ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ 'ಇಂದಿರಾ ಆಹಾರ ಕಿಟ್' ವಿತರಿಸಲು ಸಿದ್ಧತೆ ನಡೆಸಿದೆ. ಈ ಕಿಟ್‌ನಲ್ಲಿ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರಲಿದ್ದು, ಗುಣಮಟ್ಟ ಮತ್ತು ತೂಕದಲ್ಲಿ ಯಾವುದೇ ಲೋಪವಾಗದಂತೆ ಸಿಎಂ ಸೂಚನೆ.

ಬೆಂಗಳೂರು (ಡಿ.2): ಕರ್ನಾಟಕ ಸರ್ಕಾರ ಜಾರಿ ತರಲು ಸಿದ್ಧವಾಗಿರುವ ಇಂದಿರಾ ಆಹಾರ ಕಿಟ್‌ ವಿತರಣೆಯ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಿದರು. ಈ ವೇಳೆ ಕಿಟ್‌ನಲ್ಲಿ ಯಾವುದೇ ಪೌಷ್ಠಿಕಾಂಶ ಮತ್ತು ತೂಕ ಕಡಿಮೆಯಾಗಬಾರದು. ಆದರೆ ಸಂಬಂಧಪಟ್ಟವರನ್ನು ಗುರಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಇಂದಿರಾ ಕಿಟ್ ಆಹಾರ ವಿತರಣೆ:

ಸೋಮವಾರ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು,‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಾಗಿ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಶೀಘ್ರ ಸಿದ್ಧತೆ ನಡೆಸಬೇಕು. ಪ್ರತಿ ತಿಂಗಳು 1.25 ಕೋಟಿ ಕಿಟ್ ವಿತರಿಸಬೇಕಿದ್ದು, ಪ್ರತಿ ತಿಂಗಳ 10ರೊಳಗಾಗಿ ಯಾವುದೇ ಸಮಸ್ಯೆಯಿಲ್ಲದೆ ವಿತರಿಸಬೇಕು’ ಎಂದರು.

‘ಈ ವೇಳೆ ಯೋಜನೆ ಜಾರಿಗೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ಯಾವ ತಿಂಗಳಿಂದ ಆಹಾರ ಕಿಟ್‌ ವಿತರಣೆ ಶುರುವಾಗಲಿದೆ’ ಎಂಬ ಬಗ್ಗೆ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಇಂದಿರಾ ಕಿಟ್ ವಿತರಣೆ: ಸಿಎಂ ಕಟ್ಟುನಿಟ್ಟೀನ ಸೂಚನೆ:

‘ಬಿಪಿಎಲ್‌ ಕಾರ್ಡ್‌ನ ಪ್ರತಿ ಸದಸ್ಯರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಸೇರಿ ಒಟ್ಟು 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು ಹಾಗೂ ಸಕ್ಕರೆ ಒಳಗೊಂಡ ಕಿಟ್‌ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ತಿಂಗಳು 18,628 ಟನ್‌ ತೊಗರಿ ಬೇಳೆ, 12,419 ಟನ್‌ ಸೂರ್ಯಕಾಂತಿ ಎಣ್ಣೆ ಅಗತ್ಯವಾಗಲಿದೆ. ಪ್ರತಿ ತಿಂಗಳು 466 ಕೋಟಿ ರು. ವೆಚ್ಚ ಆಗುವ ಅಂದಾಜಿದ್ದು, ತೊಗರಿ ಬೇಳೆ, ಎಣ್ಣೆಯನ್ನು ನ್ಯಾಫೆಡ್‌ನಂತಹ ಕೇಂದ್ರದ ಸರಬರಾಜು ಸಂಸ್ಥೆಗಳಿಂದ ಅಥವಾ ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕವಾಗಿ ಖರೀದಿಸಬೇಕು’ ಎಂದು ಸೂಚಿಸಿದರು.

ಸೂಚನೆ - ಗುಣಮಟ್ಟದಲ್ಲಿ ರಾಜಿಯಾದರೆ ಸಂಬಂಧಪಟ್ಟವರ ಹೊಣೆ: ಎಚ್ಚರಿಕೆ । ಪ್ರತಿ ತಿಂಗಳ 10ರೊಳಗೆ ಕಿಟ್‌ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಿ: ಸಿದ್ದು

- 5 ಕೇಜಿ ಹೆಚ್ಚುವರಿ ಅಕ್ಕಿಯ ಬದಲು ಇಂದಿರಾ ಪಡಿತರ ಕಿಟ್‌ । ಅದರಲ್ಲಿರಲಿದೆ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ