Asianet Suvarna News Asianet Suvarna News

ಆರೋಗ್ಯ ಇಲಾಖೆಯ 262 ಹೊಸ ಆಂಬ್ಯುಲೆನ್ಸ್‌ ಸೇವೆಗಳಿಗೆ ಇಂದು ಸಿಎಂ ಚಾಲನೆ

ರಾಜ್ಯದ ಆರೋಗ್ಯ ಇಲಾಖೆಯ ನೂತನ 262 ಆಂಬ್ಯುಲೆನ್ಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಇದೀಗ,  108 ಆಂಬ್ಯುಲೆನ್ಸ್‌  ಸೇವೆ ಬಲಪಡಿಸಲು ಹೊಸ ಆಂಬ್ಯುಲೆನ್ಸ್‌ ಸೇವೆಗಳಿಗೆ ಚಾಲನೆ ನೀಡುವ ಮೂಲಕ ಆರಂಭಿಸಲಾಗುತ್ತಿದೆ

CM launched 262 new ambulance services today at bengaluru rav
Author
First Published Nov 30, 2023, 8:43 AM IST

ಬೆಂಗಳೂರು (ನ.30): ರಾಜ್ಯದ ಆರೋಗ್ಯ ಇಲಾಖೆಯ ನೂತನ 262 ಆಂಬ್ಯುಲೆನ್ಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಇದೀಗ,  108 ಆಂಬ್ಯುಲೆನ್ಸ್‌  ಸೇವೆ ಬಲಪಡಿಸಲು ಹೊಸ ಆಂಬ್ಯುಲೆನ್ಸ್‌ ಸೇವೆಗಳಿಗೆ ಚಾಲನೆ ನೀಡುವ ಮೂಲಕ ಆರಂಭಿಸಲಾಗುತ್ತಿದೆ. 82.02 ಕೋಟಿ ರೂ. ವೆಚ್ಚದಲ್ಲಿ 262 ಆಂಬ್ಯುಲೆನ್ಸ್‌ ಗಳು ಖರೀದಿಸಲಾಗಿತ್ತು. 262 ಪೈಕಿ 157 BLS(ಬೇಸಿಕ್ ಲೈಫ್ ಸಪೋರ್ಟ್) ಹಾಗೂ 105 ALS ( ಅಡ್ವಾನ್ಸ್ ಲೈಫ್ ಸಪೋರ್ಟ್) ಆಂಬ್ಯುಲೆನ್ಸ್‌ ಗಳಾಗಿವೆ. ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿಗಳಲ್ಲಿ ಇವು ಸಹಕರಿಯಾಗಲಿವೆ. 

ರಾಜ್ಯದಲ್ಲಿ 108 ಆಂಬ್ಯುಲೆನ್ಸ್‌ ಸೇವೆಗೆ ಮತ್ತಷ್ಟುಬಲ ನೀಡಲು 262 ಹೊಸ ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯ ಉಪಕರಣ ಖರೀದಿಸಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಹೊಸ ಆಂಬುಲೆನ್ಸ್ ಸೇವೆ ಚಾಲನೆ ನೀಡಲಾಗ್ತಿದೆ.ಈ ಸೇವೆಯಿಂದಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕರೆಮಾಡಿದ  15 ರಿಂದ 20 ನಿಮಿಷದಲ್ಲಿ ಆಂಬುಲೆನ್ಸ್ ಸೇವೆ ಸಿಗಲಿದೆ. ಜನರಿಗೆ ತ್ವರಿತಗತಿಯಲ್ಲಿ ಸೇವೆ ಲಭ್ಯವಾಗುವ ಉದ್ದೇಶದಿಂದ 262 ಹೊಸ ಆಂಬ್ಯುಲೆನ್ಸ್‌ ಖರೀದಿಸಿದೆ.

ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ: ಸಿದ್ದರಾಮಯ್ಯ

262 ಆ್ಯಂಬುಲೆನ್ಸ್‌ಗಳಲ್ಲಿ 157 ಬೇಸಿಕ್‌ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಹಾಗೂ 105 ಎಎಲ್‌ಎಸ್ (ಸುಧಾರಿತ ಲೈಫ್‌ ಸಪೋರ್ಟ್‌ ಆ್ಯಂಬುಲೆನ್ಸ್ ) ಇರಲಿವೆ. ಎಎಲ್‌ಎಸ್‌ ಆ್ಯಂಬುಲೆನ್ಸ್‌ಗಳು ವೆಂಟಿಲೇಟರ್‌ ಹಾಗೂ ಡಿಫ್ರಿಬಿಲೇಟರ್‌ಗಳನ್ನು ಒಳಗೊಂಡಿರಲಿದೆ. ಹೀಗಾಗಿ ಹೃದಯ ಹಾಗೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಿಗೂ ಯಾವುದೇ ಪ್ರಾಣಾಪಾಯ ಇಲ್ಲದೆ ಆಸ್ಪತ್ರೆಗೆ ಸಾಗಿಸಲು ಅನುವಾಗುತ್ತದೆ. ಪ್ರತಿ ಆ್ಯಂಬುಲೆನ್ಸ್‌ ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ-ಶುಶ್ರೂಷಾ ಸಿಬ್ಬಂದಿ) ಮತ್ತು ಒಬ್ಬ ಪೈಲಟ್‌ (ಚಾಲಕ) ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಒತ್ತು ನೀಡಲು 262 ಹೊಸ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ವಿಧಾನಸೌಧ ಬಳಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸೇವೆಗೆ ಅರ್ಪಿಸಲಿದ್ದಾರೆ . 262 ಆ್ಯಂಬುಲೆನ್ಸ್ ಸೇರ್ಪಡೆಯೊಂದಿಗೆ ಒಟ್ಟು 715 ಆ್ಯಂಬುಲೆನ್ಸ್‌ 108 ಆರೋಗ್ಯ ಕವಚ ಸೇವೆಯಲ್ಲಿ ಕಾರ್ಯನಿರ್ವಹಿಸಲಿವೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

 

Follow Us:
Download App:
  • android
  • ios