ಬೆಂಗಳೂರು ರಾಜಕಾಲುವೆ ನಿರ್ಮಾಣಕ್ಕೆ 1500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಮಳೆಯಿಂದಾಗಿ ಬೆಂಗಳೂರಿನಲ್ಲಿ ಅಪಾರ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗೃಹ ಕಚೇರಿ ಕೃಷ್ಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬೆಂಗಳೂರು (ಸೆ.01): ಮಳೆಯಿಂದಾಗಿ ಬೆಂಗಳೂರಿನಲ್ಲಿ ಅಪಾರ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗೃಹ ಕಚೇರಿ ಕೃಷ್ಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವಾರು ಪ್ರದೇಶಗಳಲ್ಲಿ ಲೇಔಟ್, ಮನೆಗಳಿಗೆ ನೀರು ನುಗ್ಗಿದೆ. ಮಹದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಎಲ್ಲಾ ವಿಚಾರಗಳನ್ನ ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗಿದೆ. ಮಹದೇವಪುರದಲ್ಲಿ 9 ಕಡೆ, ಬೊಮ್ಮನಹಳ್ಳಿಯಲ್ಲಿ 11 ಕಡೆ ತೊಂದರೆ ಆಗಿದೆ. ಸವಳೆ ಕೆರೆ ಅನ್ನೋದು ಹರಿದು ಬಹಳ ಸಮಸ್ಯೆಯಾಗಿದೆ. ಮೈನ್ ಕಾಲುವೆ ಬ್ಲಾಕ್ ಆಗಿದೆ. ಇನ್ನೊಂದು ಕಡೆ ವಿಡ್ತ್ ಕಡಿಮೆ ಆದ್ರಿಂದ ಬಹಳ ತೊಂದರೆಯಾಗಿದೆ ಎಂದರು.
ಈ ಎಲ್ಲ ತಡೆಗಳನ್ನ ಸಂಪೂರ್ಣವಾಗಿ ಕ್ಲಿಯರ್ ಮಾಡ್ಬೇಕು. ಒಆರ್‌ಆರ್ ಮೇಲೆ ನಿಂತಿರುವ ನೀರನ್ನ ಡ್ರೈನ್ ಔಟ್ ಮಾಡಬೇಕು ಅಂತಾ ಸೂಚನೆ ನೀಡಲಾಗಿದೆ. ಡ್ರೈನೇಜ್ ಕಂಟಿನ್ಯುಟಿ ಇಲ್ಲದ ಕಾರಣ ಲೇಔಟ್‌ಗಳಲ್ಲಿ ನೀರು ನಿಂತಿದೆ. ರಾಜಕಾಲುವೆ ಅಲ್ಲದೆ, ಬೇರೆ ಬೇರೆ ನೀರು ಹರಿವಿನ ಮೂಲ ಕ್ಲಿಯರ್ ಮಾಡಬೇಕು. 122ಕ್ಕೂ ಹೆಚ್ಚು ಮನೆಗಳಿಗೆ ನೀರು ಹೋಗಿದೆ. ಕಂದಾಯ ಸಚಿವರು ಪರಿಹಾರ ಕೊಡ್ತಾರೆ. ನಾಳೆ ತೊಂದರೆ ಆಗಿರುವ ಪ್ರದೇಶಗಳಿಗೆ ವಿಸಿಟ್ ಮಾಡ್ತೀನಿ. ಮತ್ತು ಈಗಾಗಲೇ 1500 ಕೋಟಿ ರೂ ರಾಜಕಾಲುವೆ ನಿರ್ಮಾಣಕ್ಕೆ ಕೊಟ್ಟಿದ್ದೀನಿ. ನಿರಂತರ ಮಳೆಯಾದ್ರಿಂದ ಹೆಚ್ಚು ಸಮಸ್ಯೆಯಾಗಿದೆ ಎಂದು ಸಿಎಂ ತಿಳಿಸಿದರು.
ನಡ್ಡಾ ಸೂಚನೆ ಮೇರೆಗೆ ಕರ್ನಾಟಕದ 6 ಕಡೆ ದೊಡ್ಡ ರ್ಯಾಲಿ: ಸಿಎಂ ಬೊಮ್ಮಾಯಿ
ಈ ತಿಂಗಳು ಈ ವಾರ ಹೆಚ್ಚು ಮಳೆಯಾಗಿದ್ರಿಂದ ಅನಾಹುತ ಜಾಸ್ತಿಯಾಗಿದೆ . ಕಳೆದ ಬಾರಿ ಮಲ್ಲೇಶ್ವರಂ ಯಶವಂತಪುರ ಭಾಗದಲ್ಲಿ ತೊಂದರೆಯಾಗಿತ್ತು. ಕ್ಲೀನ್ ಮಾಡಿದ್ರಿಂದ ಯಾವುದೇ ತೊಂದರೆಯಾಗಿಲ್ಲ. ಹೆಚ್ಚುವರಿ ದುಡ್ಡು ಬೇಕಾದ್ರೆ ಸರ್ಕಾರ ಕೊಡುತ್ತೆ. ನಾಳೆ ಪರಿಶೀಲನೆ ಮಾಡಿ ನಿರ್ಧಾರ ಮಾಡ್ತೀವಿ ಎಂದರು. ಇನ್ನು ಕಳೆದ ಬಾರಿ ಸಿಟಿ ರೌಂಡ್ಸ್ ಮಾಡಿದ ಕೆಲಸಗಳೇ ಆಗಿಲ್ಲ ಎನ್ನುವ ಪ್ರಶ್ನೆಗೆ, ಯಲಹಂಕದಲ್ಲಿ ಕೆಲಸ ಮಾಡಿದ್ರಿಂದ ಈ ಬಾರಿ ಏನೂ ಆಗಿಲ್ಲ. ಹೊಸಕೆರೆಹಳ್ಳಿಯಲ್ಲಿ ಕೆಲಸ ಪ್ರಾರಂಭವಾಗಿದೆ. ಮಳೆ ಕಡಿಮೆ ಆದ್ರೆ ಎಲ್ಲಾ ಕಾಮಗಾರಿ ಮುಗಿಸ್ತೀವಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಟೆಂಡರ್ ಆಗಿದೆ ಮಳೆ ನಿಲ್ತಿಲ್ಲ: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಳೆದ ಬಾರಿ ಭೇಟಿ ಮಾಡಿದ ಸ್ಥಳಗಳಲ್ಲಿ ಕೆಲಸ ನಡೀತಿದೆ. ಮಹದೇವಪುರ ಬೊಮ್ಮನಹಳ್ಳಿ ಭಾಗದಲ್ಲಿ ಅನಾಹುತವಾಗಿದೆ ಎಂದು ಸಚಿವ ಆರ್.ಅಶೋಕ ಹೇಳಿದರು. ಹೊಸ ಕಾಲುವೆಗಳ ನಿರ್ಮಾಣ ಮಾಡಿ ನೀರು ಆಚೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಮರ್ಸಿಲೆಸ್ಲಿ, ಎಷ್ಟೇ ಪ್ರಭಾವಿಯಾಗಿದ್ರು ಮುಲಾಜಿಲ್ಲದೆ ಒತ್ತವರಿ ಮಾಡಿದ್ರೆ ತೆರವು ಮಾಡ್ತೀವಿ. ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ನಡಿ ನೋಟಿಸ್ ಕೊಡುವ ಅವಶ್ಯಕತೆಯಿಲ್ಲ. ಅಧಿಕಾರಿಗಳಿಗೆ ಎಷ್ಟೇ ಪ್ರಭಾವಿಯಿದ್ರೂ ತೆರವು ಮಾಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಭೋವಿ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 175 ಕೋಟಿ: ಸಿಎಂ ಬೊಮ್ಮಾಯಿ
ಎಲ್ಲಾ ಕೆರೆಗಳು ತುಂಬಿ ಹೋಗಿವೆ. ಸರ್ಕಾರ ಯಾರ ಮನೆಗೆ ನೀರು ನುಗ್ಗಿದೆಯೊ, ತೊಂದರೆ ಆಗಿದೆಯೊ ಅಂತವರಿಗೆ ಪರಿಹಾರ ನೀಡುತ್ತೆ. ಬೆಳೆ ಪರಿಹಾರ ಕೂಡ ನೀಡಲಾಗುತ್ತೆ. ಮೂರನೇ ತಾರೀಖು ಹಾಸನ ತುಮಕೂರು ಮಂಗಳೂರು ಭಾಗದಲ್ಲಿ ಪ್ರವಾಸ ಮಾಡ್ತೀನಿ. ನೊಂದವರಿಗೆ ಸರ್ಕಾರ ಸಹಾಯ ಮಾಡಲಿದೆ. ಟೆಂಡರ್ ಆಗಿದೆ ಮಳೆ ನಿಲ್ತಿಲ್ಲ. ಎಂಟು ಸಾವಿರ ಕೋಟಿ ಹಣ ಬಿಡುಗಡೆಯಾಗಿದೆ.ಸಾರ್ವಜನಿಕರಲ್ಲಿ ವಿನಂತಿ ಮಾಡ್ತೀನಿ. ಬೇಸಿಗೆ ಬರದ ರೀತಿ ಮಳೆ ಬರ್ತಿದೆ. ನಾಳೆ ಮುಖ್ಯಮಂತ್ರಿಗಳು ನೆರೆ ಬಂದು ಹಾನಿಯಾಗಿರೋ ಕಡೆ ಸಿಟಿಯಲ್ಲಿ ರೌಂಡ್ಸ್ ಮಾಡ್ತಾರೆ ಎಂದು ಅಶೋಕ ಹೇಳಿದರು.