ಹಾಸನ: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಣೆ ಮಾಡುವುದರಿಂದ ಯಾವುದೇ ಪರಿಹಾರ ಸಿಗಲ್ಲ. ದೇವೇಗೌಡರು ಪ್ರಧಾನಿ ಆಗಿದ್ದಾಗ ಯಾವುದೇ ರಕ್ತದೋಕುಳಿ ನಡೆದಿರಲಿಲ್ಲ. 

ಆಗಿದ್ದ ಅನ್ಯೋನ್ಯತೆ, ಈಗ ಯಾಕೆ ಇಲ್ಲ ಎಂಬುದನ್ನು ಚಿಂತಿಸಬೇಕು. ಕೇವಲ ವೇದಿಕೆ ಮೇಲೆ ನಿಂತು ನಿಮ್ಮ ದುಃಖ ಹೇಳಿಕೊಂಡರೆ ಪರಿಹಾರ ಸಿಗಲ್ಲ ಎಂದು ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ. 

ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ದಂಡಂದಶಗುಣ ನೀತಿಯೂ ಬೇಕು, ಇನ್ನೊಂದೆಡೆ ಪ್ರೀತಿ, ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸುವ ಮನಸ್ಸೂ ಬೇಕು ಎಂದರು.