Indira Kit implementation from February: ರಾಜ್ಯ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಮುಂದಿನ ವರ್ಷ ಫೆಬ್ರವರಿಯಿಂದ 'ಇಂದಿರಾ ಕಿಟ್' ಯೋಜನೆ ಜಾರಿ ಘೋಷಣೆ. ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ ಇರಲಿದ್ದು, ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅಗತ್ಯ ಜೋಳ ಲಭ್ಯವಾಗದಿರುವ ಬಗ್ಗೆಯೂ ಕಳವಳ

ನವದೆಹಲಿ (ನ.20): ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್‌ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಇಂದಿರಾ ಗಾಂಧಿ ಹೆಸರಿನ ಹೊಸ ರೇಷನ್ ಕಿಟ್:

ಅವರು ಜೋಳದ ಖರೀದಿ ಬೆಲೆ ಹಾಗೂ ‘ಇಂದಿರಾ ಕಿಟ್‌’ ಯೋಜನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಮಾಧ್ಯಮಕ್ಕೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು. 

ಇಂದಿರಾ ಕಿಟ್‌ನಲ್ಲಿ ಏನಿರುತ್ತೆ?

ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರುತ್ತದೆ ಎಂದು ಸಚಿವರು ವಿವರಿಸಿದರು. ಇನ್ನು ತಮ್ಮ ಭಾಷಣದಲ್ಲಿ ಸಚಿವರು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌)ಗೆ ಸಾಕಷ್ಟು ಜೋಳ ದೊರಕದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಜನತೆ ಅಕ್ಕಿಗಿಂತ ಜೋಳವನ್ನೇ ಹೆಚ್ಚು ಬಳಸುವುದನ್ನು ಉದಾಹರಿಸಿದ ಅವರು, ಉತ್ಪಾದನೆ ಮತ್ತು ಶೇಖರಣೆಯ ಬಗ್ಗೆ ಸಮಗ್ರ ಯೋಜನೆ ಅಗತ್ಯವಿದೆ ಎಂದರು.

ವಿಶೇಷವಾಗಿ ‘ಮಾಲ್ದಂಡ್ಯ’ ಜಾತಿಯ ಜೋಳದ ಬೆಲೆ ಸಮಸ್ಯೆಯನ್ನು ಎತ್ತಿ ತೋರಿಸಿದ ಮುನಿಯಪ್ಪ ಅವರು, ‘ಈ ಜೋಳದ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕ್ವಿಂಟಟ್‌ಗೆ 1000 ರಿಂದ 1500 ಕಡಿಮೆಯಿದೆ. ಇದರ ಬೆಲೆಯನ್ನು ಹೆಚ್ಚಿಸಿದರೆ ರೈತರು ಸರ್ಕಾರಕ್ಕೆ ಸರಬರಾಜು ಮಾಡಲು ಪ್ರೋತ್ಸಾಹಿತರಾಗುತ್ತಾರೆ’ ಎಂದರು. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಉತ್ತರ ಕರ್ನಾಟಕದ ಮಂತ್ರಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿದ ಅವರು, ರಾಜ್ಯದ ಬೆಲೆ ನಿಗಧೀಕರಣ ಸಮಿತಿಯು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (ಪಿಎಂಜಿಕೆವೈ) ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು ಎಂದು ಮುನಿಯಪ್ಪ ಅವರು ಘೋಷಿಸಿದರು. ಈ ಕಿಟ್ಟನ್ನು ‘ಇಂದಿರಾ ಕಿಟ್‌’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇರಿರುತ್ತದೆ ಎಂದು ಸಚಿವರು ವಿವರಿಸಿದರು. ‘ಈ ಪದಾರ್ಥಗಳನ್ನು ನೀಡುವುದರಿಂದ ನೇರವಾಗಿ ಆ ಕುಟುಂಬಕ್ಕೆ ಸೇರುತ್ತದೆ. ಇದು ಪ್ರೋಟೀನ್ ಸಮೃದ್ಧ ಆಹಾರವಾಗಿದ್ದು, ಮಕ್ಕಳು ಮತ್ತು ಕುಟುಂಬದ ಎಲ್ಲ ಸದಸ್ಯರ ಬೆಳವಣಿಗೆಗೆ ಉಪಯುಕ್ತವಾಗಿದೆ’ ಎಂದು ಅವರು ತಿಳಿಸಿದರು.

ಈ ಯೋಜನೆಯನ್ನು ಜನವರಿ ಅಥವಾ ಅಂತಿಮವಾಗಿ ಫೆಬ್ರವರಿ 2025ರ ಹೊತ್ತಿಗೆ ಕಾರ್ಯರೂಪಕ್ಕೆ ತರಲು ಟೆಂಡರ್ ಪ್ರಕ್ರಿಯೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ ಎಂದು ಮುನಿಯಪ್ಪ ಅವರು ಸ್ಪಷ್ಟಪಡಿಸಿದರು.

ಪೌಷ್ಟಿಕ ಆಹಾರಕ್ಕೆ ಇಂದಿರಾ ಕಿಟ್‌ ಸಾಕ್ಷಿ । ಪಡಿತರ ವಿತರಣೆಗೆ ಸಾಲುತ್ತಿಲ್ಲ ಜೋಳ: ಸಚಿವ