ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರಿ ತಣ್ಣಗಾಗುತ್ತಿರುವಾಗಲೇ, ಮುಖ್ಯಮಂತ್ರಿಗಳು ನೋಟಿಸ್ ಪೀರಿಯಡ್‌ನಲ್ಲಿ ಇದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೈಕಮಾಂಡ್‌ನಿಂದಲೇ ಈಗಾಗಲೇ ಸಿದ್ದುಗೆ ನೋಟಿಸ್‌ ರಾಜ್ಯದಿಂದ ಕಮಿಷನ್‌ ಸಂಗ್ರಹಿಸಿ ಪಂಚರಾಜ್ಯಕ್ಕೆ ಬಳಕೆಯಾಗ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ನ.13): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರಿ ತಣ್ಣಗಾಗುತ್ತಿರುವಾಗಲೇ, ಮುಖ್ಯಮಂತ್ರಿಗಳು ನೋಟಿಸ್ ಪೀರಿಯಡ್‌ನಲ್ಲಿ ಇದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ಈಗಾಗಲೇ ನೋಟಿಸ್ ನೀಡಿದ್ದು, ಮುಖ್ಯಮಂತ್ರಿಗಳು ನೋಟಿಸ್ ಪೀರಿಯಡ್‌ನಲ್ಲಿದ್ದಾರೆ. ಈ ಕುರಿತು ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಆಪಾದಿಸಿದರು.

ಇನ್ಮುಂದೆ ನಾನು ನಿದ್ದೆ ಮಾಡಲ್ಲ; ರಾಜ್ಯಾದ್ಯಂತ ಓಡಾಡುವೆ: ಎಂಪಿ ರೇಣುಕಾಚಾರ್ಯ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗೆ ಹಣ ಸಂಗ್ರಹಿಸಿ ಕೊಡುವ ಟಾರ್ಗೆಟ್‌ ಅನ್ನು ಹೈಕಮಾಂಡ್ ನೀಡಿದೆ. ಹೆಚ್ಚು ಹಣ ಕೊಟ್ಟವರು ಸಚಿವರಾಗಿ ಮುಂದುವರೆಯುತ್ತಾರೆ. ಇಲ್ಲದಿದ್ದರೆ ಎರಡೂವರೆ ವರ್ಷಗಳ ಬಳಿಕ ತೆಗೆದು ಹಾಕುತ್ತಾರೆ. ಕರ್ನಾಟಕದಲ್ಲಿ ಕಮಿಷನ್ ಸಂಗ್ರಹಿಸಿ ಅದನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ. ಒಂದು ರಾಜ್ಯ, ಐದು ಚುನಾವಣೆ ಎನ್ನುವಂತಾಗಿದೆ ಎಂದರು.

ಎಚ್‌ಡಿಕೆಗೆ ಕಾಂಗ್ರೆಸ್‌ ಜತೆ ಏನು ಸಂಬಂಧ?

ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ. ನಾವೆಲ್ಲ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಬೇರೆ ಚರ್ಚೆಯೇ ಇಲ್ಲ.

- ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ