Asianet Suvarna News Asianet Suvarna News

ದೇವರು ದೇಗುಲದಲ್ಲಿ ಮಾತ್ರ ಇಲ್ಲ, ಎಲ್ಲರ ಮನಸ್ಸಲ್ಲೂ ಇದ್ದಾನೆ: ಸಿಎಂ ಸಿದ್ದರಾಮಯ್ಯ

ನಾರಾಯಣ ಗುರುಗಳು, ಕನಕದಾಸರು ಮತ್ತು ಬಸವಾದಿ ಶರಣರು ಮಾನವೀಯ ಮೌಲ್ಯವನ್ನು ಹೇಳಿದ್ದಾರೆ. ದಲಿತರನ್ನು ದೇವಸ್ಥಾನದ ಒಳಗೆ ಬಿಡದಿದ್ದರೆ ಆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ, ನೀವೇ ದೇವಸ್ಥಾನ ಕಟ್ಟಿ, ನೀವೇ ಪೂಜೆ ಮಾಡಿ ಎಂದು ನಾರಾಯಣ ಗುರುಗಳು ಸರಳವಾದ ಉಪಾಯ ತೋರಿಸಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah Talks Over God grg
Author
First Published Jan 10, 2024, 8:32 AM IST

ಬೆಂಗಳೂರು(ಜ.10):  'ದೇವರಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದನ್ನು ಒಪ್ಪಲ್ಲ. ಆತ ಎಲ್ಲರ ಮನಸಿನಲ್ಲೂ ಇದ್ದಾನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಮಂಗಳವಾರ ಲೇಖಕ ಡಾ. ಎಂ.ಎಸ್.ಮುತ್ತುರಾಜ್ ಅವರ 'ಮಂಗಳವಾದ್ಯ' ಕಾದಂಬರಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು, ಕನಕದಾಸರು ಮತ್ತು ಬಸವಾದಿ ಶರಣರು ಮಾನವೀಯ ಮೌಲ್ಯವನ್ನು ಹೇಳಿದ್ದಾರೆ. ದಲಿತರನ್ನು ದೇವಸ್ಥಾನದ ಒಳಗೆ ಬಿಡದಿದ್ದರೆ ಆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ, ನೀವೇ ದೇವಸ್ಥಾನ ಕಟ್ಟಿ, ನೀವೇ ಪೂಜೆ ಮಾಡಿ ಎಂದು ನಾರಾಯಣ ಗುರುಗಳು ಸರಳವಾದ ಉಪಾಯ ತೋರಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಕನ್ನಡಿಗ ವಿರೋಧಿ ಸರ್ಕಾರವೆಂದ ಸಿಎಂ ಸಿದ್ದರಾಮಯ್ಯ

ದೇವರಿದ್ದಾನೆ. ಆದರೆ, ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎನ್ನುವುದು ಸರಿಯಲ್ಲ ಎಂದರು.

Follow Us:
Download App:
  • android
  • ios