Asianet Suvarna News Asianet Suvarna News

ವರ್ಷದ ಕೊನೆ ದಿನ ಬಾಕಿ ಇದ್ದ ಫೈಲ್ ಕ್ಲಿಯರ್ ಮಾಡಿದ ಸಚಿವ..! ಹೊಸ ವರ್ಷ ಇ-ಆಫೀಸ್‌

ವರ್ಷದ ಕೊನೆಯ ದಿನ ಎಲ್ಲ 40 ಕಡತ ವಿಲೇವಾರಿ | ಹೊಸ ವರ್ಷ ಇ-ಆಫೀಸ್‌ ಮೂಲಕ ಆರಂಭಕ್ಕೆ ಉದ್ದೇಶ

CN Ashwath Narayan clears all files on last day 2020 ready to start e office from New Year dpl
Author
Bangalore, First Published Jan 1, 2021, 9:51 AM IST

ಬೆಂಗಳೂರು(ಜ.01): ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಹೊಸ ವರ್ಷಕ್ಕೆ ಮುನ್ನಾ ದಿನವಾದ ಗುರುವಾರ ತಮ್ಮ ಮುಂದೆ ಇದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.

ಈ ಮೂಲಕ ಅವರು 2020ನೇ ವರ್ಷವನ್ನು ಮುಕ್ತಾಯಗೊಳಿಸಿ ಒಂದು ಅರ್ಥಪೂರ್ಣ ಸಾಂಪ್ರದಾಯಕ್ಕೆ ನಾಂದಿ ಹಾಡಿದರಲ್ಲದೆ, ರಾತ್ರಿ 9 ಗಂಟೆವರೆಗೂ ತಮ್ಮ ಗೃಹ ಕಚೇರಿಯಲ್ಲೇ ಕುಳಿತು ಬಾಕಿ ಇದ್ದ ಸುಮಾರು 40 ಕಡತಗಳನ್ನು ವಿಲೇವಾರಿ ಮಾಡುವುದರ ಮೂಲಕ ಹೊಸ ವರ್ಷಾಚರಣೆ ಮಾಡಿದರು.

ಬ್ರಿಟನ್‌ ರಿರ್ಟನ್‌: 20ಕ್ಕೆ ಏರಿದ ಸೋಂಕಿತರ ಸಂಖ್ಯೆ

‘ಮುಂದಿನ 2021ವರ್ಷವನ್ನು ಇ-ಆಫೀಸ್‌ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ. ಇಂದಿನವರೆಗೆ ಇದ್ದ ಎಲ್ಲ ಕಡತ ವಿಲೇವಾರಿ ಮಾಡಿದ್ದು, ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ. ಇದರಿಂದ ನನ್ನ ಕರ್ತವ್ಯದ ಬಗ್ಗೆ ಸಂಪೂರ್ಣತೆಯ ಭಾವ ಬಂದಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

‘ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಫೀಸ್‌ ಮೂಲಕವೇ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಎಲ್ಲ ವಿಶ್ವವಿದ್ಯಾಲಯಗಳ ವ್ಯವಹಾರಗಳು ಸಂಪೂರ್ಣವಾಗಿ ಇ-ಆಫೀಸ್‌ ಮೂಲಕವೇ ನಡೆಯುತ್ತವೆ. ಎಲ್ಲ ಕಡತ ಮತ್ತು ಪತ್ರಗಳು ಇ-ಆಫೀಸ್‌ ಮೂಲಕವೇ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios