ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ; ಪ್ಯಾಲೆಸ್ತೀನ್ ಪರ ನಿಲ್ಲುತ್ತೇವೆ: ಎಸ್‌ಡಿಪಿಐ

ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಭಾರತದ ನಿಲುವು ಬದಲಿಸಬೇಕಿದೆ. ಇಸ್ರೇಲ್ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಗೊತ್ತಿಲ್ಲದವರು ಇವತ್ತು ಇಸ್ರೇಲ್ ಪರ ವಾದ ಮಾಡುತ್ತಿದ್ದಾರೆ. ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

Hamas Israel war issue SDPI press conference Abdul Majeed who supported Palestine rav

ಬೆಂಗಳೂರು (ಅ.14) ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಭಾರತದ ನಿಲುವು ಬದಲಿಸಬೇಕಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

ಇಂದು ಪ್ಯಾಲಿಸ್ತೀನ್ ಪರವಾಗಿ ಎಸ್‌ಡಿಪಿಐ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯ ಪ್ರಾಚ್ಯ ಅರಬ್ ನಲ್ಲಿ ನಡೆಯುತ್ತಿರುವ ಯುದ್ಧ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇಸ್ರೇಲ್ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಗೊತ್ತಿಲ್ಲದವರು ಇವತ್ತು ಇಸ್ರೇಲ್ ಪರ ವಾದ ಮಾಡುತ್ತಿದ್ದಾರೆ. ಅವತ್ತು ಮಾನವೀಯ ನೆಲೆಯಲ್ಲಿ ಯಹೂದಿಗಳಿಗೆ ನೆಲೆಸುವುದಕ್ಕೆ ಪ್ಯಾಲೇಸ್ತೀನಿಯರು ಅವಕಾಶ ಕೊಟ್ಟಿದ್ದರು. ಆದರೆ ಇಸ್ರೇಲ್‌ ಇವತ್ತು ಪ್ಯಾಲೆಸ್ತೀನ್ ವಿರುದ್ಧ ತಿರುಗಿಬಿದ್ದಿದ್ದಾರೆ. ನೆಲೆ ಕೊಟ್ಟ ಯಜಮಾನನ್ನೇ ಹೊರದಬ್ಬುವ ಪರಿಸ್ಥಿತಿಗೆ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಸ್ರೇಲ್‌-ಪ್ಯಾಲೆಸ್ತೇನ್‌ ಯುದ್ಧ: ಈ ಬಗ್ಗೆ ಪ್ರೊ. ಚಂದ್ರಕಾಂತ್‌ ಯಾತನೂರು ಹೇಳೋದೇನು ?

 

ಎಸ್‌ಡಿಪಿಐ ಪ್ಯಾಲೆಸ್ತೀನ್ ಪರ ನಿಲ್ಲುತ್ತದೆ:

1946ರಲ್ಲಿ ಕೆಲವೇ ಕೆಲವು ಜಾಗಗಳಲ್ಲಿ ಯಹೂದಿಗಳು ಇದ್ರು. 1948ರಲ್ಲಿ ವಿಶ್ವಸಂಸ್ಥೆ ಸೆಟಲ್ ಮೆಂಟ್ ಮಾಡಿ ಇಸ್ರೇಲ್‌ಗೆ ಕೆಲವು ಭಾಗ ಕೊಟ್ಟಿತ್ತು. ಆದರೆ ಈಗ ಅದರ ಎರಡು ಮೂರು ಭಾಗ ಮಾತ್ರ ಹೀಗೆ ಉಳಿದಿದೆ ನೋಡಿ ಎಂದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಮ್ಯಾಪ್ ತೋರಿಸಿ ಅಬ್ದುಲ್ ಮಜೀದ್ ವಿವರಣೆ ನೀಡಿದರು.

ಭಾರತದಲ್ಲಿ ವಾಜಪೇಯಿ ಆದಿಯಾಗಿ ಗಾಂಧಿ,ನೆಹರೂ ಎಲ್ಲರೂ ಪ್ಯಾಲೆಸ್ತೀನ್ ಬೆಂಬಲಿಸುತ್ತಾ ಬಂದಿದ್ದಾರೆ. ನಾವೂ ಸಹ ಪ್ಯಾಲೆಸ್ತೀನ್ ಪರ ನಿಲ್ಲುತ್ತೇವೆ.
9 ಸಾವಿರ ಜನ ಪ್ಯಾಲೆಸ್ತೀನ್ ಜನರನ್ನು ಜೈಲಿನಲ್ಲಿಟ್ಟು ಇಸ್ರೇಲ್ ದೌರ್ಜನ್ಯ ನಡೆಸುತ್ತಿದೆ. ವಿಶ್ವಸಂಸ್ಥೆಯ 28 ನಿಯಮಗಳನ್ನು ಇಸ್ರೇಲ್ ಉಲ್ಲಂಘಿಸಿದೆ. ಗಾಜಾ ಸ್ಟ್ರಿಪ್ಟ್ ಮೇಲೆ ನಿರಂತರ ಬಾಂಬು ದಾಳಿ ನಡೆಸಿದೆ. ವಿಶ್ವಸಂಸ್ಥೆ ನಡೆಸುವ ಶಾಲೆಗಳ ಮೇಲೆಯೂ ಬಾಂಬ್ ದಾಳಿ ನಡೆಸಿ ಮೂವತ್ತು ಮಕ್ಕಳು ಸೇರಿ ವಿಶ್ವಸಂಸ್ಥೆಯ ಸಿಬ್ಬಂದಿ ಸಾವಿಗೆ ಇಸ್ರೇಲ್ ಕಾರಣವಾಗಿದೆ.ಆದರೂ ಅದನ್ನು ಯಾರೂ ಉಗ್ರ ರಾಷ್ಟ್ರ ಅಂತ ಕರೆಯೋದಿಲ್ಲ. ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ ಎಂದರು.

ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಒಪ್ಪಿಗೆ ಕೊಟ್ಟಂತಹ ದೇಶವೇನಾದರೂ ಇದ್ರೆ ಅದು ಭಾರತ. ಮಾಧ್ಯಮಗಳು ಪ್ಯಾಲೆಸ್ತೀನ್ ಅನ್ನು ಭಯೋತ್ಪಾದನೆಗೆ ಹೋಲಿಸಿದ್ದಾರೆ. ಇದು ಭಯೋತ್ಪಾದನೆ ಅಲ್ಲ, ಪ್ಯಾಲೆಸ್ತೀನಿಯರ ಸ್ವತಂತ್ರ ಹೋರಾಟ ಭಾರತ ಬ್ರಿಟಿಷರ ವಿರುದ್ದ ಹೇಗೆ ಸ್ವಾತಂತ್ರ್ಯಕ್ಕೆ ಹೋರಾಡಿತ್ತೋ ಹಾಗೆ ಪ್ಯಾಲೆಸ್ತೀನ್ ಸಹ ಇಸ್ರೇಲ್ ವಿರುದ್ದ ಹೋರಾಡುತ್ತಿದೆ ಎನ್ನುವ ಮೂಲಕ ಪ್ಯಾಲೆಸ್ತೀನ್ ಹೋರಾಟವನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ ಎಸ್‌ಡಿಪಿಐ.

ವೋಟ್‌ಬ್ಯಾಂಕ್‌ ಸಲುವಾಗಿ ಪ್ಯಾಲೆಸ್ತೇನ್‌ ಪರ ನಿಂತ ಕಾಂಗ್ರೆಸ್‌, 'ಹಮಾಸ್‌ ಭಯೋತ್ಪಾದಕರಲ್ಲ' ಎಂದ ತರೂರ್‌!

ಇಸ್ರೇಲ್ ಪರ ಭಾರತ ನಿಲ್ಲಬಾರದು

ಭಾರತ ಇಸ್ರೇಲ್ ಪರ ನಿಲ್ಲಬಾರದು. ಸ್ವಾತಂತ್ರ್ಯ ಹೋರಾಟ ನಡೆಸುತ್ತಿರುವ ಪ್ಯಾಲೆಸ್ತೀನ್ ಪರ ನಿಲ್ಲಬೇಕು ಎಂದು ಆಗ್ರಹಿಸಿದ ಎಸ್‌ಡಿಪಿಐ. ಇಸ್ರೇಲ್‌ನಲ್ಲಿ ಅದಾನಿ ಬ್ಯುಸಿನೆಸ್ ಇದೆ. ಹಾಗಾಗಿ ಮೋದಿ ಇಸ್ರೇಲ್ ಬೆಂಬಲಿಸ್ತಿದ್ದಾರೆ. ಇಸ್ರೇಲ್ ಜೊತೆ ಮಧ್ಯಪ್ರಾಚ್ಯದಲ್ಲೂ ಬ್ಯುಸಿನೆಸ್ ವಿಸ್ಕೃತವಾಗಿದೆ. ಈಗ ಮೋದಿ ಇಸ್ರೇಲ್ ಬೆಂಬಲಿಸೋದ್ರಿಂದ ಅದಾನಿಗೆ ಲಾಭವಾಗಲಿದೆ. ಅದಕ್ಕೆ ಇಸ್ರೇಲ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಬ್ದುಲ್ ಮಜೀದ್ ಕಿಡಿಕಾರಿದರು.

Latest Videos
Follow Us:
Download App:
  • android
  • ios