ್ಕಳ ಶಾಲಾ ಶುಲ್ಕ ಕಟ್ಟಬೇಕಾ ಅಥವಾ ಹೊಟ್ಟೆ ತುಂಬಿಸಿಕೊಳ್ಳಲು ಸಿಲಿಂಡರ್ ರಿಲೀಫ್‌ ಮಾಡಿಸಿಕೊಳ್ಳಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಸರ್ಕಾರ ಜನ ವಿರೋಧಿ ಮಾತ್ರವಲ್ಲ ಅಮಾನವೀಯ ಕೂಡ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯದ ಜನ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಈ ಹಂತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. 

ದೇಶದಲ್ಲಿ 29 ಕೋಟಿ ಗೃಹ ಬಳಕೆ ಎಲ್‌ಪಿಜಿ ಗ್ರಾಹಕರಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿಯೂ ನಿಂತು ಹೊಗಿದೆ. 

ಈ ಹಂತದಲ್ಲಿ ಅಡುಗೆ ಅನಿಲ ದರ ಕಡಿಮೆ ಮಾಡಬೇಕೆ ಬೇಡವೆ ಎಂದು ವಿಡಿಯೋ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಜನಾಬಿಪ್ರಾಯ ಕೇಳಿದ್ದಾರೆ. ದರ ಇಳಿಕೆಗೆ ಒತ್ತಾಯಿಸಿದ್ದಾರೆ.