ದಾವಣಗೆರೆ, (ಫೆ.14): ಮೀಸಲಾತಿಗಾಗಿ ವಿವಿಧ ಸಮುದಾಯದ ಸ್ವಾಮಿಗಳು‌ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ಸ್ವಾಮೀಜಿ ಹಾಗೂ ಸಮುದಾಯದ ಜನರಿಗೆ ಹೊಸ ಭರವಸೆಯನ್ನು ನೀಡಿದ್ದಾರೆ.

"

ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ದಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಸಿಎಂ, ಮೀಸಲಾತಿಗಾಗಿ ವಿವಿಧ ಸಮುದಾಯದ ಸ್ವಾಮಿಗಳು‌ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಯಾವ ರೀತಿ ಅದನ್ನು ಈಡೇರಿಸಬೇಕು ಎಂಬುದಷ್ಟೆ ಈಗ ಚರ್ಚೆ ಮಾಡಬೇಕಾಗಿದೆ ಎಂದು ಹೇಳಿದರು.

ಮೀಸಲಾತಿ ಘೋಷಣೆಗೆ ಡೆಡ್‌ಲೈನ್, ಪಂಚಮಸಾಲಿ ಶ್ರೀಗಳ ಎಚ್ಚರಿಕೆಗೆ ಮಣಿಯುತ್ತಾರಾ ಬಿಎಸ್‌ವೈ.?

ವೀರಶೈವ ಲಿಂಗಾಯತ, ವಾಲ್ಮೀಕಿ ಸೇರಿದಂತೆ ಹೋರಾಟ ನಿರತ ಎಲ್ಲಾ ಸಮಾಜದ ಸ್ವಾಮೀಜಿಗಳ ಬೇಡಿಕೆಯನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಲು ಕ್ರಮ ವಹಿಸಲಾಗುವುರು ಭರವಸೆ ನೀಡಿದರು.

ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಯಾವ ಸ್ವಾಮೀಜಿಯವರಿಗೂ ಆತಂಕ, ಸಂಶಯ ಬೇಡ ಎಂದರು.

ಎಸ್‌ಟಿ ಬೇಕೆಂದು ಕುರುಬ ಸಮುದಾಯ, 2A ಮೀಸಲಾತಿಗಾಗಿ ಪಂಚಮಸಾಲಿ, ಮೀಸಲಾತಿ ಹೆಚ್ಚಿಸುವಂತೆ ವಾಲ್ಮೀಕಿ ಸಮುದಾಯ ಹೋರಾಟ ಮಾಡುತ್ತಿದ್ದಾರೆ. ಆದ್ರೆ, ಮೀಸಲಾತಿ ಯಾರಿಗೆ ಸಿಗುತ್ತೋ? ಯಾರಿಗಿಲ್ಲೋ ಎನ್ನುವುದು ಕಾದು ನೋಡಬೇಕಿದೆ.