ಬೆಂಗಳೂರು (ಡಿ. 18): ರಾಜ್ಯದ ಹೆದ್ದಾರಿಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಮಹಿಳೆಯರಿಗೆ ಕೇವಲ 5 ರಿಂದ 10 ನಿಮಿಷ ಹಾಗೂ ಅಪಘಾತಕ್ಕೀಡಾಗುವವರ ಪ್ರಾಣ ರಕ್ಷಣೆಗೆ 20  ನಿಮಿಷದಲ್ಲಿ ನೆರವು ನೀಡುವ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಹೊಂದಿರುವ 88 ಹೆದ್ದಾರಿ ಗಸ್ತು ವಾಹ ನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿದ್ದಾರೆ.

ಮಂಗಳವಾರ ವಿಧಾನ ಸೌಧದ ಆವರಣದಲ್ಲಿ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಹೆದ್ದಾರಿ ಗಸ್ತು ವಾಹನಗಳನ್ನು ಅರ್ಪಣೆ ಮಾಡಿದರು. ಅಲ್ಲದೆ, ಮುಖ್ಯಮಂತ್ರಿಗಳು ಬೆಂಗಳೂರು ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳು (ಸಿ.ಇ.ಎನ್.) ಹಾಗೂ ಭಯೋತ್ಪಾದಕ ನಿಗ್ರಹ ದಳದ ಉದ್ಘಾಟನೆಯನ್ನೂ ಇದೇ ವೇಳೆ ನೆರವೇರಿಸಿದರು.

 

ರಮೇಶ್‌, ಶ್ರೀರಾಮುಲು ಕಡೆಯಿಂದ ಪಟ್ಟು: ಬಿಜೆಪಿಯಲ್ಲೀಗ ಡಿಸಿಎಂ ಕಗ್ಗಂಟು!

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಹಂತದಲ್ಲೂ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಲೋಪವಾಗದಂತೆ ಮುಂಜಾ ಗ್ರತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ. ಭದ್ರತೆ ಸಂಬಂಧ ಕೇಂದ್ರ ಗೃಹ ಸಚಿವರ ಜೊತೆ ನಿರಂತರ ಸಂಪರ್ಕ ಹೊಂದಲಾಗಿದೆ ಎಂದು ತಿಳಿಸಿದರು. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತದಲ್ಲಿ ಜೀವ ರಕ್ಷಣೆಗೆ ಸಿಗುವ ಗೋಲ್ಡನ್ ಅವರ್‌ನಲ್ಲಿ ಗಸ್ತು ವಾಹನಗಳು ರಕ್ಷಣಾ ಕಾರ್ಯಾಚರಣೆ ನಡೆಸಬೇಕು. ಅದರೊಂದಿಗೆ ಮಹಿಳೆಯರ ಸುರಕ್ಷತೆ ಹೊಣೆಗಾರಿಕೆ ಯನ್ನು ಗಸ್ತು ಸಿಬ್ಬಂದಿಗೆ ವಹಿಸಬೇಕು. ಇನ್ನು ಮುಂದೆ ಹೆದ್ದಾರಿಗಳಲ್ಲಿ ತೊಂದರೆಗೆ ಸಿಲುಕುವ ಮಹಿಳೆ ಯರಿಗೆ 5-10 ನಿಮಿಷದಲ್ಲಿ ಪೊಲೀಸರ ನೆರವು ಸಿಗುವಂತೆ ವ್ಯವಸ್ಥೆ ಜಾರಿಗೊಳಬೇಕಿದೆ. ಇದಕ್ಕೆ ಕ್ರಮಗಳನ್ನು ಅಧಿಕಾರಿಗಳು ವಹಿಸಬೇಕು ಎಂದರು.

ಮಾದಕ ವಸ್ತು, ಸೈಬರ್ ಹಾಗೂ ಆರ್ಥಿಕ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರು ಗಮನಹರಿಸ ಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಕೃತ್ಯಗಳು ಹೆಚ್ಚಿದ್ದು, ಅವುಗಳಿಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಡಿವಾಣ ಹಾಕಬೇಕು. ಮೊದಲ ಹಂತದಲ್ಲಿ ಸಿಇಎನ್ ಠಾಣೆಗಳನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಮುಂದಿ ನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಆ ಠಾಣೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

ಸಿಟ್ಟು ಶಮನ: ಸಿದ್ದರಾಮಯ್ಯ ಭೇಟಿಯಾದ ಶ್ರೀನಿವಾಸ್ ಪ್ರಸಾದ್, ಮುನಿಯಪ್ಪ!

ಅಮಾಯಕರ ಬಂಧನ ಬೇಡ-ರಿಜ್ವಾನ್: ಉಗ್ರಗಾಮಿಗಳಿಗೆ ತಕ್ಕ ಶಾಸ್ತಿಯಾಗಲಿ. ಆದರೆ ಅಮಾಯಕರಿಗೆ ಸಂಕಷ್ಟ ಎದುರಾಗಬಾರದು. ಭಯೋತ್ಪಾದಕ ಕೃತ್ಯಗಳ ಸಂಬಂಧ ಬಂಧಿಸುವಾಗ ಸೂಕ್ತ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲಹೆ ನೀಡಿದರು. ಭಯೋತ್ಪಾದಕ ಕೃತ್ಯದ ಆರೋಪ ಹೊತ್ತ ಕೆಲವರು ಹತ್ತಾರು ವರ್ಷಗಳ ಬಳಿಕ ನ್ಯಾಯಾಲಯಗಳಲ್ಲಿ ದೋಷ ಮುಕ್ತರಾಗುತ್ತಿದ್ದಾರೆ.

ಅಷ್ಟರಲ್ಲಿ ಅವರ ಬದುಕು ದುಸ್ತರವಾಗಿರುತ್ತದೆ. ಹೀಗಾಗಿ ಸಮಾಜಘಾತುಕ ಶಕ್ತಿಗಳ ವಿರುದ್ಧದ ತನಿಖೆಯಲ್ಲಿ ತಪ್ಪುಗಳಾಗಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಡಿಜಿ-ಐಜಿಪಿ ನೀಲಮಣಿ ಎನ್.ರಾಜು, ಡಿಜಿಪಿಗಳಾದ ಎ.ಎಂ.ಪ್ರಸಾದ್, ಪ್ರವೀಣ್ ಸೂದ್ ಹಾಗೂ ನಗರ ಪೊಲೀಸ್ ಆಯುಕ್ತ ಎಸ್.ಭಾಸ್ಕರ್ ರಾವ್ ಉಪಸ್ಥಿತರಿದ್ದರು.