Asianet Suvarna News Asianet Suvarna News

ಪಿಎಫ್‌ಐ ಬ್ಯಾನ್‌ ಬಳಿಕ ಕರ್ನಾಟಕದಲ್ಲಿ ಹೆಚ್ಚಾದ ಕೋಮು ಸಂಘರ್ಷ ಪ್ರಕರಣಗಳು: 12 ದಿನಕ್ಕೊಂದು ಕೇಸ್‌..!

ಒಟ್ಟಾರೆ, ಜನವರಿ 1, 2019 ಮತ್ತು ಫೆಬ್ರವರಿ 15, 2023 ರ ಅವಧಿಯಲ್ಲಿ ರಾಜ್ಯದಲ್ಲಿ 122 ಈ ರೀತಿಯ ಪ್ರಕರಣಗಳು ಕಂಡುಬಂದಿವೆ, ಅವುಗಳಲ್ಲಿ ಸುಮಾರು 50% ಕೇಸ್‌ 2022 ರಲ್ಲಿ ವರದಿಯಾಗಿದೆ.

communal cases on the rise in karnataka 122 since 2019 ash
Author
First Published Mar 9, 2023, 2:46 PM IST

ಬೆಂಗಳೂರು (ಮಾರ್ಚ್‌ 9, 2023): ರಾಜ್ಯದಲ್ಲಿ ಕೆಲ ವರ್ಷಗಳಿಂದ ಕೋಮು ಸಂಘರ್ಷ ಘಟನೆಗಳ ಸಂಖ್ಯೆಯು ಹೆಚ್ಚುತ್ತಿದೆ. ರಾಜ್ಯದಲ್ಲಿ ಜನವರಿ 1, 2019 ಮತ್ತು ಫೆಬ್ರವರಿ 15, 2023 ರ ನಡುವೆ ಸರಾಸರಿ 12 ದಿನಗಳಿಗೊಮ್ಮೆ ಅಂತಹ ಘಟನೆ ವರದಿಯಾಗುತ್ತಿದೆ ಎಂದು ತಿಳಿದುಬಂದಿದೆ. ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 2022 ರಲ್ಲಿ 63 ಪ್ರಕರಣಗಳು ವರದಿಯಾಗಿದ್ದು, ಅದರ ಹಿಂದಿನ ವರ್ಷಕ್ಕಿಂತ ಈ ಕೇಸ್‌ಗಳ ಸಂಖ್ಯೆ ದುಪ್ಪಟ್ಟಾಗಿದೆ. ಅಲ್ಲದೆ, 2020 ಹಾಗೂ 2021 ಕೋವಿಡ್ ವರ್ಷಗಳಾಗಿದ್ದರೂ, 2019 ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಕಂಡಿವೆ. ಈ ಹಿನ್ನೆಲೆ ಕೋಮು ಸಂಘರ್ಷ ಪ್ರಕರಣಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ. 

ಇನ್ನು, ಈ ವರ್ಷ ಫೆಬ್ರವರಿ ಮಧ್ಯದವರೆಗೆ ಕೋಲಾರದಲ್ಲಿ ಒಂದು ಕೋಮು ಸಂಘರ್ಷ ಪ್ರಕರಣ ವರದಿಯಾಗಿದೆ. ಒಟ್ಟಾರೆ, ಜನವರಿ 1, 2019 ಮತ್ತು ಫೆಬ್ರವರಿ 15, 2023 ರ ಅವಧಿಯಲ್ಲಿ ರಾಜ್ಯದಲ್ಲಿ 122 ಈ ರೀತಿಯ ಪ್ರಕರಣಗಳು ಕಂಡುಬಂದಿವೆ, ಅವುಗಳಲ್ಲಿ ಸುಮಾರು 50% ಕೇಸ್‌ 2022 ರಲ್ಲಿ ವರದಿಯಾಗಿದೆ. ಹಾಗೂ, ಶಿವಮೊಗ್ಗ (24), ದಕ್ಷಿಣ ಕನ್ನಡ (19 ಮಂಗಳೂರು ನಗರದಲ್ಲಿ ಎರಡು ಸೇರಿದಂತೆ), ದಾವಣಗೆರೆ (18) ಮತ್ತು ಹಾವೇರಿ (10) ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಸೇರುತ್ತದೆ ಎಂದು ಗೃಹ ಇಲಾಖೆಯ ಅಂಕಿ ಅಂಶಗಳು ಹೇಳುತ್ತದೆ. 

ಇದನ್ನು ಓದಿ: ಹಿಂಸಾಚಾರಕ್ಕೆ ತಿರುಗಿದ ಹೋಳಿ: ಉತ್ತರಪ್ರದೇಶದಲ್ಲಿ 21 ಜನರ ಬಂಧನ

ಇನ್ನು, ಶಿವಮೊಗ್ಗ ಸೂಕ್ಷ್ಮ ಜಿಲ್ಲೆಯಾಗಿ ಮುಂದುವರೆದಿದೆ ಮತ್ತು ಇದು ಸತ್ಯ. ಇತ್ತೀಚೆಗೆ, ನಾವು ಜಿಲ್ಲೆಗೆ ಸೇರಿದ ಕೆಲವು ಜನರನ್ನು ಬಂಧಿಸಿದ್ದೇವೆ" ಎಂದು ಕರ್ನಾಟಕ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕೋಮು ಸಂಘರ್ಷ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಹೇಳಿದ್ದಾರೆ. ಅಲ್ಲದೆ, ಇತರ ವಿಷಯಗಳ ಜೊತೆಗೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ನಿಷೇಧಿಸಿರುವುದು ಸಹ ಕೋಮು ಸಂಘರ್ಷ ಘಟನೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳುತ್ತಾರೆ. 

ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ಅನ್ನು 'ಕಾನೂನುಬಾಹಿರ ಸಂಘ' ಎಂದು ಘೋಷಿಸಿತು ಮತ್ತು ಅದನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಹಾಗೂ, ಕರ್ನಾಟಕದಲ್ಲಿ, ನವೆಂಬರ್ 30, 2022 ರಂದು ಹೈಕೋರ್ಟ್ ನಾಸಿರ್ ಪಾಷಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಪಿಎಫ್‌ಐ ನಿಷೇಧವನ್ನು ಎತ್ತಿ ಹಿಡಿದಿದೆ. 

ಇದನ್ನೂ ಓದಿ: ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್‌ ಹೊರತು ಬಿಜೆಪಿ ಅಲ್ಲ: ರಮೇಶ ಜಾರಕಿಹೊಳಿ

ಪಿಎಫ್‌ಐ ನಿಷೇಧದ ಪರಿಣಾಮ ಮತ್ತು ನಂತರದ ಕ್ರಮದಿಂದಲೂ ಈ ಪ್ರಕರಣಗಳು ಹೆಚ್ಚಾಗಿದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ. 2022 ರಲ್ಲಿ 152% ಪ್ರಕರಣಗಳ ಹೆಚ್ಚಳವು ಕೋಮು ಸಂಘರ್ಷ ಪ್ರಕರಣಗಳತ್ತ ಗಮನ ಸೆಳೆಯುವಂತೆ ಮಾಡಿದೆ. 2018 ರಲ್ಲಿ ಈ ಕೇಸ್‌ಗಳು 30 ಕ್ಕಿಂತ ಕಡಿಮೆಯಿತ್ತು, ಇದು 2017 ರಿಂದ 68% ಕುಸಿತವನ್ನು ದಾಖಲಿಸಿದೆ. 2019 ರಲ್ಲಿ, ಪ್ರಕರಣಗಳು 12 ಕ್ಕೆ ಕುಸಿದಿದ್ದು, ಆದರೆ 2020 ರಲ್ಲಿ 20 ರ ಗಡಿಯನ್ನು ದಾಟಿದೆ.

ಈ ಮಧ್ಯೆ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಲಾಗಿದ್ದು, ಕೋಮು ಸಂಘರ್ಷ ಘಟನೆಗಳಿಗೆ ಕಾರಣವಾಗುವ ಬಾಕಿ ಇರುವ ಸಮಸ್ಯೆಗಳನ್ನು ಗುರುತಿಸಿ ತ್ವರಿತವಾಗಿ ಪರಿಹರಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಮಡಿಕೇರಿ: ಹಿಂದೂಪರ ಸಂಘಟನೆಗಳ ಹತ್ತಿಕ್ಕಲು ಇಲ್ಲಸಲ್ಲದ ಕೇಸ್ : ವಕೀಲರ ಅಸಮಾಧಾನ

ಪೊಲೀಸರು ನಿಯತಕಾಲಿಕವಾಗಿ ಠಾಣೆ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ, ಸಮುದಾಯಗಳ ನಡುವೆ ಅಸಂಗತತೆಯನ್ನು ಉಂಟುಮಾಡುವ ಸಂಭಾವ್ಯತೆಯನ್ನು ಹೊಂದಿರುವ ಪೋಸ್ಟ್‌ಗಳನ್ನು ಪತ್ತೆಹಚ್ಚಲು ಮತ್ತು ಕಾರ್ಯನಿರ್ವಹಿಸಲು ಸಾಮಾಜಿಕ ಮಾಧ್ಯಮದಲ್ಲಿ ಜಾಗರೂಕರಾಗಿರಿ ಎಂದೂ ಹೇಳಿದೆ.

Follow Us:
Download App:
  • android
  • ios