ಬೆಂಗಳೂರು, (ಜೂನ್.30): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಮಹತ್ವದ ವಿಚಾರಗಳನ್ನ ತಿಳಿಸಿದರು.

ಇನ್ನು ಈ ಮೋದಿ ಅವರ ಭಾಷಣೆಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿರುವ ಬಿಎಸ್‌ವೈ, ಕೇಂದ್ರ ಸರ್ಕಾರ ಗರಿಬ್ ಕಲ್ಯಾಣ್ ಅನ್ನ ಯೋಜನೆ ನವೆಂಬರ್‌ವರೆಗೂ ವಿಸ್ತರಣೆ ಮಾಡಿರೋದಕ್ಕೆ‌ ಸಿಎಂ ಸ್ವಾಗತಿಸಿದ್ದು, ಒಂದು ದೇಶ ಒಂದು ಪಡಿತರ ಯೋಜನೆ ಜಾರಿ ಮಾಡುತ್ತಿರೋದಕ್ಕೆ ಬಿಎಸ್‌ವೈ ಸಂತಸ ವ್ಯಕ್ತಪಡಿಸಿದ್ದಾರೆ. 

ಮೋದಿ ಮಹತ್ವದ ಘೋಷಣೆ: ದೀಪಾವಳಿವರೆಗೂ 80 ಕೋಟಿ ಬಡವರಿಗೆ ಉಚಿತ ರೇಷನ್!

ಪ್ರಧಾನಿ ನರೇಂದ್ರ ಮೋದಿ ಭಾಷಣ ನೋಡಿದರೆ, ಭಾರತದಲ್ಲಿ ಕೋವಿಡ್ ನಿಯಂತ್ರಣ ಉತ್ತಮ‌ ಸ್ಥಿತಿಯಲ್ಲಿದೆ ಎಂದು ತಿಳಿದುಬರುತ್ತೆ. ಇದಕ್ಕೆ ಲಾಕ್ ಡೌನ್ ಸಮಯದಲ್ಲಿ ನಿಯಮಗಳನ್ನ ಕಟ್ಟುನಿಟ್ಟಾಗಿ ಜನರು ಪಾಲಿಸಿರುವ ಪ್ರಮುಖ ಕಾರಣ ಎಂದಿದ್ದಾರೆ.

ಆದ್ರೆ, ಆನ್ ಲಾಕ್ ಅವಧಿಯಲ್ಲಿ ನಿಯಮಗಳನ್ನ ಜನರು ಸರಿಯಾಗಿ ಪಾಲಿಸದಿರುವ ಅಂತಕದ ಸಂಗತಿ. ಈ ಬಗ್ಗೆ ಜನರು ಎಚ್ಚೆತ್ತುಕೊಂಡ ಈಗಲಾದ್ರು ನಿಯಮ ಪಾಲಿಸಿದ್ರೆ ಉತ್ತಮ ಫಲಿತಾಂಶ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಪ್ರಧಾನಮಂತ್ರಿಯವರ  ಕರೆಯಂತೆ ಎಲ್ಲಾ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಲು ಪತ್ರಿಕಾ ಪ್ರಕಟಣೆ ಮೂಲಕ ಮನವಿ  ಮಾಡಿದ್ದಾರೆ.

ಮೋದಿ ಹೇಳಿದ್ದೇನು..?
ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ನವೆಂಬರ್‌ ತಿಂಗಳ ವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

'ಇದು ಖರ್ಚಿನ ಸಮಯ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ನಾವು 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ' ಯೋಜನೆ ಮತ್ತು ಇತರ ಯೋಜನೆಯಗಳನ್ನು ದೀಪಾವಳಿವರೆಗೆ ಅಂದರೆ ನವೆಂಬರ್‌ ಅಂತ್ಯದವರೆಗೂ ವಿಸ್ತರಿಸಿದ್ದೇವೆ. ಈ ಮಹತ್ವದ ಯೋಜನೆಯು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳವರೆಗೆ ಚಾಲ್ತಿಯಲ್ಲಿರುತ್ತವೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ಕೊಡುತ್ತೇವೆ' ಎಂದು ತಿಳಿಸಿದ್ದಾರೆ.