ಸುಪ್ರೀಂಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳ ನೇಮಕದಲ್ಲಿ ಕನ್ನಡಿಗರನ್ನು ಕಡೆಗಣಿಸಿ ಉತ್ತರ ಭಾರತೀಯರಿಗೆ ಆದ್ಯತೆ ನೀಡಿದೆ ಎಂಬ ಆರೋಪ ಸಿದ್ದರಾಮಯ್ಯ ಸರ್ಕಾರದ ಮೇಲೆ ಕೇಳಿಬಂದಿದೆ. ಆರು ಹುದ್ದೆಗಳಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಕನ್ನಡರಾಮಯ್ಯ ಅವರಿಗೆ ಕನ್ನಡಿಗರೇ ಕಾಣುತ್ತಿಲ್ಲ! ಕನ್ನಡಿಗರ ಹುದ್ದೆ ಕಿತ್ತು ಉತ್ತರ ಭಾರತದವರಿಗೆ ಕೊಟ್ಟ ಸಿದ್ದರಾಮಯ್ಯ ಸರ್ಕಾರ. ಕನ್ನಡ ರಾಮಯ್ಯ ಸರ್ಕಾರದ ಲ್ಲಿ ಹಿಂದಿ ವಕೀಲರ ದರ್ಬಾರ್! ವಕೀಲರ ಆಯ್ಕೆಯಲ್ಲಿ ಕನ್ನಡಿಗರಿಗೆ ಕೈಕೊಟ್ಟ ಸಿದ್ದು ಸರ್ಕಾರ. ಹೈಕಮಾಂಡ್ ಒತ್ತಡಕ್ಕೆ ಮಣಿಯಿತಾ ಸಿದ್ದು ಸರ್ಕಾರ. ಸುಪ್ರೀಂಕೋರ್ಟ್ ಹೆಚ್ಚುವರಿ ಅಡ್ವೋಕೇಟ್ ಜನರಲ್ ಗಳ ನೇಮಕದಲ್ಲಿ ಹಿಂದಿವಾಲಾಗಳೇ ಮೇಲಗೈ ಆರು ಹುದ್ದೆಗಳ ಪೈಕಿ ಒಬ್ಬರು ಮಾತ್ರ ಕನ್ನಡದವರು. ಹೌದು ಇಂತಹದ್ದೊಂದು ಸುದ್ದಿ ಈಗ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಸುಪ್ರೀಂ ಕೋರ್ಟ್‌ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ನೇಮಕ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡಿಗರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ. ಆರು ಹುದ್ದೆಗಳ ಪೈಕಿ ಕೇವಲ ಒಬ್ಬರು ಮಾತ್ರ ಕನ್ನಡದ ಮೂಲದ ವಕೀಲರಾಗಿದ್ದಾರೆ, ಉಳಿದ ಐವರು ಉತ್ತರ ಭಾರತೀಯ ವಕೀಲರಾಗಿದ್ದಾರೆ. ಇದರ ಜೊತೆಗೆ ಎಐಸಿಸಿ ಲೀಗಲ್ ಸೆಲ್ ಸದಸ್ಯರು, ಉಸ್ತುವಾರಿ ಆಪ್ತರು, ಖ್ಯಾತ ವಕೀಲ ಮಕ್ಕಳಿಗೆ ಹುದ್ದೆ ನೀಡಿರುವುದು ವಿವಾದಕ್ಕೆ ದಾರಿ ಮಾಡಿದೆ.

ನೆಮಕಗೊಂಡಿರುವ ವಕೀಲರು:

  • ಅಮನ್ ಪವಾರ್
  • ಅವಿಷ್ಕರ್ ಸಿಂಘ್ವಿ
  • ಮೊಹಮ್ಮದ್ ಅಲಿ ಖಾನ್
  • ಪ್ರತೀಕ್ ಚಡ್ಡಾ
  • ತರನ್ನೂಮ್ ಚೀಮಾ
  • ನಿಶಾಂತ್ ಪಾಟೀಲ್ (ಒಬ್ಬನೇ ಕನ್ನಡ ಮೂಲದವರು)

ವೇತನ ಎಷ್ಟು?

ಈ ಪೈಕಿ ಅಮನ್ ಪವಾರ್ ಮತ್ತು ಮೊಹಮ್ಮದ್ ಅಲಿ ಖಾನ್ ಎಐಸಿಸಿ ಲೀಗಲ್ ಸೆಲ್‌ಗೆ ಸಂಬಂಧಿಸಿದವರು. ಅವಿಷ್ಕರ್ ಸಿಂಘ್ವಿ ಖ್ಯಾತ ವಕೀಲ ಅಭಿಷೇಕ್ ಮನುಸಿಂಘ್ವಿಯ ಪುತ್ರ. ಪ್ರತೀಕ್ ಚಡ್ಡಾ ಮತ್ತು ತರನ್ನುಮ್ ಚೀಮಾ ರಾಬರ್ಟ್ ವಾದ್ರಾ ಸಂಬಂಧಿತ ವಕೀಲರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಕೀಲರಿಗೆ ಸರ್ಕಾರ ಪ್ರತಿ ತಿಂಗಳು ₹75,000 ವೇತನವನ್ನೂ, ಪ್ರತಿ ಕೇಸ್ ವಿಚಾರಣೆಗೆ ₹25,000 ಪಾವತಿಸುತ್ತಿದೆ ಎನ್ನಲಾಗಿದೆ.

ಸ್ಥಳೀಯರ ಕಡೆಗಣನೆ:

ಇತ್ತ ಕಳೆದ 16 ವರ್ಷಗಳಿಂದ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ವಿ.ಎನ್. ರಘುಪತಿಗೆ ಮುಂದುವರಿಕೆ ನೀಡದೆ ಉತ್ತರ ಭಾರತೀಯ ಸಂಚೀತ್ ಗಾರ್ಗ್ ಅವರನ್ನು ನೇಮಿಸಿರುವುದು ಮತ್ತೊಂದು ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರಿಗೆ ಕೇವಲ ಕೋಕ್, ಹುದ್ದೆ ಮಾತ್ರ ಅನ್ಯಭಾಷಿಕರಿಗೆ ಎಂಬ ಅಭಿಪ್ರಾಯ ಹುಟ್ಟಿಕೊಂಡಿದೆ. ಮೂರು ಎಓಆರ್ (ಅಡ್ವೊಕೇಟ್ ಆನ್ ರೆಕಾರ್ಡ್) ಹುದ್ದೆಗಳಲ್ಲಿ ಇಬ್ಬರು ಉತ್ತರ ಭಾರತೀಯರು, ಕೇವಲ ಒಬ್ಬರೇ ಕನ್ನಡಿಗ ಎಂಬ ತೀಕ್ಷ್ಣ ಮಾಹಿತಿ ಇದೀಗ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಹೈಕಮಾಂಡ್ ಒತ್ತಡ?

ಈ ನೇಮಕದಲ್ಲಿ ಎಐಸಿಸಿ ಲೀಗಲ್ ಸೆಲ್ ಸದಸ್ಯರು, ಕಾಂಗ್ರೆಸ್‌ನ ಉಸ್ತುವಾರಿ ನಾಯಕರು ಮತ್ತು ಹಿರಿಯ ನಾಯಕರ ಆಪ್ತರ ಪುತ್ರರಿಗೆ ಮಣೆ ಹಾಕಲಾಗಿರುವ ಹಿನ್ನೆಲೆಯಲ್ಲಿ. ಇದರಿಂದ ರಾಜ್ಯದ ಹಿರಿಯ ವಕೀಲರಲ್ಲಿ ಅಸಮಾಧಾನ ಉಂಟಾಗಿದೆ. ಜೊತೆಗೆ ಇಲ್ಲೂ ನಡೆಯಿತಾ ಸುರ್ಜೇವಾಲ, ಸಿಂಘ್ವಿ ಆಟ ಎಂಬುದು ಈಗ ಸದ್ಯಕ್ಕೆ ಚರ್ಚೆಯಲ್ಲಿರುವ ವಿಷ್ಯ.

ದೆಹಲಿಯಲ್ಲಿ ಸುಮಾರು 200 ಮಂದಿ ಕನ್ನಡಿಗ ವಕೀಲರು ಇದ್ದಾರೆ. ಹಿರಿಯ ವಕೀಲರು , ಮೂರು ದಶಕ ವಕೀಲ ವೃತ್ತಿಯಲ್ಲಿ ಕಳೆದವರು ಇದ್ದಾರೆ. ಕನ್ನಡಿಗರ ಹುದ್ದೆ ತೆಗೆದು, ಹಿಂದೀವಾಲಗಳಿಗೆ ಕೊಡುವುದು ಎಷ್ಡು ಸರಿ? ಕರ್ನಾಟಕದ ಬಗ್ಗೆ ಹೆಚ್ಚು ಕಾಳಜಿ ತೋರುವ ಕಾನೂನು ಮಂತ್ರಿ ಹೆಚ್ ಕೆ ಪಾಟೀಲ್ ಈ ಬಗ್ಗೆ ಚಕಾರ ಎತ್ತಿಲ್ಲ. ಕನ್ನಡ, ಕನ್ನಡ ನಾಡಿನ ಹಿನ್ನೆಲೆ ತಿಳಿಯದವರಿಗೆ ಕೇಸ್ ಕೊಟ್ಟು ಸರ್ಕಾರ ಮುಜುಗರ ಅನುಭವಿಸುವ ದಿನಗಳು ದೂರ ಇಲ್ಲ. ಇದು ಕಾನೂನು ಸಚಿವ ಎಚ್ ಕೆ ಪಾಟೀಲ್ ನೋಡಲೇ ಬೇಕಾದ ಸುದ್ದಿ.