Reservation ಮಾದಿಗ ಜನಾಂಗಕ್ಕೆ ಒಳಮೀಸಲು, ಸಿಎಂ ಭರವಸೆ!
- ಬೇರೆಯವರಿಗೆ ಅನ್ಯಾಯವಾಗದಂತೆ ಒಳಮೀಸಲು
- ಸಮುದಾಯ ಮುಖಂಡರ ಜತೆ ಚರ್ಚಿಸಿದ ಬಳಿಕ ಕ್ರಮ
- ವಿಶ್ವ ಮಾದಿಗ ದಿನಾಚರಣೆಯಲ್ಲಿ ಬೊಮ್ಮಾಯಿ ಭರವಸೆ
ಬೆಂಗಳೂರು(ಮೇ.14): ಪರಿಶಿಷ್ಟಜಾತಿಗೆ ಒಳಪಡುವ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ನೀಡಲಾಗುವುದು. ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಶುಕ್ರವಾರ ಏರ್ಪಡಿಸಿದ್ದ ‘4ನೇ ವಿಶ್ವ ಮಾದಿಗ ದಿನಾಚರಣೆ-ಚಿಂತಕರ ಮತ್ತು ಬುದ್ಧಿ ಜೀವಿಗಳ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿಗೆ ಸಂಬಂಧಿಸಿದಂತೆ ಆಯೋಗಗಳು ವರದಿ ನೀಡಿದ್ದು ನೀವು ಒಳ ಮೀಸಲಾತಿ ಕೇಳುವುದು ತಪ್ಪಲ್ಲ. ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧವಾಗಿದೆ. ಆದರೆ ಬೇರೆಯವರಿಗೆ ಅನ್ಯಾಯ ಆಗಬಾರದು. ಆದ್ದರಿಂದ ಪರಿಶಿಷ್ಟಜಾತಿಗೆ ಒಳಪಡುವ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ಒಳ ಮೀಸಲು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಒಬಿಸಿ ಮೀಸಲು ಕಲ್ಪಿಸಿಯೇ ಸ್ಥಳೀಯ ಚುನಾವಣೆ, ರಾಜ್ಯ ಸರ್ಕಾರ!
ಸಾಮಾಜಿಕ ವ್ಯವಸ್ಥೆಯನ್ನು ಯಥಾಸ್ಥಿತಿ ಕಾಪಾಡುವ ವರ್ಗ ಸ್ವಾತಂತ್ರ್ಯಪೂರ್ವದಲ್ಲಿ ಪ್ರಬಲವಾಗಿತ್ತು. ವರ್ಗಿಕರಣ ವ್ಯವಸ್ಥೆಯಲ್ಲಿ ಕೆಳಗಿರುವವರು ಮೇಲೇರುವ ಏಣಿ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿದ ಸಂವಿಧಾನ ರಚನಾಕಾರರು ಅಭಿವೃದ್ಧಿ ದೃಷ್ಟಿಯಿಂದ ಚಲನ ಶಕ್ತಿ ನೀಡಲು ಹಕ್ಕುಗಳನ್ನು ನೀಡಿದರು. ಈ ಹಕ್ಕು ಹೇಗೆ ಸಂದಾಯವಾಗುತ್ತದೆ ಎಂಬುದು ಅನುಷ್ಠಾನ ಮಾಡುವವರನ್ನು ಅವಲಂಬಿಸಿದೆ ಎಂದು ವ್ಯಾಖ್ಯಾನಿಸಿದರು.
ಶ್ರಮಿಕ ವರ್ಗದಿಂದ ಆರ್ಥಿಕತೆ:
ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವುದು ಶ್ರಮಿಕ ವರ್ಗ, ಬಂಡವಾಳ ಶಾಹಿಗಳಲ್ಲ. ಆದ್ದರಿಂದಲೇ ನಮ್ಮ ಬಜೆಟ್‌ನಲ್ಲಿ ಪಿರಮಿಡ್‌ನ ತಳ ಭಾಗದಲ್ಲಿರುವ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ತಲಾ ಆದಾಯ ಹೆಚ್ಚಳವಾಗಿ ಜಿಡಿಪಿ ಹೆಚ್ಚುತ್ತದೆ. ಬದಲಾವಣೆಯ ಕಾಲ ಬಂದಿದೆ. ಸಮಾಜವನ್ನು ಸಿದ್ಧ ಮಾಡಿ. ಎಲ್ಲರೂ ಒಂದಾಗಿ ಸಮಸ್ಯೆ ಪರಿಹರಿಸೋಣ ಎಂದು ಕರೆ ನೀಡಿದರು.
ಸಂಘಟನೆಗೆ ಆದ್ಯತೆ ನೀಡಿ:
ರಾಜಕೀಯ ಪಕ್ಷಗಳು ಹೇಗೆ ಸಂಘಟನೆ ದೃಷ್ಟಿಯಿಂದ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಳ್ಳುತ್ತವೆಯೋ ಅದೇ ರೀತಿ ಸಂಘಟನೆಗಾಗಿ 4 ವಿಭಾಗ ಮಾಡಿಕೊಂಡು ಪ್ರತಿ ಊರು, ಕೇರಿಯನ್ನೂ ತಲುಪಬೇಕು. ಸಮುದಾಯದ ಶೇ. 80 ಜನ ಮೊದಲು ಚರ್ಮೋದ ಉದ್ಯೋಗ ಅವಲಂಬಿಸಿದ್ದರು. ಯಾಂತ್ರೀಕರಣದಿಂದಾಗಿ ಇದೀಗ ಬಹಳಷ್ಟುಮಂದಿಗೆ ಉದ್ಯೋಗ ಇಲ್ಲದಂತಾಗಿದೆ. ಬೆಂಗಳೂರಿನಲ್ಲಿ ಐದಾರು ಲಕ್ಷ ಪೌರ ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಜನಾಂಗದ ಮೀಸಲಾತಿ ಹೋರಾಟಕ್ಕೆ ಸುದೀಪ್ ಬೆಂಬಲ
ಸಚಿವ ಗೋವಿಂದ ಕಾರಜೋಳ, ಪೂರ್ಣಾನಂದ ಭಾರತೀ ಸ್ವಾಮೀಜಿ, ಆನಂದ ಸ್ವಾಮೀಜಿ, ಕೇಂದ್ರ ಸಚಿವ ನಾರಾಯಣಸ್ವಾಮಿ, ಪಾಂಡಿಚೆರಿ ಸಚಿವ ಸಾಯಿ ಸರವಣ, ಮಾಜಿ ಸಚಿವ ಎಚ್.ಆಂಜನೇಯ, ವಿಶ್ರಾಂತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮತ್ತಿತರರು ಉಪಸ್ಥಿತರಿದ್ದರು.
40 ಕೇಳಿದರೆ 81 ಎಕರೆ ಕೊಟ್ರು: ಬೊಮ್ಮಾಯಿಗೆ ಶ್ರೀಗಳ ಶ್ಲಾಘನೆ
ಮಾದಿಗ ಸಮುದಾಯದ ಅಭಿವೃದ್ಧಿಗೆ 40 ಎಕರೆ ಜಮೀನು ಕೇಳಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 81 ಎಕರೆ ನೀಡಿದರು. ವೀರಶೈವ ಲಿಂಗಾಯತ ಮಠಗಳು ಬೊಮ್ಮಾಯಿ ಅವರಿಗೆ ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತವೆಯೋ ಗೊತ್ತಿಲ್ಲ. ಆದರೆ ಹಿಂದುಳಿದ ವರ್ಗಗಳ ಮಠಾಧೀಶರು ಯಾವಾಗಲೂ ಬೆನ್ನಿಗೆ ನಿಲ್ಲುತ್ತೇವೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಅಭಯ ನೀಡಿದರು.
ಮೊದಲೆಲ್ಲಾ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿದ್ದ ಸಮುದಾಯದ ಕಾರ್ಯಕ್ರಮಗಳು ಇದೀಗ ಅಶೋಕ ಹೋಟೆಲ್‌ನಲ್ಲೂ ನಡೆಯುತ್ತಿವೆ. ಮುಖ್ಯವಾಹಿನಿಗೆ ಬರುತ್ತಿದ್ದೇವೆ ಎಂದು ಇದು ಅರ್ಥ ನೀಡುತ್ತದೆ. ಮೊದಲು ದಕ್ಷಿಣ ಭಾರತದಲ್ಲಿ ನಾವು ಒಗ್ಗಟ್ಟಾಗಿ ಬಳಿಕ ದೇಶದಲ್ಲಿ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರಲ್ಲಿ ನಡೆದ ‘4ನೇ ವಿಶ್ವ ಮಾದಿಗ ದಿನಾಚರಣೆ-ಚಿಂತಕರ ಮತ್ತು ಬುದ್ಧಿ ಜೀವಿಗಳ ಕಾರ್ಯಾಗಾರ’ದಲ್ಲಿ ಒಳ ಮೀಸಲಾತಿ ಸೇರಿದಂತೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಯಿತು. ಮಾದಾರ ಚನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ಮತ್ತಿತರರು ಹಾಜರಿದ್ದರು.
ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಬೆಳವಣಿಗೆಗೆ ತಕ್ಕ ಹಾಗೆ ಬದಲಾವಣೆ ಮಾಡಿಕೊಳ್ಳಬಹುದಾದ ಕ್ರಿಯಾಶೀಲತೆ ಹೊಂದಿದೆ. ಸಂವಿಧಾನದ ಮೂಲಕ ಸಮಾನ ಹಕ್ಕುಗಳನ್ನು ತಂದು ಕೊಟ್ಟವರು ಅಂಬೇಡ್ಕರ್. ಉದ್ಯೋಗ, ಸ್ವಾವಲಂಬನೆ, ಸ್ವಾಭಿಮಾನದಿಂದ ಬದುಕು ಬದಲಾಗುತ್ತದೆ. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಇವರು ಹೇಳಿದ್ದೂ ಇದನ್ನೇ. ಇವರಿಬ್ಬರಿಂದಲೂ ಪ್ರೇರಣೆ ಪಡೆದಿದ್ದೇನೆ ಎಂದು ಹೇಳಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಮಾದಿಗ ಸಮುದಾಯವು ಸಂಘಟಿತವಾಗಬೇಕು. ಶಿಕ್ಷಣದ ಕೊರೆತಿಯಿದ್ದು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇವು ಅರ್ಹರನ್ನು ತಲುಪುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು. ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ರೂಪಿಸಿದರೆ ಸರ್ಕಾರ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.