Asianet Suvarna News Asianet Suvarna News

ಭಾರೀ ಮಳೆಯಿಂದ 11 ರೈಲುಗಳ ಸಂಚಾರ ಸಂಪೂರ್ಣ ರದ್ದು

* 3 ರೈಲು ಮೊಟಕು
* 3 ರೈಲು ಮಾರ್ಗ ಬದಲು
* ಕ್ಯಾಸೆಲ್‌ ರಾಕ್‌ ಘಟ್ಟಪ್ರದೇಶದ ರೈಲು ಮಾರ್ಗದಲ್ಲಿ ಭೂಕುಸಿತ

Complete Cancellation of 11 Trains Due to Heavy Rain grg
Author
Bengaluru, First Published Jul 25, 2021, 7:43 AM IST
  • Facebook
  • Twitter
  • Whatsapp

ಬೆಂಗಳೂರು(ಜು.25): ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರೈಲ್ವೆ ಮಾರ್ಗಗಳಲ್ಲಿ ಭೂಕುಸಿತವಾಗಿರುವುದರಿಂದ ನೈಋುತ್ಯ ರೈಲ್ವೆಯು ರಾಜ್ಯ ಹಾಗೂ ಹೊರರಾಜ್ಯಗಳ ನಡುವೆ ಸಂಚರಿಸುವ ಹನ್ನೊಂದು ರೈಲುಗಳ ಸಂಚಾರವನ್ನು ಪೂರ್ಣ ರದ್ದುಗೊಳಿಸಿದೆ. ಮೂರು ರೈಲುಗಳ ಸಂಚಾರ ಭಾಗಶಃ ರದ್ದು ಮಾಡಿದ್ದು, ಮೂರು ರೈಲುಗಳನ್ನು ಬದಲಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

ಕ್ಯಾಸಲ್‌ ರಾಕ್‌-ಕುಲೇಮ್‌-ಕ್ಯಾಸೆಲ್‌ ರಾಕ್‌ ಘಟ್ಟಪ್ರದೇಶದ ರೈಲು ಮಾರ್ಗದಲ್ಲಿ ಭೂಕುಸಿತವಾಗಿದೆ. ಜತೆಗೆ ಬೆಳಗಾವಿ-ಮೀರಜ್‌ ರೈಲು ಮಾರ್ಗದ ಸೇತುವೆಗಳ ಮೇಲೆ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಹೀಗಾಗಿ ಈ ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಎಸ್‌ಎಸ್‌ಎಸ್‌ ಹುಬ್ಬಳ್ಳಿ-ದಾದರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ಯಶವಂತಪುರ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು, ವಾಸ್ಕೋ ಡ ಗಾಮ-ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌, ವಾಸ್ಕೋ ಡ ಗಾಮ- ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ಮೀರಜ್‌- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ಬೆಳಗಾವಿ-ಶೆಡಬಾಳ, ವಾಸ್ಕೋಡ ಗಾಮ-ಕಾಚಿಗುಡ/ ನ್ಯೂ ಗುವಾಹಟಿ ಪಾರ್ಸೆಲ್‌ ಎಕ್ಸ್‌ಪ್ರೆಸ್‌, ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌- ಗದಗ, ಗದಗ- ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ದಾದರ್‌-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಸ್ಪೆಷಲ್‌, ಶಾಹು ಮಹಾರಾಜ್‌ ಟರ್ಮಿನಸ್‌-ತಿರುಪತಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಸಂಚಾರ ಸಂಪೂರ್ಣ ರದ್ದಾಗಿದೆ.

ಮಹಾರಾಷ್ಟ್ರ ಮಳೆಗೆ ಬೆಳಗಾವಿ ಇನ್ನೂ ತತ್ತರ

ವಾಸ್ಕೋ ಡ ಗಾಮ- ಹೌರಾ ಎಕ್ಸ್‌ಪ್ರೆಸ್‌ ರೈಲು, ಹೌರಾ- ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್‌ ರೈಲು ಹಾಗೂ ನಿಜಾಮುದ್ದೀನ್‌-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ. ಅಂತೆಯೇ ತಿರುನೆಲ್ವೇಲಿ-ದಾದರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ಯಶವಂತಪುರ-ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌, ಹಜರತ್‌ ನಿಜಾಮುದ್ದೀನ್‌-ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲುಗಳನ್ನು ಬದಲಿ ಸಂಚಾರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
 

Follow Us:
Download App:
  • android
  • ios