Asianet Suvarna News Asianet Suvarna News

Panchamasali: ಸಿಎಂ ತಾಯಿ ಮೇಲೆ ಆಣೆಯಿಟ್ಟು ಪಂಚಮಸಾಲಿಗೆ ಮೋಸ ಮಾಡಿದ್ದಾರೆ: ಜಯಮೃತ್ಯುಂಜಯ ಶ್ರೀ

ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ 2 ವರ್ಷಗಳಿಂದ ಹೋರಾಟ
ಸಿಎಂ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿದ್ದರಿಂದ ಸುಮ್ಮನಾಗಿದ್ದೆವು
ಚುನಾವಣೆಗೆ 80 ದಿನಗಳು ಬಾಕಿಯಿದ್ದು, ಈಗ ಒತ್ತಾಯ ಮಾಡದಿದ್ದರೆ ಮೀಸಲಾತಿ ಸಾಧ್ಯವಿಲ್ಲ
 

CM cheated Panchamasali by swearing on his mother Jayamruthyunjaya swamiji Sat
Author
First Published Jan 14, 2023, 5:00 PM IST

ಬೆಂಗಳೂರು (ಜ.14): ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ 2 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ನಾವು ಸುವರ್ಣಸೌಧ ಮುತ್ತಿಗೆ ಹಾಕಲು ಮುಂದಾಗಿದ್ದೆವು. ಆದರೆ, ಸಿಎಂ ಬೊಮ್ಮಾಯಿ ಅವರು ತಮ್ಮ ತಾಯಿ ಮೇಲೆ ಆಣೆ ಮಾಡಿದ್ದರಿಂದ ಸುಮ್ಮನಾಗಿದ್ದೆವು. ಆದರೆ, ಸರ್ಕಾರ ನಮಗೆ ಮೋಸ ಮಾಡಿದ್ದರಿಂದ ಹೋರಾಟ ಮುಂದುವರೆಸುತ್ತಿದ್ದೇವೆ. ಜನವರಿ 16 ರಿಂದ ಪ್ರತಿ ದಿನ ಎರಡು ತಾಲ್ಲೂಕುಗಳಿಂದ ಜನ ಬರಲಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ನಾವು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದಿದ್ದೇವೆ. 2 ಲಕ್ಷ ಜನ ಸೇರಿ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಪಾದಯಾತ್ರೆ ನಡೆಸಿದ್ದೇವೆ. ಇಷ್ಟಾದರೂ ಸರ್ಕಾರ ನಮ್ಮ ‌ಬೇಡಿಕೆ ಈಡೇರಿಸಿಲ್ಲ. ಹಿಂದುಳಿದ ವರ್ಗದಿಂದ ಸರ್ಕಾರ ಅಂತಿಮ ವರದಿ ಪಡೆಯಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಸಿಎಂ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಇದು ನಮ್ಮ ಅಂತಿಮ ಹೋರಾಟ. ಚುನಾವಣೆಗೆ 80 ದಿನಗಳು ಬಾಕಿ ಇದೆ, ಈಗ ಒತ್ತಾಯ ಮಾಡದಿದ್ದರೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.

ತಾಯಿ‌ ಮೇಲೆ ಅಣೆ ಇಟ್ಟಿದ್ದರಿಂದ ಕಾದು ನೋಡಿದ್ದೇವೆ: ಸಿಎಂ ಬಸವರಾಜ ಬೊಮ್ಮಾಯಿ ಅವರು, ತಮ್ಮ ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ಕೊಡುವ ಭರವಸೆ ನಿಡಿದ್ದರು. ಹೀಗಾಗಿ, ನಾವು ಹೋರಾಟ ಸ್ಥಗಿತಗೊಳಿಸಿ ಸುಮ್ಮನಾಗಿದ್ದೆವು. ಆದರೆ, ಮತ್ತೆ ನಮಗೆ ಮೋಸ ಆಗಿದೆ. ತಾಯಿ ಎಂದರೇ ದೇವರು, ಅವರ ಮೇಲೆ ಅಣೆ ಮಾಡಿದ್ರಿಂದ ನಾವು ಸುಮ್ಮನಾಗಿದ್ದೆವು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಕೆ ನಮ್ಮ ಸಮುದಾಯ ಸಿದ್ದವಾಗಿದ್ದರು. ಅಣೆ ಇಟ್ಟು ನಮಗೆ ಮೋಸ ಮಾಡಿದ್ದಾರೆ. 1.30 ಕೋಟಿ  ಮಂದಿಗೆ ಮೋಸ ಮಾಡಿದ್ದಾರೆ. ನಾವು ಕೇಳಿದ್ದು 2 ಎ ಮೀಸಲಾತಿ. ನಮ್ಮ ಹೋರಾಟದಿಂದ ಇಡೀ ಲಿಂಗಾಯತ ಸಮುದಾಯವನ್ನ 2ಡಿಗೆ ಸೇರಿಸಿದರು. ಬೋಮ್ಮಾಯಿ ನಿರ್ಣಯ ನೋಡಿ ಸಂಭ್ರಮಾಚರಣೆಯೂ ಮಾಡಬೇಡಿ, ವಿರೋಧವನ್ನೂ ಮಾಡಬೇಡಿ ಅಂತ ಹೇಳಿದ್ದೆನು ಎಂದರು.

Panchamasali: ಮೀಸಲಾತಿ ಹೋರಾಟ ಮುಗಿದು ಹೋದ ಕಥೆ: ಕೆ.ಎಸ್. ಈಶ್ವರಪ್ಪ

ಸರ್ಕಾರ ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡಿಲ್ಲ:  ಈಗ ನಮ್ಮ ಸಮುದಾಯದ ಜನ ನನ್ನ ಪ್ರಶ್ನೆ‌ ಮಾಡ್ತಿದ್ದಾರೆ. ಈಗ ಮತ್ತೆ ನಾವು ಹೋರಾಟಕ್ಕೆ ಕೂತಿದ್ದೇವೆ. ಕಾನೂನಿಗೆ ನಾವು ಗೌರವ ಕೋಡಬೇಕು. ಕೋರ್ಟ್ ಅಲ್ಲಿ ಸರಿಯಾಗಿ‌ ಸರ್ಕಾರ ಮಾಹಿತಿ ನೀಡಿಲ್ಲ. ಸರ್ಕಾರದ ತಪ್ಪಿನಿಂದ ಕೋರ್ಟ್ ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಪಂಚಮಸಾಲಿ ಮೀಸಲಾತಿಗೆ ಆಗರಹಿಸಿ ನಾನು ಏಕಾಂಗಿ ಹೋರಾಟ ಮಾಡಲು ನಿರ್ಧರಿಸಿದ್ದೆನು. ನೈತಿಕ ಶಕ್ತಿ ಪ್ರದರ್ಶನ ಮಾಡುವ ನಿರ್ಧರಿಸಲಾಗಿತ್ತು. ಆದರೆ, ಜನರು ನಾವು ಬಂದು ಸೇರುತ್ತೇವೆ ಎಂದು ಪ್ರಾರ್ಥಿಸಿದರು. ಆದ್ದರಿಂದ ಜನವರಿ 16 ರಿಂದ ಪ್ರತಿ ದಿನ ಎರಡು ತಾಲ್ಲೂಕುಗಳಿಂದ ಜನ ಬರಲಿದ್ದಾರೆ. ಧರಣಿ ಸತ್ಯಾಗ್ರಹದಲ್ಲಿ ಜನ ಭಾಗವಹಿಸಲಿದ್ದಾರೆ. ಇಂದಿನಿಂದ ನಮ್ಮ ಅಂತಿಮ ಧರಣಿ‌ ಸತ್ಯಾಗ್ರಹ ಆರಂಭವಾಗಲಿದೆ ಎಂದರು.

ಎರಡು ದಿನದಲ್ಲಿ ಕಾರ್ಯಕಾರಣಿ ಸಭೆ: ನಾಳೆ ಅಥವಾ ನಾಡಿದ್ದು ನಾವು ರಾಜ್ಯ ಕಾರ್ಯಕಾರಣಿ ಸಭೆ ನಡಿಸುತ್ತೇವೆ. ಈ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾನು ಯಾರ ಸಲಹೆಯನ್ನು ಪಡೆಯುತ್ತಿಲ್ಲ. ನಾನು ಜನರ ಸಲಹೆ ಪಡೆಯುತ್ತೇನೆ. ಸಿಎಂ ಮೇಲೆ ನಮಗೆ ವಯಕ್ತಿಕ ಸಿಟ್ಟಿಲ್ಲ. ಎರಡು ವರ್ಷಗಳ ಹೋರಾಟದ ಸಮಯದಲ್ಲಿ ಸಿಎಂ ಮೌನ ವಹಿಸಿದ್ದೇಕೆ..? ಇನ್ನು ಮುರುಗೇಶ್‌ ನಿರಾಣಿ ಪೂರ್ವಗ್ರಹ ಪೀಡಿತರಾಗಿ ಮಾತಾಡುತ್ತಾರೆ. ನಿರಾಣಿ, ಸಿಸಿ ಪಾಟೀಲ್ ಅವರು ಒಂದೇ ಥರ ಮಾತನಾಡುತ್ತಾರೆ. ನಮ್ಮ ಹೋರಾಟ ನಾವು ಮುಂದುವರೆಸುತ್ತೇವೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್‌: ಹೆಸರೇಳದೇ ಯತ್ನಾಳ್‌ ವಿರುದ್ಧ ಸಚಿವ ನಿರಾಣಿ ಆರೋಪ

ಬಸವನಗೌಡ ಪಾಟೀಲ್‌ ಯತ್ನಾಳ್‌ ಹುಲಿ: ರಾಜ್ಯದಲ್ಲಿ ಒಬ್ಬ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಸಮುದಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರೊಬ್ಬ ಹುಲಿ ಇದ್ದಂತೆ. ಯತ್ನಾಳ್ ರ ಹೋರಾಟ ನಿಸ್ವಾರ್ಥ ಹೋರಾಟವಾಗಿದೆ. ಸಚಿವ ಮುರುಗೇಶ್‌ ನಿರಾಣಿ ಅವರು ಆ ಹುಲಿ ಜೊತೆ ಮಾತಾಡಲಿ. ಯಾವ ಅಧಿಕಾರ, ಸಚಿವ ಸ್ಥಾನದ ಆಕ್ಷೇಪ ಇರಿಸಿಕೊಳ್ಳದೇ ಹೋರಾಟ ಮಾಡಿದ್ದಾರೆ. ಅವರ ಹೆಸರು ಸಿಎಂ‌ ಸ್ಥಾನದಲ್ಲಿ ಇದ್ದರೂ ಹೋರಾಟ ಮಾಡಿದ್ದಾರೆ. ಜನರ ಹೃದಯದಲ್ಲಿ ಬಸವನಗೌಡ ಪಾಟೀಲ್ ನೆಲೆಸಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯದೇ ಇರುವ ಮನಸ್ಸು ಅವರದ್ದು. ವೈಯಕ್ತಿಕ ನಿಂದನೆ ಸರಿಯಲ್ಲ. ಎಲ್ಲರೂ ಒಂದೇ ತಾಯಿಯ ‌ಮಕ್ಕಳು ಎಂದು ಹೇಳಿದರು.

Follow Us:
Download App:
  • android
  • ios