ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಯಾರು ಹೇಳಿದ್ದು? ನನಗೆ ಕೊಟ್ಟಿಲ್ವಾ ಎಂದ ಸಿದ್ದರಾಮಯ್ಯ!
'ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಯಾರು ಹೇಳಿದ್ದು, ರೈತರ ಮಕ್ಕಳಿಗೆ ಎಲ್ಲರೂ ಹೆಣ್ಣು ಕೊಡುತ್ತಾರೆ. ಸುಮ್ಮನೆ ಏನೇನೋ ಮಾತಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಅ.7):'ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಯಾರು ಹೇಳಿದ್ದು, ರೈತರ ಮಕ್ಕಳಿಗೆ ಎಲ್ಲರೂ ಹೆಣ್ಣು ಕೊಡುತ್ತಾರೆ.. ಸುಮ್ಮನೆ ಏನೇನೋ ಮಾತಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಸಂಘ, ಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟದಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತಾಡುವ ವೇಳೆ ಸ್ವಾರಸ್ಯಕರ ಘಟನೆ ನಡೆಯಿತು. ಭಾಷಣದ ಮಧ್ಯೆ ವ್ಯಕ್ತಿಯೊಬ್ಬ ಎದ್ದು ನಿಂತು, ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದ ವ್ಯಕ್ತಿ. ಈ ವೇಳೆ ವ್ಯಕ್ತಿಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರೈತರ ಮಕ್ಕಳಿಗೂ ಹೆಣ್ಣುಕೊಡ್ತಾರೆ. ಇದುವರೆಗೆ ರೈತರ ಮಕ್ಕಳು ಮದುವೆನೇ ಆಗಿಲ್ಲವಾ? ನಾನು ಕೂಡ ರೈತನ ಮಗ, ನನಗೆ ಹೆಣ್ಣುಕೊಟ್ಟಿಲ್ಲವಾ? ನಾನು ಮದುವೆ ಆಗಿಲ್ವ? ಓದಿದ ನಿರುದ್ಯೋಗಿಗಳಿಗೆ ಹೆಣ್ಣು ಕೊಡಲ್ಲ ಎಂದು ತಮಾಷೆ ಮಾಡಿದರು.
ಕರ್ನಾಟಕದಲ್ಲಿ ಹಸಿರು ಬರ, 4860 ಕೋಟಿ ಪರಿಹಾರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂದು ಸ್ವಪಕ್ಷದ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆರೋಪ ಮಾಡಿರುವುದು ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ ಇಷ್ಟು ಸಾಲದಕ್ಕೆ ಶಿವಶಂಕರಪ್ಪನವರ ಹೇಳಿಕೆಯನ್ನು ಮೃತ್ಯುಂಜಯ ಸ್ವಾಮೀಜಿ ಕೂಡ ಸಮರ್ಥಿಸಿಕೊಂಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಇದರ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಬಸವ ಜಯಂತಿಯಲ್ಲಿ ಭಾಗಿಯಾಗಿದ್ದಾರೆ.