ಸಿಎಂ ಇಬ್ರಾಹಿಂ ಜೆಡಿಎಸ್ ಬಿಡುವುದಿಲ್ಲ ಅವರೇ ಮುಂದೆ ನಿಂತು ಮೈತ್ರಿಗೆ ಸಹಕರಿಸಿದ್ದಾರೆ : ಜಿಟಿಡಿ
ಸಿಎಂ ಇಬ್ರಾಹಿಂ ಜೆಡಿಎಸ್ ಬಿಡುವುದಿಲ್ಲ. ಅವರಿಗೆ ಬಿಜೆಪಿ ಜೊತೆಗೆ ಹೋಗಲು ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಅನೌನ್ಸ್ ಮಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೆಗೌಡ ಹೇಳಿದರು.
ವಿಜಯಪುರ (ಅ.12) : ಸಿಎಂ ಇಬ್ರಾಹಿಂ ಜೆಡಿಎಸ್ ಬಿಡುವುದಿಲ್ಲ. ಅವರಿಗೆ ಬಿಜೆಪಿ ಜೊತೆಗೆ ಹೋಗಲು ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಅನೌನ್ಸ್ ಮಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೆಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಅವರು ಬಿಜೆಪಿ ಜೊತೆಗೆ ಹೋಗಲು ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಅನೌನ್ಸ್ ಮಾಡಿದ್ದಾರೆ. ಸಿ.ಎಂ ಇಬ್ರಾಹಿಂ ಅವರದ್ದು ಈಗ ಏನೂ ಚರ್ಚೆ ಇಲ್ಲ. ಮುಂದೆ ಒಟ್ಟಾಗಿ ಹೇಗೆ ಹೋಗಬೇಕು ಅನ್ನೋದು ಇಬ್ರಾಹಿಂ ಸಲಹೆ ಇದೆ ಎಂದರು.
ಜೆಡಿಎಸ್ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ, ಅವರೇ ನಮ್ಮ ಮನೆಗೆ ಬಂದಿದ್ದರು: ಸಿಎಂ ಇಬ್ರಾಹಿಂ
ದೊಡ್ಡಗೌಡರ ಜೊತೆಗೆ ಸಲಹೆ ಹಂಚಿಕೊಂಡಿದ್ದಾರೆ. ಬಿಜೆಪಿ ಜೊತೆಗೆ ಎಷ್ಟು ಸೀಟ್ ಹಂಚಿಕೆಯಾಗಬೇಕು? ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಲಹೆ ಇಬ್ರಾಹಿಂ ಅವರದ್ದು ಇದೆ. ಬಿಜೆಪಿ ಜೊತೆ ಹೋಗಲು ಯಾವುದೆ ವಿರೋಧವಿಲ್ಲ ಅನ್ನೋದನ್ನು ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಶಾಸಕ ಕಾಗೆ ಹಾಗೂ ಬಿ.ಆರ್.ಪಾಟೀಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಭೀಕರವಾದ ಬರಗಾಲದಲ್ಲೂ ಸರ್ಕಾರ ರೈತರ ಕಡೆಗೆ ನೋಡುತ್ತಿಲ್ಲ. ರೈತರಿಗೆ ನೀಡಬೇಕಾದ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಜನರಿಗೆ ಕೊರಗು ಉಂಟಾಗಿದೆ. ಕಾಂಗ್ರೆಸ್ ತಂದು ತಪ್ಪು ಮಾಡಿದ್ದೇವೆ ಎಂದು ಜನರಿಗೆ ಮನದಟ್ಟಾಗಿದೆ ಎಂದರು.
ಸಿದ್ಧಾಂತ ಒಪ್ಪಿ ಬರೋದಾದ್ರೆ ಬರ್ಲಿ, ಸಿಎಂ ಇಬ್ರಾಹಿಂ ಘರ್ ವಾಪಸಿಗೆ ನಮ್ಮ ವಿರೋಧ ಇಲ್ಲ; ಡಾ.ಜಿ.ಪರಮೇಶ್ವರ್
ಇನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಬೇಕಿದೆ. ಇದಕ್ಕಾಗಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋಗಬೇಕು. ಮುಂದೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ಅವರನ್ನು ಉಳಿಸುವ ನಿರ್ಣಯ ಮಾಡಿದ್ದೇವೆ ಎಂದು ಹೇಳಿದರು.