ಬೆಂಗಳೂರು(ಜ.01): ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿರುವ ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಹಿಂದಿರುಗಿರುವವರ ಪೈಕಿ ಗುರುವಾರ ಮತ್ತೆ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಡಿ.1ರಿಂದ 21ವರೆಗೆ ಬ್ರಿಟನ್‌ನಿಂದ ಒಟ್ಟು 1,428 ಮಂದಿ ಬೆಂಗಳೂರು ನಗರಕ್ಕೆ ವಾಪಸ್ಸಾಗಿದ್ದಾರೆ. ಈ ಪೈಕಿ ಬಿಬಿಎಂಪಿ 1,329 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದೆ.

ಪಾಕಿಸ್ತಾನದ ಮಹಿಳೆ ನಮ್ಮಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ..!

ಈವರೆಗೆ 1,249 ಮಂದಿ ಕೋವಿಡ್‌ ಪರೀಕ್ಷಾ ಫಲಿತಾಂಶ ಲಭ್ಯವಾಗಿದ್ದು, 20 ಮಂದಿಗೆ ಸೋಂಕು ಪತ್ತೆಯಾಗಿದೆ. ಇನ್ನೂ 80 ಮಂದಿ ಫಲಿತಾಂಶ ಬರಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದುವರೆಗೆ ಪತ್ತೆಯಾಗಿರುವ 20 ಕೋವಿಡ್‌ ಸೋಂಕು ಪ್ರಕರಣಗಳಲ್ಲಿ ಮಹದೇವಪುರ ವಲಯದಲ್ಲಿ 6, ಬೊಮ್ಮನಹಳ್ಳಿ 5, ಪಶ್ಚಿಮ 4 ಪೂರ್ವ ತಲಾ 3, ದಾಸರಹಳ್ಳಿ ಹಾಗೂ ದಕ್ಷಿಣ ವಲಯದಲ್ಲಿ ತಲಾ 1 ಪ್ರಕರಣ ಪತ್ತೆಯಾದಂತಾಗಿದೆ.