ಕರ್ನಾಟಕಕ್ಕೆ ದೊರೆಯುತ್ತಿದ್ದ ರೆಮ್​ಡೆಸಿವಿರ್, ಆಕ್ಸಿಜನ್ ಪೂರೈಕೆ ಹೆಚ್ಚಳ: ಮೋದಿಗೆ ಸಿಎಂ ಧನ್ಯವಾದ

ಕೇಂದ್ರ ಸರ್ಕಾರಕ್ಕೆ ರಾಜ್ಯಕ್ಕೆ ನೀಡುತ್ತಿದ್ದ ರೆಮ್​ಡೆಸಿವಿರ್ ಔಷಧಿ ಮತ್ತು ಆಕ್ಸಿಜನ್ ಪ್ರಮಾಣವನ್ನ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ.

CM BSY thanks to PM Modi for increasing Karnataka s allocation Remdesivir and oxygen rbj

ಬೆಂಗಳೂರು, (ಏ.24): ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೆಮ್​ಡೆಸಿವಿರ್ ಔಷಧ ಮತ್ತು ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಈವರೆಗೆ ಪ್ರತಿದಿನ ಪೂರೈಕೆಯಾಗುತ್ತಿದ್ದ 50 ಸಾವಿರ ರೆಮ್​ಡೆಸಿವಿರ್ ಔಷಧವನ್ನು 1,20,000ಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದು ಏಪ್ರಿಲ್ 27ರವರೆಗೂ ಮುಂದುವರೆಯಲಿದೆ. ಜತೆಗೆ ಈವರೆಗೆ ಪ್ರತಿದಿನ ಕರ್ನಾಟಕಕ್ಕೆ ದೊರೆಯುತ್ತಿದ್ದ 300 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದಪ್ರಮಾಣವೂ ಹೆಚ್ಚಳವಾಗಲಿದ್ದು ಇನ್ನುಮುಂದೆ 800 ಮೆಟ್ರಿಕ್ ಟನ್​ ದೊರೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್​​ ಕೊರತೆ: ಅನುಮಾನ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ ಸಿಎಂ ಬಿಎಸ್‌ವೈ, ರೆಮ್​ಡೆಸಿವಿರ್ ಮತ್ತು ಆಕ್ಸಿಜನ್ ಪ್ರಮಾಣವನ್ನ ಹೆಚ್ಚಿಸಿದ್ದರಿಂದ ನಮ್ಮ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಧನ್ಯವಾದ ಎಂದಿದ್ದಾರೆ.

Latest Videos
Follow Us:
Download App:
  • android
  • ios