ಸಿದ್ದರಾಮಯ್ಯ ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸವಾಲು; ಎಐಸಿಸಿ ಅಧ್ಯಕ್ಷ ಖರ್ಗೆ ಆಪ್ತನಿಂದಲೇ ಸರ್ಕಾರ ಬದಲಾವಣೆ ಮಾತು!
ಎರಡೂವರೆಗೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯ ಶಾಸಕರೇ ಟೆನ್ಷನ್ ಮೇಲೆ ಟೆನ್ಷನ್ ನೀಡುತ್ತಿದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರೆಂದು ಗುರುತಿಸಿಕೊಂಡಿರುವ ಶಾಸಕರಿಂದ ಮತ್ತೆ ಸರ್ಕಾರ ಬದಲಾವಣೆಯ ಕೂಗು ಎದ್ದಿದೆ. ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟದ ನಡುವೆಯೇ ಹೊಸ ಬಾಂಬ್.
ಯಾದಗಿರಿ (ಅ.30): ಎರಡೂವರೆಗೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯ ಶಾಸಕರೇ ಟೆನ್ಷನ್ ಮೇಲೆ ಟೆನ್ಷನ್ ನೀಡುತ್ತಿದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರೆಂದು ಗುರುತಿಸಿಕೊಂಡಿರುವ ಶಾಸಕರಿಂದ ಮತ್ತೆ ಸರ್ಕಾರ ಬದಲಾವಣೆಯ ಕೂಗು ಎದ್ದಿದೆ. ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟದ ನಡುವೆಯೇ ಹೊಸ ಬಾಂಬ್.
ಸುರಪುರದಲ್ಲಿ ವಾಲ್ಮೀಕಿ ಜಯಂತಿಯ ವೇಳೆ ಭಾಷಣ ಮಾಡುವಾಗ ಸರ್ಕಾರವನ್ನು ಬದಲಿಸುವ ತಾಕತ್ತು ವಾಲ್ಮೀಕಿ ಸಮುದಾಯಕ್ಕಿದೆ ಎಂದ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ. ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗೆ ಇದೆ. ಆ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿರುವ ಶಾಸಕ ವೆಂಕಟಪ್ಪ ನಾಯಕ. ಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಬೆಂಬಲಿಸಿ ಈ ಹೇಳಿಕೆ ನೀಡಿದ್ರಾ ಶಾಸಕ ವೆಂಕಟಪ್ಪ ನಾಯಕ? ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಶುರುವಾಗಿರುವ ಹೊತ್ತಲ್ಲಿ ಶಾಸಕರ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕರ ಹೇಳಿಕೆ.
2.5 ವರ್ಷ ಬಳಿಕ ಸಂಪುಟದಲ್ಲಿ ಬದಲಾವಣೆ:ಕಾಂಗ್ರೆಸ್ ಶಾಸಕ ಹೊಸ ಬಾಂಬ್!
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಬೆಳಗಾವಿ ರಾಜಕಾರಣದಲ್ಲಿ ಹಸ್ತಾಕ್ಷೇಪ ವಿಚಾರದಲ್ಲಿ ಸತೀಶ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ಇತ್ತ ಪರೋಕ್ಷವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಧಿಕಾರಿಗಳ ವರ್ಗಾವಣೆ, ಫೈಲ್‌ಗಳು ನಾಪತ್ತೆ ಸತೀಶ ಜಾರಕಿಹೊಳಿ-ಡಿಕೆಶಿ ಮಧ್ಯೆ ಭಿನ್ನಮತ ಶುರುವಾಗಿದೆ ಎಂದು ಸ್ವಪಕ್ಷದ ಸಚಿವರೇ ಹೇಳಿದ್ದಾರೆ. ಈ ಹಿನ್ನೆಲೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ ಸಂಚಲನ ಮೂಡಿಸಿದೆ. ಸತೀಶ ಜಾರಕಿಹೊಳಿಗೆ ಪರೋಕ್ಷ ಬೆಂಬಲ ನೀಡಿದ್ರಾ ಶಾಸಕ ರಾಜಾ ವೆಂಕಟಪ್ಪ ನಾಯಕ? ಸರ್ಕಾರ ಬದಲಾವಣೆ ವಿಚಾರ ಬಹಿರಂಗವಾಗಿ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕ್ಯಾರೇ ಎನ್ನದ ಶಾಸಕರು ಸಚಿವರುಗಳು. ಸ್ವಪಕ್ಷೀಯರಿಂದ ಸರ್ಕಾರಕ್ಕೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿರುವುದಂತೂ ದಿಟ.