Asianet Suvarna News Asianet Suvarna News

ಸಂಪುಟ ವಿಸ್ತರಣೆ ಕಲಾಪಕ್ಕೆ ಮೊದಲೋ? ನಂತರವೋ?

ಮೊದಲೋ? ನಂತರವೋ? ಎಂಬ ವಿಚಾರ ಗರಿಗೆದರಿದೆ. ಸಿದ್ದರಾಮಯ್ಯ ಬಣ ಡಿ.5ರಂದು ಸಮನ್ವಯ ಸಮಿತಿ ಸಭೆ ನಡೆಸಿ ಅಲ್ಲೇ ಈ ಬಗ್ಗೆ ನಿರ್ಧಾರ ಮಡುತ್ತೇವೆ ಎಂದರೆ, ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಮೂಲಗಳು ತಿಳಿಸಿವೆ.

confusion in karnataka cabinet expansion
Author
Bangalore, First Published Nov 30, 2018, 7:40 AM IST
  • Facebook
  • Twitter
  • Whatsapp

ಬೆಂಗ​ಳೂರು[ನ.30]: ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಹೈಕ​ಮಾಂಡ್‌ ಭೇಟಿ ಮಾಡಿ ಗುರು​ವಾರ ನಗ​ರಕ್ಕೆ ಹಿಂತಿ​ರು​ಗು​ತ್ತಿ​ದ್ದಂತೆಯೇ ಸಚಿವ ಸಂಪುಟ ವಿಸ್ತ​ರಣೆ ಕುತೂ​ಹಲ ಮತ್ತೆ ಆರಂಭ​ಗೊಂಡಿದೆ. ಡಿ.5ರಂದು ಸಮ​ನ್ವಯ ಸಮಿತಿ ಸಭೆ ನಡೆ​ಯ​ಲಿದ್ದು, ಅಲ್ಲಿ ಚರ್ಚಿಸಿ ಅಧಿ​ವೇ​ಶನದ ಒಳಗೆ ಸಂಪುಟ ವಿಸ್ತ​ರಣೆ ಮಾಡು​ವುದು ಖಚಿತ ಎಂದು ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಆಪ್ತ ವಲಯ ಬಿಂಬಿ​ಸುತ್ತಿದೆ.

ಆದರೆ, ಇದನ್ನು ಸ್ಪಷ್ಟ​ವಾಗಿ ನಿರಾ​ಕ​ರಿ​ಸುವ ಕಾಂಗ್ರೆಸ್‌ನ ಉನ್ನತ ಮೂಲ​ಗಳು, ಅಧಿ​ವೇ​ಶ​ನಕ್ಕೂ ಮುನ್ನ ನಿಗಮ ಮಂಡಳಿ ಅಧ್ಯಕ್ಷ- ಉಪಾ​ಧ್ಯ​ಕ್ಷರ ನೇಮ​ಕ​ವಾ​ಗ​ಲಿದೆ. ಸಂಪುಟ ವಿಸ್ತ​ರಣೆಯೇನಿ​ದ್ದರೂ ಅಧಿ​ವೇ​ಶ​ನದ ನಂತ​ರವೇ ಎಂದು ಖಚಿ​ತ​ವಾಗಿ ಹೇಳು​ತ್ತಿವೆ.

ಬೆಳ​ಗಾವಿ ಅಧಿ​ವೇ​ಶನ ಡಿ.10ರಂದು ಆರಂಭ​ವಾ​ಗ​ಲಿ​ರುವ ಹಿನ್ನೆ​ಲೆ​ಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿ​ಗಳು ಸಂಪುಟ ವಿಸ್ತ​ರ​ಣೆಗೆ ತೀವ್ರ ಒತ್ತಡ ನಿರ್ಮಾಣ ಮಾಡ​ತೊ​ಡ​ಗಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಡಿ.5ರಂದು ಸಿದ್ದ​ರಾ​ಮಯ್ಯ ಅವರ ಅಧ್ಯ​ಕ್ಷ​ತೆ​ಯಲ್ಲಿ ಸಮ​ನ್ವಯ ಸಮಿತಿ ಸಭೆ ನಡೆ​ಯ​ಲಿದೆ. ಈ ಸಭೆ​ಯ​ಲ್ಲಿ ಸಂಪುಟ ವಿಸ್ತ​ರಣೆ ಬಗ್ಗೆ ಚರ್ಚೆ ನಡೆ​ಯ​ಲಿದ್ದು, ಡಿಸೆಂಬರ್‌ ಆರು ಅಥವಾ ಏಳ​ರಂದು ಕಾಂಗ್ರೆಸ್‌ ನಾಯ​ಕರು ದೆಹ​ಲಿಗೆ ತೆರ​ಳ​ಲಿ​ದ್ದಾರೆ. ಹೈಕ​ಮಾಂಡ್‌ ಒಪ್ಪಿಗೆ ನೀಡಿ​ದರೆ, ಡಿ.8ರಂದೇ ಸಂಪುಟ ವಿಸ್ತ​ರ​ಣೆಯು ನಡೆ​ದು​ಹೋ​ಗು​ತ್ತದೆ ಎಂಬುದು ಸಿದ್ದ​ರಾ​ಮಯ್ಯ ಆಪ್ತ ಬಣದ ವಿವ​ರ​ಣೆ.

ಆದರೆ, ಇದನ್ನು ಸ್ಪಷ್ಟ​ವಾಗಿ ಅಲ್ಲ​ಗ​ಳೆ​ಯುವ ಹೈಕ​ಮಾಂಡ್‌ನ ಮೂಲ​ಗಳು, ಡಿ.5ರಂದು ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆ​ಯಲ್ಲಿ ನಿಗಮ ಮಂಡಳಿ ನೇಮ​ಕಾತಿ ಕುರಿತು ಚರ್ಚೆ ನಡೆಸಲಾಗುವುದು ಮತ್ತು ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ನಡು​ವಿ​ರುವ ಕೆಲ ಸಣ್ಣಪುಟ್ಟಭಿನ್ನಾ​ಭಿ​ಪ್ರಾ​ಯ​ಗ​ಳನ್ನು ಬಗೆ​ಹ​ರಿ​ಸಿ​ಕೊ​ಳ್ಳ​ಲಾ​ಗು​ವುದು. ಭಿನ್ನಾ​ಭಿ​ಪ್ರಾಯ ಬಗೆ​ಹ​ರಿ​ದರೆ ಅಧಿ​ವೇ​ಶ​ನ​ದೊ​ಳಗೆ ನಿಗಮ ಮಂಡಳಿ ನೇಮಕ ಆದೇಶ ಹೊರ​ಡಿ​ಸ​ಲಾ​ಗು​ವುದು. ಇದೇ ವೇಳೆ ವಿಧಾ​ನ​ಪ​ರಿ​ಷತ್‌ ಸಭಾಪತಿ ಹೆಸರು (ಬಹು​ತೇಕ ಎಸ್‌.​ಆರ್‌. ಪಾಟೀ​ಲ್‌), ಉಪ ಸಭಾ​ಪತಿ ಹಾಗೂ ಮುಖ್ಯ ಸಚೇ​ತಕ ಹುದ್ದೆಗೆ ಹೆಸ​ರು​ಗ​ಳನ್ನು ಆಖೈ​ರು​ಗೊ​ಳಿ​ಸ​ಲಾ​ಗು​ವು​ದು.

ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನ ಆರಂಭಕ್ಕೂ ಮೊದಲೇ ಆಗಲಿದೆ. ಈ ಬಗ್ಗೆ ಆದಷ್ಟುಬೇಗ ಉಭಯ ಪಕ್ಷಗಳ ನಾಯಕರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ. ಸಂಪುಟ ವಿಸ್ತರಣೆಗೆ ಅಧಿವೇಶನ ಮುಗಿಯುವವರೆಗೂ ಕಾಯುವುದಿಲ್ಲ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ನಿಗಮ ಮಂಡ​ಳಿ ನೇಮ​ಕಾತಿ ನಂತರ ಶಾಸ​ಕರ ಪ್ರತಿ​ಕ್ರಿಯೆ ಹೇಗಿ​ರು​ತ್ತದೆ ಎಂಬು​ದನ್ನು ಗಮ​ನಿಸಿ ಅನಂತರ ಸಂಪುಟ ವಿಸ್ತ​ರಣೆ ಪ್ರಕ್ರಿಯೆ ಆರಂಭಿ​ಸ​ಲಾ​ಗು​ವುದು. ಹೀಗಾಗಿ ಬೆಳ​ಗಾವಿ ಅಧಿ​ವೇ​ಶ​ನಕ್ಕೂ ಮುನ್ನ ಸಂಪುಟ ವಿಸ್ತ​ರಣೆ ಅಸಾಧ್ಯ ಎಂದು ಈ ಮೂಲ​ಗಳು ಖಚಿ​ತ​ವಾಗಿ ಹೇಳು​ತ್ತ​ವೆ.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ನನಗೆ ಆಡಳಿತ ನಡೆಸುವ ಹೊಣೆ ವಹಿಸಿದ್ದಾರೆ. ಮಿತ್ರ ಪಕ್ಷ ಕಾಂಗ್ರೆಸ್‌ ತೀರ್ಮಾನ ಕೈಗೊಂಡಲ್ಲಿ ಸಂಪುಟ ವಿಸ್ತರಣೆ ಕೂಡಲೇ ಆಗುತ್ತದೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಆದರೆ, ಸಿದ್ದ​ರಾ​ಮಯ್ಯ ಆಪ್ತರು ಮಾತ್ರ, ಸಂಪುಟ ವಿಸ್ತ​ರಣೆ ಬಗ್ಗೆ ಸಿದ್ದ​ರಾಮಯ್ಯ ಅವರು ಗಂಭೀ​ರ​ವಾ​ಗಿ​ದ್ದಾರೆ. ಹೀಗಾ​ಗಿಯೇ ಕೆಪಿ​ಸಿಸಿ ಅಧ್ಯಕ್ಷರು ಬುಧ​ವಾರ ದೆಹ​ಲಿಗೆ ತೆರಳಿ ಹೈಕ​ಮಾಂಡ್‌​ನೊಂದಿಗೆ ಚರ್ಚಿಸಿ ಆಗ​ಮಿ​ಸಿ​ದ್ದಾರೆ. ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವರು ಸೋಮ​ವಾ​ರದ ನಂತರ ನಗ​ರಕ್ಕೆ ಆಗ​ಮಿ​ಸ​ಲಿದ್ದು, ಈ ವೇಳೆ ಜೆಡಿ​ಎ​ಸ್‌ ನಾಯ​ಕ​ರೊಂದಿಗೆ ಸಂಪುಟ ವಿಚಾ​ರದ ಬಗ್ಗೆ ಅಂತಿಮ ಚರ್ಚೆ ನಡೆ​ಯ​ಲಿದೆ ಎನ್ನು​ತ್ತಾರೆ. ಈ ಮೂಲ​ಗಳ ಪ್ರಕಾರ ಸಿದ್ದ​ರಾ​ಮಯ್ಯ ಅವರು ಬುಧ​ವಾ​ರ​ ಜೆಡಿ​ಎಸ್‌ ವರಿ​ಷ್ಠ​ರಾದ ಎಚ್‌.ಡಿ.ದೇವೇ​ಗೌಡ ಹಾಗೂ ಕುಮಾ​ರ​ಸ್ವಾಮಿ ಅವ​ರೊಂದಿಗೆ ಒಂದು ಸುತ್ತಿನ ಮಾತು​ಕ​ತೆ​ಯನ್ನು ನಡೆ​ಸಿ​ದ್ದಾರೆ.

ಆದರೆ, ಮುಖ್ಯ​ಮಂತ್ರಿ ಕಚೇರಿ ಹಾಗೂ ಜೆಡಿ​ಎಸ್‌ ಮೂಲ​ಗಳು ಇದನ್ನು ಸ್ಪಷ್ಟ​ವಾಗಿ ನಿರಾ​ಕ​ರಿ​ಸಿದ್ದು, ಇಂತ​ಹ ಯಾವುದೇ ಸಭೆ ನಡೆ​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ವೆ.

Follow Us:
Download App:
  • android
  • ios