ಸಿಎಂ ಹುದ್ದೆ ಖಾಲಿ ಇಲ್ಲ: ಪರೋಕ್ಷವಾಗಿ ಡಿಕೆಶಿ ಬಣಕ್ಕೆ ಟಾಂಗ್ ನೀಡಿದ ಸಚಿವ ಎಚ್‌ಸಿ ಮಹದೇವಪ್ಪ

ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಬಣಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.

CM post is not vacant says Dr H.C Mahadevappa at mysuru rav

ಮೈಸೂರು (ಅ.30) :  ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಬಣಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಆ ಹುದ್ದೆಯ ಬಗ್ಗೆ ಚರ್ಚೆ ಅನಗತ್ಯ. ಖಾಲಿ ಇಲ್ಲದ ಹುದ್ದೆ ಬಗ್ಗೆ ಚರ್ಚೆ ಯಾಕೆ ಎಂದು ಪ್ರಶ್ನಿಸಿದರು.

ಡಾ.ಜಿ. ಪರಮೇಶ್ವರ್ಆಹ್ವಾನ ನೀಡಿದ್ದು ರಾಜಕೀಯ ವಿಷಯವಾಗಿ ಅಲ್ಲ. ರಾತ್ರಿ ಊಟಕ್ಕೆ ಕರೆದಿದ್ದರು. ಅಲ್ಲಿ ಮುದ್ದೆ ಬಿಟ್ಟು ಯಾವ ಹುದ್ದೆಯ ಬಗ್ಗೆಯೂ ಚರ್ಚೆಯಾಗಿಲ್ಲ. ಚರ್ಚೆಗೆ ವಿಷಯಗಳೇ ಇಲ್ಲದಿರುವಾಗ ಇಂಥ ವಿಚಾರಗಳು ಮುನ್ನೆಲೆಗೆ ಬರುತ್ತವೆ ಎಂದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸವಾಲು; ಎಐಸಿಸಿ ಅಧ್ಯಕ್ಷ ಖರ್ಗೆ ಆಪ್ತನಿಂದಲೇ ಸರ್ಕಾರ ಬದಲಾವಣೆ ಮಾತು!

ಪರಮೇಶ್ವರ್ ಮನೆಯಲ್ಲಿ ಊಟ ಬಿಟ್ಟು ಬೇರೇನೂ ಚರ್ಚೆ ಇಲ್ಲ. ಓನ್ಲಿ ಮುದ್ದೆ, ನೋ ಹುದ್ದೆ. ಅಲ್ಲಿ ಊಟ ಮತ್ತು ರುಚಿ ಮಾತ್ರವಿತ್ತು. ಡಿನ್ನರ್ ಕೂಟಕ್ಕೆ ರಾಜಕೀಯ ವ್ಯಾಖ್ಯಾನ ಸರಿಯಲ್ಲ ಎಂದು ಅವರು ಹೇಳಿದರು.

ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಪ್ರಸ್ತಾಪವಿಲ್ಲ. ಇದನ್ನೆಲ್ಲ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.

ತಿರುಗೇಟು

ಮಹಿಷಾ ದಸರಾಗೆ ಸರ್ಕಾರ ಪ್ರೋತ್ಸಾಹ ನೀಡಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂವಿಧಾನದ ಆಶಯದಂತೆ ಎಲ್ಲರಿಗೂ ಅವಕಾಶ ನೀಡಲಾಗುತ್ತದೆ. ರಾಜ್ಯ ಸರ್ಕಾರವು ಮಹಿಷಾ ದಸರಾಗೆ ಪ್ರೋತ್ಸಾಹ ನೀಡಿದಂತಲ್ಲ. ಹೀಗಾಗಿಯೇ, ಸಂವಿಧಾನ ಪೀಠಿಕೆಯನ್ನು ಎಲ್ಲಾ ಕಡೆ ಓದಿಸಲಾಗುತ್ತಿದೆ. ಅದನ್ನು ಓದಿಕೊಂಡರೇ ಎಲ್ಲವೂ ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

ಸಿಎಂ ಬದಲಾವಣೆ ಖರ್ಗೆ, ಸೋನಿಯಾ ಗಾಂಧಿಗಷ್ಟೇ ಗೊತ್ತು: ಬಿ.ಕೆ.ಹರಿಪ್ರಸಾದ್

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರಿಗೆ ಬೆದರಿಕೆ ಕರೆ ಸಂಬಂಧ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ವಾಕ್ಸ್ವಾತಂತ್ರ್ಯ ಹತ್ತಿಕ್ಕಿದರೆ ಪ್ರಜ್ರಾಭುತ್ವ ಹೋಗುತ್ತದೆ. ಪ್ರಜಾಪ್ರಭುತ್ವದ ಕತ್ತು ಹಿಚುಕಿದಂತೆ. ಮಾತನಾಡದಂತೆ ಬೆದರಿಕೆ ಕರೆ ಬಂದಿರುವ ಬಗ್ಗೆ ಅವರು ದೂರು ನೀಡಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

ಸಚಿವ ಎಂ.ಬಿ. ಪಾಟೀಲ್ ಅವರು ಕರ್ನಾಟಕವನ್ನು ಬಸವನನಾಡು ಎಂದಾಗಬೇಕೆಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಬಸವ ಚಳವಳಿ ತೀವ್ರವಾಗಬೇಕು ಎಂದು ಅಭಿಪ್ರಾಯಪಟ್ಟರು.

Latest Videos
Follow Us:
Download App:
  • android
  • ios