ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 2023-24ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ರು. ಅನುದಾನ ಬಿಡುಗಡೆಗೊಳಿಸಿ ಸೋಮವಾರ ಅಂಕಿತ ಹಾಕಿದ್ದಾರೆ. 

ಬೆಂಗಳೂರು (ಮಾ.7) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 2023-24ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ರು. ಅನುದಾನ ಬಿಡುಗಡೆಗೊಳಿಸಿ ಸೋಮವಾರ ಅಂಕಿತ ಹಾಕಿದ್ದಾರೆ. 

ಕಳೆದ ಸಾಲಿನ ಬಜೆಟ್‌ನಲ್ಲಿ ಸಹ ಬ್ರಾಹ್ಮಣ ಅಭಿವೃದ್ಧಿಗೆ ನಿಗಮಕ್ಕೆ (Brahmin Development corporation)10 ಕೋಟಿ ರು. ಅನುದಾನ ನೀಡಲಾಗಿತ್ತು.

ಎರಡು ವರ್ಷಗಳಲ್ಲಿ ಸಮುದಾಯದ ಅಭಿವೃದ್ಧಿಗೆ 20 ಕೋಟಿ ರು. ಅನುದಾನ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ(CM Basavaraj Bommai) ಅವರನ್ನು ನಿಗಮದ ಅಧ್ಯಕ್ಷ ಸಚ್ಚಿದಾನಂದ ಹಾಗೂ ನಿರ್ದೇಶಕರು ಅಭಿನಂದಿಸಿದ್ದಾರೆ.

ಬಜೆಟ್‌(Budger)ನಲ್ಲಿ ಆರ್ಯವೈಶ್ಯ ನಿಗಮ ಮಂಡಳಿ ಮತ್ತು ಬ್ರಾಹ್ಮಣ ನಿಗಮ ಮಂಡಳಿಗೆ ತಲಾ 10ಕೋಟಿರೂ. ಅನುದಾನ ನೀಡುವುದಾಗಿ ಹೇಳಿದ್ದರು. ಅದರಂತೆಯೇ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದಾರೆ.

ಸರ್ಕಾರ EWS ಜಾರಿ ಮಾಡದಿದ್ರೆ ಹೈಕೋರ್ಟ್‌ನಲ್ಲಿ ದಾವೆ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ

ವಿಷ್ಣುಸಹಸ್ರನಾಮ ಪಾರಾಯಣ: 

ಮೈಸೂರು : ಶ್ರೀ ರಾಮಾನುಜ ಅಭ್ಯುದಯ ಸಹಕಾರ ಸಂಘದ ವತಿಯಿಂದ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಒಂಟಿಕೊಪ್ಪಲ್‌ ಪಂಚಾಂಗ ವಿತರಿಸುವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಷ್ಣು ಸಹಸ್ರನಾಮ ವೇದ ಮತ್ತು ಪುರಾಣಗಳ ಪ್ರಕಾರ ಶ್ರೀ ಮಹಾ ವಿಷ್ಣು ವಿಶ್ವದ ರಕ್ಷಕ ಎಂದು ಹೇಳಲಾಗುತ್ತದೆ. ವಿಷ್ಣು ಸಹಸ್ರನಾಮ ಎಂಬುದು ಮಹಾವಿಷ್ಣುವಿನ ಸಾವಿರ ಹೆಸರುಗಳು. ಶ್ರೇಷ್ಟವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಾವು ಸುಲಭವಾಗಿ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು. ಆದರೆ, ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕಲಿಯಬೇಕು ಎಂದು ಕರೆ ನೀಡಿದರು.

ಶಾಸಕ ರಾಮದಾಸ್‌ ಹೊರತುಪಡಿಸಿ ಬೇರೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡಿ: ಬ್ರಾಹ್ಮಣ ಸಂಘ

ವಿಪ್ರ ಮುಖಂಡ ನಂ. ಶ್ರೀಕಂಠಕುಮಾರ್‌ ಮಾತನಾಡಿ, ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಾವು ಸುಲಭವಾಗಿ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು. ಹಾಗೆಯೇ ವಿಷ್ಣು ಸಹಸ್ರನಾಮವನ್ನು ಎಲ್ಲರಿಗೂ ತಿಳಿಸಬೇಕು ಎಂದರು. ವಿಪ್ರ ಮುಖಂಡರಾದ ಸುಂದರೇಶ್‌, ಪಾರ್ಥಸಾರಥಿ ರಾಮಾನುಜ ಸಹಕಾರ ಸಂಘದ ನಿರ್ದೇಶಕರಾದ ರಾಜಗೋಪಾಲ್‌, ಪುಟ್ಟಸ್ವಾಮಿ, ಟಿ.ಎಸ್‌. ಅರುಣ್‌, ಅನಂತರಾಮು, ಮುರಳಿ, ಶಾಂತರಾಮ್‌ ಮೊದಲಾದವರು ಇದ್ದರು.