ಪೊಲೀಸರು ಹಾಗೂ ವಕೀಲರ ನಡುವೆ ಬಹಿರಂಗ ಸಂಘರ್ಷಕ್ಕೆ ವಿರಾಮ ? ಹೈಕೋರ್ಟ್ ಸೂಚನೆ ಏನು?
ಪೊಲೀಸರಿಂದ ವಕೀಲನ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್ ಕೆಲವು ಸೂಚನೆಗಳನ್ನು ನೀಡಿ ಡಿಸೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.5): ಪೊಲೀಸರಿಂದ ವಕೀಲನ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್ ಕೆಲವು ಸೂಚನೆಗಳನ್ನು ನೀಡಿ ಡಿಸೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಹೈ ಕೋರ್ಟ್ ಸೂಚನೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಪೊಲೀಸರು ಹಾಗೂ ವಕೀಲರ ನಡುವೆ ಬಹಿರಂಗ ಸಂಘರ್ಷಕ್ಕೆ ವಿರಾಮ ಸಿಕ್ಕಂತೆ ಕಂಡರೂ ತೆರೆಮರೆಯ ಆಕ್ರೋಶ ಮಾತ್ರ ಮುಂದುವರಿದೆ.ಇದರ ಭಾಗವಾಗಿ ಇಂದು (ಮಂಗಳವಾರ) ವಕೀಲರ ತಂಡವೊಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಪೊಲೀಸರು ಬೀದಿಗಿಳಿದು ಪ್ರತಿಭಟಿಸುವ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಲಾಠಿಗಳನ್ನು ಸುಡುವ ಮೂಲಕ ಪೊಲೀಸ್ ಸಮವಸ್ತ್ರಕ್ಕೆ ಅಗೌರವ ತೋರಿದ್ದಾರೆ ಈ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಕ್ಯಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭವಾನಿ ರೇವಣ್ಣರ ಗಲಾಟೆ ಬೆನ್ನಲ್ಲೇ ಎಚ್‌ಡಿ ರೇವಣ್ಣರ ವಿರುದ್ಧ ಅವಹೇಳನಕಾರಿ ಮಾತಾಡಿದ ಶಾಸಕ ಶಿವಲಿಂಗೇಗೌಡ!
ವರದಿ ನೀಡುವಂತೆ ಹೈ ಕೋರ್ಟ್ ಸೂಚನೆ :
ಅತ್ತ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12 ಕ್ಕೆ ಮುಂದೂಡಿರುವ ಹೈಕೋರ್ಟ್ ಎಜಿ, ಡಿಜಿಐಜಿಪಿ ನೇತೃತ್ವದಲ್ಲಿ ಸಭೆ ಸಭೆ ನಡೆಸಿ ಮುಂದಿನ ಮಂಗಳವಾರ ಹೈಕೋರ್ಟ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.ಡಿಜಿಐಜಿಪಿ, ಸಿಐಡಿ ಐಜಿಪಿ, ಗೃಹ ಇಲಾಖೆ ಕಾರ್ಯದರ್ಶಿ, ಎಜಿ, ಬಾರ್ ಕೌನ್ಸಿಲ್ ಸದಸ್ಯರು, ಬಾರ್ ಅಸೋಸಿಯೇಷನ್ ಸದಸ್ಯರು ಹಾಗೂ ಚಿಕ್ಕಮಗಳೂರು ಬಾರ್ ಅಸೋಸಿಯೇಷನ್ ಸದಸ್ಯರನ್ನೊಳಗೊಂಡ ಸಭೆ ನಡೆಸುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಪಶ್ಚಿಮ ವಲಯ ಐಜಿಪಿ ಅವರು ತೀರ್ಮಾನಿಸಿದ್ದರು. ಆದರೆ ಹೈ ಕೋರ್ಟ್ ಸೂಚನೆ ಪ್ರಕಾರ ಸಿಐಡಿ ಐಜಿಪಿ ಅವರೂ ಸಹ ಉನ್ನತಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಈ ವಿಚಾರದ ಬಗ್ಗೆಯೂ ಅಂದೇ ಅಂತಿಮ ತೀರ್ಮಾನ ಆಗಲಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ವಕೀಲರ ಮನವಿ :
ವಕೀಲರ ಮೇಲೆ ಹಲ್ಲೆ ನಡೆಸಿದ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ನಗರ ಠಾಣೆ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಚಿಕ್ಕಮಗಳೂರು ಬಾರ್ ಅಸೋಸಿಯೇ?ನ್ ಮನವಿ ಸಲ್ಲಿಸಿದೆ. ವಕೀಲ ಪ್ರೀತಮ್ ಮೇಲಿನ ಹಲ್ಲೆ ಸಂಬಂಧ ನಗರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಮೊಕದ್ದಮೆ ಪ್ರಕರಣ ದಾಖಲಾಗಿದ್ದರೂ ಸಹ ಯಾವೊಬ್ಬ ಆರೋಪಿಯನ್ನು ಇದುವರೆಗೂ ತನಿಖಾಧಿಕಾರಿಗಳು ಬಂಧಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇದಲ್ಲದೆ ಪೋಲೀಸ್ ಸಿಬ್ಬಂದಿಗಳು ಡಿಸೆಂಬರ್ 2 ರಂದು ರಾತ್ರಿ ಸಮವಸ್ತ್ರದಲ್ಲಿಯೇ ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪೊಲೀಸ್ ಸಮವಸ್ತ್ರದ ಒಂದು ಭಾಗವಾದ ಲಾಠಿಯನ್ನು ಸುಡುವುದರ ಮುಖಾಂತರ ಸಾರ್ವಜನಿಕರ ಆಸ್ತಿಯನ್ನು ನ? ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರು: ವಕೀಲರು V/S ಪೊಲೀಸರ ಜಟಾಪಟಿ ತಾರಕಕ್ಕೆ, ಸಿಐಡಿ ತನಿಖೆಗೆ ತೀರ್ಮಾನ
ಕಾನೂನು ಬಾಹಿರ ಪ್ರತಿಭಟನೆಯನ್ನು ಮಾಡಿದ್ದು ಈ ಸಮಯದಲ್ಲಿ ಕೆಲ ಪೋಲೀಸ್ ಸಿಬ್ಬಂದಿಗಳು ಸಮವಸ್ತ್ರದಲ್ಲಿದ್ದು ವಕೀಲರ ಮನೆಗೆ ನುಗ್ಗಿ ಒಬ್ಬೊಬ್ಬರನ್ನು ಎಳೆದು ಹೊಡೆಯುವುದಾಗಿ ಬೆದರಿಕೆ ಹಾಕಿರುತ್ತಾರೆ ಹಾಗೂ ಕೆಲವೊಬ್ಬ ಪೋಲೀಸರು ಅವಾಚ್ಯ ಶಬ್ದಗಳಿಂದ ವಕೀಲರನ್ನು ಮತ್ತು ಅವರ ವೃತ್ತಿಯನ್ನು ನಿಂದಿಸಿ ತೊಡೆತಟ್ಟಿ ಕಾಳಗಕ್ಕೆ ಬರುವಂತೆ ಪ್ರಚೋದಿಸಿ ಜೀವ ಬೆದರಿಕೆ ಹಾಕುವಂತಹ ಪದಗಳನ್ನು ಬಳಸಿದ್ದಾರೆ ಎಂದು ದೂರಿದ್ದಾರೆ.ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಮವಸ್ತ್ರದಲ್ಲಿಯೇ ತೊಡೆತಟ್ಟಿ ಹೋರಾಟಕ್ಕೆ ಆಹ್ವಾನ ನೀಡಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪೋಲೀಸ್ ಸಮವಸ್ತ್ರದ ಒಂದು ಭಾಗವಾಗಿರುವ ಲಾಠಿಯನ್ನು ಸುಡುವುದರ ಮುಖಾಂತರ ಸಾರ್ವಜನಿಕ ಆಸ್ತಿಹಾನಿಮಾಡಿ ಸರ್ಕಾರದ ಘನತೆಗೆ ಅಗೌರವ ತೋರಿರುವ ಪೋಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.