ಮುಂಗಾರು ಆಗಮನಕ್ಕೆ ‘ಬಿಪರ್‌ಜಾಯ್‌’ ಅಡ್ಡಿ, ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ, ಮುಂಬರುವ ದಿನಗಳಲ್ಲಿ ಚಂಡಮಾರುತ ರೂಪ ತಾಳುವ ಸಾಧ್ಯತೆ, ನಿನ್ನೆಯಿಂದಲೇ ಕರ್ನಾಟಕದ ಸಮುದ್ರ ತೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ

ನವದೆಹಲಿ(ಜೂ.07):  ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾ​ಗಿ​ರುವ ವಾಯುಭಾರ ಕುಸಿತ ಮುಂದಿನ ದಿನಗಳಲ್ಲಿ ಚಂಡಮಾರುತ ರೂಪ ತಾಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದ​ರಿಂದ ಕರ್ನಾ​ಟಕ ಕರಾ​ವಳಿ ಮಂಗ​ಳ​ವಾ​ರವೇ ಪ್ರಕ್ಷು​ಬ್ಧ​ವಾ​ಗಿದೆ. ಕರ್ನಾ​ಟಕ, ಮಹಾ​ರಾಷ್ಟ್ರ, ಕೇರಳ ಹಾಗೂ ಗುಜ​ರಾತ್‌ ಕರಾ​ವ​ಳಿ​ಗ​ಳಲ್ಲಿ 2-3 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

ಆ​ದರೆ, ಇದೇ ಚಂಡ​ಮಾ​ರು​ತ​ವು ಮುಂಗಾರು ಆಗ​ಮ​ನಕ್ಕೆ ಅಡ್ಡಿ ಮಾಡಿದೆ. ಖಾಸಗಿ ಹವಾ​ಮಾ​ನ ಸಂಸ್ಥೆ ಸ್ಕೈಮೆಟ್‌ ಪ್ರಕಾರ, ಮುಂಗಾರು ಜೂ.8 ಅಥವಾ 9ರಂದು ಕೇರಳ ಪ್ರವೇ​ಶಿ​ಸ​ಬ​ಹುದು. ಆದರೆ ಅದು ಪ್ರಬಲ ರೂಪ​ದ​ಲ್ಲಿ​ರದೇ ದುರ್ಬ​ಲ​ವಾ​ಗಿ​ರ​ಲಿದೆ ಎಂದು ಹೇಳ​ಲಾ​ಗಿ​ದೆ. ಈ ಚಂಡಮಾರುತಕ್ಕೆ ಬಂಗಾಳಿ ಭಾಷೆ​ಯ ಬಿಪರ್‌ ಜಾಯ್‌ (ವಿಪತ್ತು) ಎಂದು ಹೆಸರಿಡಲಾಗಿದ್ದು, ಬಾಂಗ್ಲಾದೇಶ ಈ ಹೆಸರನ್ನು ಸೂಚಿಸಿದೆ.

ಮಳೆ​ಗಾಲ ಆರಂಭ ಇನ್ನಷ್ಟು ತಡ: ಮುಂಗಾರು ಆಗ​ಮ​ನಕ್ಕೆ ವಾಯು​ಭಾರ ಕುಸಿತ ಅಡ್ಡಿ

ಉತ್ತ​ರಾಭಿಮುಖ​ವಾಗಿ ಲಗ್ಗೆ:

ಕಡಿಮೆ ಒತ್ತಡ ಪ್ರದೇಶ ಗೋವಾದಿಂದ ನೈಋುತ್ಯ ಭಾಗ​ಕ್ಕೆ 950 ಕಿ.ಮೀ., ಮುಂಬೈನಿಂದ 1,100 ಕಿ.ಮೀ. ಮತ್ತು ಪೋರಬಂದರಿನಿಂದ 1,490 ಕಿ.ಮೀ. ದೂರದಲ್ಲಿದೆ. ಈ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಜೂ.8ರಂದು ಗೋವಾ, ಮಹಾರಾಷ್ಟ್ರ ಸಮುದ್ರ ತೀರಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ.

ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್‌.. ಡೇಂಜರ್‌: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್‌ ಪೊಲೀಸರ ಮಾಹಿತಿ

ವಾಯುಭಾರ ಕುಸಿತದಿಂದಾಗಿ ಮಂಗಳವಾರ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಮೀನುಗಾರರಿಗೆ ದಡಕ್ಕೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ. ಇದು ಚಂಡ​ಮಾ​ರು​ತ​ವಾಗಿ ಮಾರ್ಪಟ್ಟು ಗುರುವಾರ ಹಾಗೂ ಶುಕ್ರವಾರದ ಹೊತ್ತಿಗೆ ಮತ್ತಷ್ಟುತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈ ಚಂಡಮಾರುತ ವಾಯವ್ಯ ದಿಕ್ಕಿನತ್ತಲೂ ಚಲಿಸುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಭಾರತದ ಯಾವ ತೀರಕ್ಕೆ ಅಪ್ಪಳಿಸಬಹುದು ಎಂದು ಸ್ಪಷ್ಟಪಡಿಸಿಲ್ಲ.

ಮುಂಗಾರು ಮಾರುತ ವಿಳಂಬವಾಗಲು ಈ ಚಂಡಮಾರುತವೂ ಕಾರಣವಾಗಿದ್ದು, ಈ ಮೊದಲು ಹವಾಮಾನ ಇಲಾಖೆ ಅಂದಾಜಿಸಿದಂತೆ ಜೂ.3ರಂದೇ ಆಗಮಿಸಬೇಕಿತ್ತು. ಇದಾದ ಬಳಿಕ ದಿನಾಂಕವನ್ನು ನಾಲ್ಕು ದಿನಗಳ ಮುಂದೂಡಲಾಗಿದ್ದರೂ ಮಾರುತಗಳು ಇನ್ನೂ ಸಹ ಆಗಮಿಸಿಲ್ಲ.