ಪ್ಯಾಲೆಸ್ತೀನ್ ಪರ ಬೀದಿಗಿಳಿದ ಕಮ್ಯುನಿಸ್ಟ್ ಸಂಘಟನೆಗಳು, ಫ್ರೀಡಂ ಪಾರ್ಕ್‌ನಲ್ಲಿ ವಶಕ್ಕೆ ಪಡೆದ ಪೊಲೀಸರು
ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ದಾಳಿ, ದೌರ್ಜನ್ಯ ವಿರೋಧಿಸಿ ಕಮ್ಯುನಿಷ್ಟ ಸಂಘಟನೆಗಳ ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಸಿಪಿಐ, ಮಾರ್ಕ್ಸವಾದಿ ಸಿಪಿಐಎಂ, ಸಿಪಿಐಎಂಎಲ್ ಪಕ್ಷಗಳಿಂದ ನಡೆದ ಪ್ರತಿಭಟನೆ. ಪ್ರತಿಭಟನೆ ವೇಳೆ ಪ್ಯಾಲೆಸ್ತೇನ್ ಪರ ಘೋಷಣೆ. ಕಮ್ಯುನಿಸ್ಟ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.
ಬೆಂಗಳೂರು (ಅ.20): ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ದಾಳಿ, ದೌರ್ಜನ್ಯ ವಿರೋಧಿಸಿ ಕಮ್ಯುನಿಷ್ಟ ಸಂಘಟನೆಗಳ ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಸಿಪಿಐ, ಮಾರ್ಕ್ಸವಾದಿ ಸಿಪಿಐಎಂ, ಸಿಪಿಐಎಂಎಲ್ ಪಕ್ಷಗಳಿಂದ ನಡೆದ ಪ್ರತಿಭಟನೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು. ಬೀದಿಗಳಿದು ಪ್ಯಾಲೆಸ್ತೀನ್ ಪರ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು. ಭಾರತ ಪ್ಯಾಲೆಸ್ತೀನ್ ಪರ ನಿಲ್ಲಬೇಕು ಎಂದು ಕೂಗು. ಕಾರ್ಯಕರ್ತರನ್ನು ವಶಕ್ಕೆ ಪಡೆದ.
ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ, ಘೋಷಣೆ; ಕೇಸ್ ಜಡಿದು ತನಿಖೆಗೆ ಮುಂದಾದ ಪೊಲೀಸರು
ಕಳೆದೆರಡು ವಾರಗಳಿಂದ ಪ್ಯಾಲೆಸ್ತೀನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ. ಹಮಾಸ್ ಇಸ್ರೇಲ್ ನಡುವಿನ ಯುದ್ಧದಲ್ಲಿ ಎರಡೂ ಕಡೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಮೊದಲಿಗೆ ದಾಳಿ ಮಾಡಿದ್ದೇ ಹಮಾಸ್ ಉಗ್ರರು. ಇಸ್ರೇಲ್ ನಾಗರಿಕ ಪ್ರದೇಶದ ಮೇಲೆ ಏಕಾಏಕಿ ಸಾವಿರಾರು ರಾಕೆಟ್‌ಗಳು ಉಡಾಯಿಸಿ ಅಟ್ಯಾಕ್ ಮಾಡಿದ್ದ ಹಮಾಸ್. ಇಸ್ರೇಲ್ ಗಡಿ ಬೇಲಿ ಮುರಿದು ಸಿಕ್ಕ ಸಿಕ್ಕ ಇಸ್ರೇಲಿ ನಾಗರಿಕರನ್ನು ಕೊಂದುಹಾಕಿದ್ದರು. ಮಹಿಳೆ ಮಕ್ಕಳನ್ನು ಅತ್ಯಾಚಾರ ಮಾಡಿದ್ದರು, ಕೆಲವು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡಿ ಭೀಕರವಾಗಿ ಕೊಂದುಹಾಕಿದ್ದಾರೆ.
ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ; ಪ್ಯಾಲೆಸ್ತೀನ್ ಪರ ನಿಲ್ಲುತ್ತೇವೆ: ಎಸ್‌ಡಿಪಿಐ
ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್. ಹಮಾಸ್ ಉಗ್ರರನ್ನು ಗುರಿಯಾಗಿಸಿ ಪ್ಯಾಲೆಸ್ತೀನ್ ಮೇಲೆ ಏರ್ ಸ್ಟ್ರೈಕ್ ನಡೆಸಿರುವ ಇಸ್ರೇಲ್, ನಮ್ಮ ಟಾರ್ಗೆಟ್ ಪ್ಯಾಲೆಸ್ತೀನ್ ನಾಗರಿಕರಲ್ಲ, ಹಮಾಸ್ ಉಗ್ರರು ಎಂದು ಸ್ಪಷ್ಟಪಡಿಸಿರುವ ಇಸ್ರೇಲ್ ಸೇನೆ.ಇಸ್ರೇಲ್ ದಾಳಿ ವೇಳೆ ಪ್ಯಾಲೆಸ್ತೀನ್ ನಾಗರಿಕರ ಮೃತಪಟ್ಟಿದ್ದಾರೆ. ಪ್ಯಾಲೆಸ್ತೀನ್ ಸಾವಿರಾರು ಕಟ್ಟಡಗಳು ನಾಶವಾಗಿವೆ. ಯುದ್ಧದ ಭೀಕರತೆ ಇನ್ನೂ ಹೆಚ್ಚಾಗಲಿದೆ. ಗಾಜಾ ಪಟ್ಟಿಮೇಲೆ ದಾಳಿ ಮಾಡಲು ಐದು ಲಕ್ಷ ಸೈನಿಕರೊಂದಿಗೆ ಸಿದ್ಧವಾಗಿರುವ ಇಸ್ರೇಲ್ ಯಾವ ಕ್ಷಣದಲ್ಲಿ ಬೇಕಾದರೂ ದಾಳಿ ನಡೆಸಬಹುದು.