ಮೈ ತುಂಬ ವೃತ್ತಗಳನ್ನು ಹೊಂದಿದೆ ಈ ನಾಗರಹಾವು!
ಶಿರಸಿಯಲ್ಲಿ ಅಪರೂಪದ ನಾಗರ ಹಾವೊಂದು ಪತ್ತೆಯಾಗಿದೆ. ಏನಿದರ ವಿಶೇಷತೆ? ಇಲ್ಲಿದೆ ವಿವರ
ಶಿರಸಿ[ಜ.05]: ಮೈ ತುಂಬ ವೃತ್ತಗಳನ್ನು ಹೊಂದಿದ ಅಪರೂಪದ ನಾಗರ ಹಾವನ್ನು ಶಿರಸಿ ತಾಲೂಕು ಕಲ್ಲಿ ಸಮೀಪ ಉರಗ ತಜ್ಞ ರಾಜೀವ ನಾಯ್ಕ ಅಂಬಾಗಿರಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಹಾವಿನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸತ್ಯಗಳು!
ಕಲ್ಲಿಯ ತಿಮ್ಮಪ್ಪ ದ್ಯಾವ ನಾಯ್ಕ ಅವರ ಮನೆ ಸುತ್ತ ಮುತ್ತ ಕಳೆದ ನಾಲ್ಕಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಈ ಹಾವು ಶುಕ್ರವಾರ ಮನೆಯೊಳಗೆ ಸೇರಿ ಭತ್ತದ ಮೂಟೆಗಳ ಮಧ್ಯೆ ಸೇರಿಕೊಂಡಿತ್ತು. 4.5 ಅಡಿ ಉದ್ದದ ಈ ಹಾವು ೪ ವರ್ಷದ ಪ್ರಾಯದ್ದೆಂದು ಅಂದಾಜಿಸಲಾಗಿದೆ.
ಪಂಪ್‌ಸೆಟ್ ಪೈಪ್‌ನಲ್ಲಿ ಸಿಲುಕಿ 30ಕ್ಕೂ ಅಧಿಕ ಹಾವುಗಳ ಸಾವು
ಈ ಮಾದರಿಯ ಹಾವುಗಳು ಹೆಚ್ಚಿನ ಕೋಪ ಮತ್ತು ಚುರುಕುತನ ಹೊಂದಿರುತ್ತವೆ. 5 ವರ್ಷಗಳ ಹಿಂದೆ ಇದೇ ಭಾಗದಲ್ಲಿ ಈ ರೀತಿಯ ನಾಗರ ಹಾವನ್ನು ಹಿಡಿದಿದ್ದಾಗಿ ರಾಜೀವ ನಾಯ್ಕ ನೆನಪಿಸಿಕೊಂಡಿದ್ದಾರೆ.