60 ದಿನಗಳಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಬಯಲು: ಅಶ್ವತ್ಥನಾರಾಯಣಗೌಡ
ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಕೇವಲ 60 ದಿನಗಳಲ್ಲಿ ಇದರ ನಿಜ ಬಣ್ಣವು ಭ್ರಷ್ಟಾಚಾರ, ವರ್ಗಾವಣೆ ದಂಧೆ ಮೂಲಕ ಬಟಾಬಯಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಕಿಡಿಕಾರಿದರು.
ಮಂಡ್ಯ (ಆ.13) : ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಕೇವಲ 60 ದಿನಗಳಲ್ಲಿ ಇದರ ನಿಜ ಬಣ್ಣವು ಭ್ರಷ್ಟಾಚಾರ, ವರ್ಗಾವಣೆ ದಂಧೆ ಮೂಲಕ ಬಟಾಬಯಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಕಿಡಿಕಾರಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿN Chaluvarayaswamy ಅವರ ರಾಜೀನಾಮೆಗೆ ಆಗ್ರಹಿಸಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬಿಜೆಪಿ ನಡೆಸುತ್ತಿರುವ ಆಹೋರಾತ್ರಿ ಧರಣಿಯು ಭಾನುವಾರಕ್ಕೆ ಮೂರು ದಿನ ಪೂರೈಸಿದ್ದು, ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಅಶ್ವತ್ಥ ನಾರಾಯಣ, ಸಚಿವ ಬೈರತಿ ಸುರೇಶ್ ‘ಚಿಲುಮೆ ವಾಗ್ವಾದ
ಕಾಂಗ್ರೆಸ್ ಸರ್ಕಾರದ್ದು ಒಂದು ರೀತಿಯ ಪವರ್ ಸೆಂಟರ್ ಆಗಿದೆ. ಸಿದ್ದರಾಮಯ್ಯ(Siddaramaiah)ನವರದ್ದು ಒಂದು ಕಡೆ ಪವರ್ ಸೆಂಟರ್ ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ಒಂದು ಕಡೆ ಪವರ್ ಸೆಂಟರ್ ಆಗಿ ಹೋಗಿದೆ. ವರ್ಗಾವಣೆ ದಂಧೆಯೇ ಪವರ್ ಸೆಂಟರ್‌ನ ಮೂಲವಾಗಿದೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ ಕೂಡ ವರ್ಗಾವಣೆ ಪವರ್ ಸೆಂಟರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆಯಕಟ್ಟಿನ ಕಡೆ ಭೈರತಿ ಸುರೇಶ್ ಕೂಡ ಒಂದು ಕಡೆ ಲಾಭಿ ಮಾಡುತ್ತಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಸರ್ಕಾರದ ನಿಜ ಬಣ್ಣ ಬಯಾಲಗಿದೆ ಎಂದರು.
ವಿಶೇಷವಾಗಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಎನ್.ಚಲುವರಾಸ್ವಾಮಿ ಅವರು ವರ್ಗಾವಣೆಯಲ್ಲಿ ನೇರವಾಗಿ ಭಾಗವಹಿಸಿ ಸಾರಿಗೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ, ಇವರ ಹೆಸರನ್ನ ಒಬ್ಬ ಡ್ರೈವರ್ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ. ಇದು ಎಷ್ಟರ ಮಟ್ಟಕ್ಕೆ ಈ ಜಿಲ್ಲೆಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವುದು ಸಾಬೀತಾಗಿದೆ. ಚಲವವರಾಯಸ್ವಾಮಿ ಅವರು ತಮ್ಮ ಇಲಾಖೆಯ ಮೂಲಕವೇ ಹಪ್ತಾ ವಸೂಲಿ ಮಾಡುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದರೆ, ಈ ಸರ್ಕಾರ ನೇರವಾಗಿ ವಸೂಲಿಗೆ ಇಳಿದಿದೆ ಎಂದು ಆರೋಪಿಸಿದರು.
ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ; ಎಚ್ ವಿಶ್ವನಾಥ್ ಭವಿಷ್ಯ
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ವಿದ್ಯಾ ನಾಗೇಂದ್ರ, ಎಚ್.ಆರ್.ಅರವಿಂದ್, ಅಶೋಕ್ ಜಯರಾಂ, ಪ.ನಾ.ಸುರೇಶ್, ಸುಜಾತ ರಮೇಶ್, ವಿವೇಕ್, ಡಾ.ಸದಾನಂದ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಸಿದ್ದರಾಜುಗೌಡ, ಲಕ್ಷ್ಮೀ, ಮಂಜುಳಾ, ರಮೇಶ್, ಹರ್ಷ ಅಂಚೆದೊಡ್ಡಿ ಭಾಗವಹಿಸಿದ್ದರು.