ವಿಜಯಪುರ: ನಾಳೆ ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡನ ಜಾಗ ಬಳಕೆ ಆರೊಪ; ಕೋರ್ಟ್‌ನಿಂದ ತಡೆಯಾಜ್ಞೆ ತಂದ ಗೂಳಪ್ಪ ಶಟಗಾರ್
ಬಿಜೆಪಿ ಮುಖಂಡನ ಜಾಗ ಬಳಕೆ ಆರೋಪ ಹಿನ್ನೆಲೆ ನಾಳೆ ನಡೆಯಲಿರುವ ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಗೂಳಪ್ಪ ಶಟಗಾರ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ವಿಜಯಪುರ (ನ.19): ಬಿಜೆಪಿ ಮುಖಂಡನ ಜಾಗ ಬಳಕೆ ಆರೋಪ ಹಿನ್ನೆಲೆ ನಾಳೆ ನಡೆಯಲಿರುವ ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಗೂಳಪ್ಪ ಶಟಗಾರ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ನಾಳೆ ವಿಜಯಪುರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಅಖಿಲ ಭಾರತ 70 ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ, ಸಹಕಾರಿ ಸಚಿವ ಕೆ ಎನ್ ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಇತರೆ ಸಚಿವರು ಭಾಗಿಯಾಗಲಿರೋ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಜಾಗವನ್ನು ಮಾಹಿತಿ ನೀಡದೇ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಗೂಳಪ್ಪ. ಜಾಗ ನನ್ನ ಹೆಸರಿನಲ್ಲಿದ್ದರೂ ನನ್ನ ಅನುಮತಿ ಪಡೆದಿಲ್ಲ. ಕನಿಷ್ಠ ಕಾರ್ಯಕ್ರಮದ ಮಾಹಿತಿ ಸಹ ನೀಡಿಲ್ಲ. ಎರಡೂ ಜಾಗವನ್ನು ಎನ್ಎ ಮಾಡಿ ನಿವೇಶನ ಮಾಡಲಾಗಿದೆ. ನಿವೇಶನ ಮಾಡಿದ ಗುರುತಿನ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ.
ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಿಕ್ಸ್ ವೇ ಯಾಗಿ ಮೇಲ್ದರ್ಜೆಗೆರಿಸಲು ಕ್ರಮ: ಸಂಸದ ಜಿಗಜಿಣಗಿ
ಮಾರಾಟವಾದ ನಿವೇಶನಗಳ ರಸ್ತೆ ಬಂದ್ ಮಾಡಿದ್ದಾರೆ. ಸರ್ವೇ ನಂಬರ್ 52/1 ಪೈಕಿ 6.18 ಎಕರೆ ಹಾಗೂ 52/2 ಪೈಕಿ 6.24 ಎಕರೆ ಜಾಗ ಬಳಕೆ ಮಾಡಲಾಗುತ್ತಿದೆ. ಎರಡೂ ಜಾಗಗಳ ಮಾಲೀಕತ್ವ ಹೊಂದಿರೋ ಗೂಳಪ್ಪ ಹೀಗಾಗಿ ನಾಳೆ ನಡೆಯಲಿರುವ ಸಿಎಂ ಕಾರ್ಯಕ್ರಮಕ್ಕೆ ಸ್ಥಳ ಬಳಕೆ ಮಾಡದಂತೆ ವಿಜಯಪುರ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಬಿಜೆಪಿ ಮುಖಂಡ ಗೂಳಪ್ಪ.
ತಡಯಾಜ್ಞೆ ತಂದಿರೋದ್ರಿಂದ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಜಾಗ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಕೆ ಮಾಡಿದರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಈಗಾಗಲೇ ಗೂಳಪ್ಪ ಅವರ ಜಾಗದಲ್ಲಿ ಹಾಕಿರುವ ಪೆಂಡಾಲ್. ಪೆಂಡಾಲ್ ತೆರವು ಮಾಡುವಂತೆ ಸೂಚಿಸಿರುವ ಗೂಳಪ್ಪ. ಆದರೆ ಇತ್ತ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದಲ್ಲಿ ಇದು ಡಿಸಿಸಿ ಬ್ಯಾಂಕ್‌ಗೆ ಸೇರಿದ ಆಸ್ತಿ ಎಂದು ಬೋರ್ಡ್ ಹಾಕಿರೋ ಜಿಲ್ಲಾಡಳಿತ. ಸಿಎಂ ಕಾರ್ಯಕ್ರಮದ ಮುಂಭಾಗ ಪೆಂಡಾಲ್ ಎದುರು ಕಪ್ಪು ಬೋರ್ಡ್ ಮೇಲೆ ಇದು ಜಿಲ್ಲಾ ಸಹಕಾರಿ ಬ್ಯಾಂಕ್ ಗೆ ಸೇರಿದ ಜಾಗ, ಆಸ್ತಿ ಎಂದು ಬರೆಯಿಸಿದ ಆಡಳಿತ ಮಂಡಳಿ.
ವಿಜಯಪುರ: ವೈದ್ಯ ಸಿಬ್ಬಂದಿ ಇಲ್ಲದೇ ರೋಗಿಗಳ ಪರದಾಟ..!