Asianet Suvarna News Asianet Suvarna News

Hampi Utsav 2023: ಐತಿಹಾಸಿಕ ಹಂಪಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಗತಕಾಲದ ವಿಜಯನಗರದ ಸಾಮ್ರಾಜ್ಯದ ವೈಭವವು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರೋದಾಗಿ  ಗಾಯತ್ರಿ ಪೀಠದ ವೇದಿಕೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

CM Basavaraj Bommai Inaugurate Hampi Utsav 2023 Vijayanagara Three Day Cultural Festival gvd
Author
First Published Jan 28, 2023, 12:30 AM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್, ವಿಜಯನಗರ

ವಿಜಯನಗರ (ಜ.28): ಕೊರೊನಾ ನಂತರ ಎರಡು ವರ್ಷಗಳ  ಬಳಿಕ ಐತಿಹಾಸಿಕ ‌ಹಂಪಿ‌ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಗತಕಾಲದ ವಿಜಯನಗರದ ಸಾಮ್ರಾಜ್ಯದ ವೈಭವವು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರೋದಾಗಿ  ಗಾಯತ್ರಿ ಪೀಠದ ವೇದಿಕೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‌ಐತಿಹಾಸಿಕ ಹಂಪಿ ಉತ್ಸವಕ್ಕೆ ದೀಪ ಬೆಳಗಿಸೋ ಮೂಲಕ ಅಧಿಕೃತ ಚಾಲನೆ ನೀಡಿದರು. ನಂತರ ತಾಯಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿ‌ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯ ಐತಿಹಾಸಿಕವಾಗಿ ಪ್ರಮುಖವಾದದು. ದೇಶದ ಚರಿತ್ರೆಯಲ್ಲಿ ಪ್ರಮುಖ ಬದಲಾವಣೆ ತಂದಿದ್ದು ಈ ಇದೇ ಹೆಮ್ಮೆಯ ಸಾಮ್ರಾಜ್ಯವೆಂದು ಅವರು ಹೇಳಿದರು. ಉತ್ತರದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರಿನಲ್ಲಿ ಪ್ರವಾಸೋದ್ಯಮದ ಸರ್ಕ್ಯೂಟ್  ಮಾಡಲಿದ್ದೇವೆ. ಪ್ರವಾಸಿಗರಿಗೆ ಇದರ ಮೂಲಕ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಿದ್ದೇವೆ ಎಂದರು. ವಿಜಯನಗರ ಸಾಮ್ರಾಜ್ಯ ರೋಮಾಂಚನವಾದದು. ಇಲ್ಲಿನ ಪ್ರತಿ ಶಿಲೆ ತನ್ನದೇ ಇತಿಹಾಸ ಹೇಳುತ್ತವೆ. ಬಹಮನಿ ಸುಲ್ತಾನರು ಇಲ್ಲಿನ ಶ್ರೀಮಂತಿಕೆಯನ್ನು ಕೊಳ್ಳೆ ಹೊಡೆದರು. ಮೊದಲ ಯುದ್ಧದಲ್ಲಿ ಗೆಲ್ಲಲಾಗಲಿಲ್ಲ ಎರಡನೇ ಯುದ್ಧದಲ್ಲಿ ಮೋಸದಿಂದ ಹಂಪಿ ಸಾಮ್ರಾಜ್ಯ ಕೊಳ್ಳೆ ಹೊಡೆದರು ಎಂದು ಇತಿಹಾಸ‌ ಮೆಲುಕು ಹಾಕಿದರು.

Pariksha Pe Charcha 2023: ಅವಕಾಶ ತಪ್ಪಿತು ಎಂದೇ ಭಾವಿಸಿದ್ದ ರಾಜ್ಯದ ಮಕ್ಕಳಿಗೆ ಮೊದಲ ಸಾಲಿನ ಆಸನ

ನವ ಕರ್ನಾಟಕ ನಿರ್ಮಾಣ ಮಾಡ್ತೇವೆ: ದುಡಿಯುವ ವರ್ಗಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ನವ ಕರ್ನಾಟಕದ ಕನಸನ್ನು ನನಸು ಮಾಡಬಹುದು. ದುಡಿಯುವ ಜನತೆಗೆ ಅಗತ್ಯವಾದ ಕೌಶಲ್ಯ ಬಂಡವಾಳ ನೀಡಬೇಕಿದೆ. ಆ ನಿಟ್ಟಿನಲ್ಲಿ ಯುವ ಜನತೆಗೆ ಸ್ವಯಂ ಉದ್ಯೋಗ ನೀಡುವ ಕೆಲಸ ಆಗಿದೆ. ಶಿಕ್ಷಣಕ್ಕೆ ಮಹತ್ವ ನೀಡಿ, 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ. ಎಂಟು ಲಕ್ಷ ಕೋಟಿ ರೂ ಬಂಡವಾಳದ ಉದ್ಯಮಗಳು ರಾಜ್ಯಕ್ಕೆ ‌ಬರುತ್ತಿವೆ ಎಂದು ಹೇಳಿದರು.  

ಹನುಮನ ನಾಡಿಗೂ‌ ಭರಪೂರ ಕೊಡುಗೆ: ಹಂಪಿ ಪಕ್ಕದ ಆನೆಗುಂದಿಯ ಹನುಮ‌ ಹುಟ್ಟಿದ ನಾಡು ಆಂಜನಾದ್ರಿ ಬೆಟ್ಟವನ್ನು 120 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದ್ದೇವೆ. ಇದಕ್ಕೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಲಾವಿದರಿಗೆ ಪ್ರೋತ್ಸಾಹ ನೀಡ್ತೇವೆ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ವಿಜಯನಗರ ಅರಸರ ಕಾಲದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಈ ಉತ್ಸವದ ಮೂಲಕ ನಾಡಿನ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಡೆದಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿದೆಂದು ಹೇಳಿದರು. ಇದಲ್ಲದೆ ಎದುರು ಬಸವಣ್ಣ ಮಂಟಪ, ಸಾಸುವೆಕಾಳು ಗಣೇಶ, ವೀರೂಪಾಕ್ಷ ದೇವಸ್ಥಾನದಲ್ಲಿನ  ವೇದಿಕೆಗಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

Udupi: ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಸಾಂಸ್ಕೃತಿಕ ಸಂಭ್ರಮ ಅನಾವರಣ: ಇಂದಿನಿಂದ ಮೂರು ದಿನಗಳ ಉತ್ಸವದಲ್ಲಿ  3 ಸಾವಿರ ಕಲಾವಿದರಿಂದ  ನೃತ್ಯ, ಸುಗಮ ಸಂಗೀತ, ಹಾಡುಗಾರಿಕೆ, ನಾಟಕ, ವಿವಿಧ ಜನಪದ ಕಲೆಗಳ ಪ್ರದರ್ಶನ ನಡೆಯುತ್ತದೆ ಎಂದು ವಿಜಯನಗರ ಉಸ್ತುವಾರಿ ಸಚಿವೆ ಜೊಲ್ಲೆ ಹೇಳಿದರು. ಪ್ರೇಕ್ಷಕರ ಕೊರತೆ ಉತ್ಸವಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. ಮಾಧ್ಯಮ‌ ಗ್ಯಾಲರಿ ಬಿಟ್ಟರೆ, ಕನಿಷ್ಟ ವಿವಿಐಪಿ, ವಿಐಪಿ ಗ್ಯಾಲರಿಯು ಸಹ ಖಾಲಿ ಇತ್ತು. ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಷ್ಟನೆ ನೀಡಲು ಪ್ರಯತ್ನಿಸಿದ ಸಚಿವ ಆನಂದ ಸಿಂಗ್, ತಾಂತ್ರಿಕ ತೊಂದರೆಯಿಂದ ಜನರು ಬರಲು ಒಂದಷ್ಟು ಕಷ್ಟವಾಗಿರಬಹುದು‌ ನಾಳೆಯ ಉತ್ಸವದಲ್ಲಿ ಎಲ್ಲವನ್ನೂ ಸರಿ ಮಾಡ್ತೇವೆ ಎಂದರು.

Follow Us:
Download App:
  • android
  • ios