Asianet Suvarna News Asianet Suvarna News

2.5 ವರ್ಷ ಬಳಿಕ ಸಂಪುಟದಲ್ಲಿ ಬದಲಾವಣೆ:ಕಾಂಗ್ರೆಸ್ ಶಾಸಕ ಹೊಸ ಬಾಂಬ್!

ರಾಜ್ಯದಲ್ಲಿ ಎರಡೂವರೆ ವರ್ಷ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆಗಳು ಆಗಲಿವೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಿಳಿಸಿದ್ದಾರೆ. ಇಡೀ ಸಂಪುಟ ಪುನರ್ ರಚನೆಯಾಗಲಿದೆಯೇ ಅಥವಾ ಮೂರ್ನಾಲ್ಕು ಮಂದಿ ಮಾತ್ರ ಬದಲಾಗಲಿದ್ದಾರೆಯೇ ಎಂಬುದು ಗೊತ್ತಿಲ್ಲ’ ಎಂದು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಹಾಗೂ ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ್‌ ಪಟ್ಟಣ್‌ ಹೊಸ ‘ಬಾಂಬ್’ ಸಿಡಿಸಿದ್ದಾರೆ.

Cabinet change after 2.5 years Congress MLA statement at bengaluru rav
Author
First Published Oct 21, 2023, 12:59 PM IST

ಬೆಂಗಳೂರು (ಅ.21): ‘ರಾಜ್ಯದಲ್ಲಿ ಎರಡೂವರೆ ವರ್ಷ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆಗಳು ಆಗಲಿವೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಿಳಿಸಿದ್ದಾರೆ. ಇಡೀ ಸಂಪುಟ ಪುನರ್ ರಚನೆಯಾಗಲಿದೆಯೇ ಅಥವಾ ಮೂರ್ನಾಲ್ಕು ಮಂದಿ ಮಾತ್ರ ಬದಲಾಗಲಿದ್ದಾರೆಯೇ ಎಂಬುದು ಗೊತ್ತಿಲ್ಲ’ ಎಂದು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಹಾಗೂ ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ್‌ ಪಟ್ಟಣ್‌ ಹೊಸ ‘ಬಾಂಬ್’ ಸಿಡಿಸಿದ್ದಾರೆ.

ಇದರಿಂದಾಗಿ 2.5 ವರ್ಷ ಬಳಿಕ ಸಂಪುಟದಲ್ಲಿ ಬದಲಾವಣೆ ಆಗಬಹುದು ಹಾಗೂ ಮುಖ್ಯಮಂತ್ರಿಯೂ ಬದಲಾಗಬಹುದು ಎಂಬ ಊಹಾಪೋಹಕ್ಕೆ ಮತ್ತೆ ರೆಕ್ಕೆ-ಪುಕ್ಕ ಬಂದಿವೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡೂವರೆ ವರ್ಷದ ಬಳಿಕ ನನಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಸುರ್ಜೇವಾಲಾ ತಿಳಿಸಿದ್ದಾರೆ. ಅದೇ ಭರವಸೆಯೊಂದಿಗೆ ಇದ್ದೇನೆ. ಸಚಿವ ಸ್ಥಾನ ನೀಡಿದರೂ ಪಕ್ಷದಲ್ಲೇ ಇರುತ್ತೇನೆ. ನೀಡದಿದ್ದರೂ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ? ಬಿವೈ ವಿಜಯೇಂದ್ರ ಏನು ಹೇಳಿದ್ರು?

‘ನನಗಿಂತ ಕಿರಿಯ ಶಾಸಕರೆಲ್ಲಾ ಗೂಟದ ಕಾರಲ್ಲಿ ಓಡಾಡುತ್ತಿದ್ದಾರೆ ಎಂಬುದನ್ನು ಒಪ್ಪುತ್ತೇನೆ. ಆದರೆ ಕಾಂಗ್ರೆಸ್ಸಿನಲ್ಲಿ ಕಿರಿತನ, ಹಿರಿತನ ಎಂಬುದು ಬರುವುದಿಲ್ಲ. ನಾನು ದೇವರಾಜ ಅರಸು ಅವಧಿಯಲ್ಲಿ ಯುವ ಕಾಂಗ್ರೆಸ್‌ನಲ್ಲಿದ್ದವನು. ಈ ವೇಳೆಗೆ ಎರಡು ಮೂರು ಬಾರಿ ಸಚಿವನಾಗಬೇಕಾಗಿತ್ತು. ಆದರೆ ದುರಾದೃಷ್ಟವಶಾತ್‌ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಸ್ಥಾನದ ಬಗ್ಗೆ ಗೊತ್ತಿಲ್ಲ:

‘ಮುಖ್ಯಮಂತ್ರಿಗಳೂ ಬದಲಾಗುತ್ತಾರಾ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿಗಳ ಹುದ್ದೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ’ ಎಂದಷ್ಟೇ ಹೇಳಿದರು.

ಮೋರ್ ಪವರ್ ಫುಲ್, ಮೋರ್ ಎನಿಮೀಸ್; ಇದು ರಾಜಕೀಯದ ತಂಬ್ ರೂಲ್ ಎಂದ ಡಿಕೆಶಿ

ಜಾರಕಿಹೊಳಿ ಜತೆ ಸಭೆ ಆಗಿಲ್ಲ:

ಸತೀಶ್‌ ಜಾರಕಿಹೊಳಿ ಜತೆ ಪ್ರತ್ಯೇಕ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಬೆಳಗಾವಿ ಜಿಲ್ಲೆಯವನು. ಸತೀಶ್‌ ಜಾರಕಿಹೊಳಿ ಅವರು ಯಾವತ್ತೂ ನನಗೆ ಮೈಸೂರಿಗೆ ಹೋಗೋಣ ಎಂದು ಕರೆದಿಲ್ಲ. ನನ್ನ ಪಾಡಿಗೆ ನಾನು ಒಂದು ದಿನ ಅವರ ಮನೆಗೆ ಹೋಗಿದ್ದೆ. ಕಾಕತಾಳೀಯ ಎಂಬಂತೆ 4-5 ಮಂದಿ ಶಾಸಕರು ಬಂದಿದ್ದರು. ನನಗೆ ಮೈಸೂರಿಗೆ ಬಾರಪ್ಪ ಎಂದೂ ಕರೆದಿಲ್ಲ, ಸಭೆಯೂ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios