ಮೊಹರಂ ದಫನ್‌ ಮೆರವಣಿಗೆ ವೇಳೆ ಶನಿವಾರ ಸಂಜೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಬಡಿಗೆಯಿಂದ ಬಡಿ​ದಾ​ಡಿ​ಕೊಂಡ ಘಟನೆ ತಾಲೂಕಿನ ಇಬ್ರಾಹಿಂಪುರ್‌ ಗ್ರಾಮದಲ್ಲಿ ನಡೆದಿದೆ. ಘಟ​ನೆ​ಯ​ಲ್ಲಿ ಐವರಿಗೆ ಗಾಯ​ಗ​ಳಾ​ಗಿ​ವೆ.

ಶಹಾಪುರ (ಜು.31): ಮೊಹರಂ ದಫನ್‌ ಮೆರವಣಿಗೆ ವೇಳೆ ಶನಿವಾರ ಸಂಜೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಬಡಿಗೆಯಿಂದ ಬಡಿ​ದಾ​ಡಿ​ಕೊಂಡ ಘಟನೆ ತಾಲೂಕಿನ ಇಬ್ರಾಹಿಂಪುರ್‌ ಗ್ರಾಮದಲ್ಲಿ ನಡೆದಿದೆ. ಘಟ​ನೆ​ಯ​ಲ್ಲಿ ಐವರಿಗೆ ಗಾಯ​ಗ​ಳಾ​ಗಿ​ವೆ.ಭೀಮರಾಯ ಸೋಪಣ್ಣ, ಕಾಶಮ್ಮ ಗಂಡ ಭೀಮರಾಯ, ಮರೆಮ್ಮ ಶಿವರಾಯ, ನಿಂಗಪ್ಪ, ಮರೆಮ್ಮ ನಿಂಗಪ್ಪ ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ. ಗಾಯಾಳುಗಳು ಶಹಾ ಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಪಿಐ ಚನ್ನಯ್ಯ ಹಿರೇಮಠ್‌ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಪ್ರಕರಣವಿನ್ನೂ ದಾಖಲಾಗಿಲ್ಲ.

ಘಟನೆ ವಿವರ: ಮೊಹರಂ ಆಚರಣೆ ವೇಳೆ ಭೀಮರಾಯ ಸೋಪಣ್ಣ ಆಯತಪ್ಪಿ ವ್ಯಕ್ತಿಯೊಬ್ಬನ ಕಾಲು ತುಳಿದಿದ್ದಾರೆ. ಈ ಕಾರಣಕ್ಕೆ ಸಿಟ್ಟಿಗೆದ್ದ ವ್ಯಕ್ತಿ ಹಾಗೂ ಅಲ್ಲಿದ್ದವರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ರೊಚ್ಚಿಗೆದ್ದ ಗುಂಪು ಸ್ಥಳದಲ್ಲಿದ್ದ ಸೋಪಣ್ಣ, ಇತರ ಐವರ ಮೇಲೂ ಹಲ್ಲೆ ಮಾಡಿದ್ದಾರೆ.

ಮೊಹರಂ ನಿಮಿತ್ಯ ಹಾಕಿದ ನಿಗಿನಿಗಿ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ!

ಕೆಂಡ ಹಾಯುವಾಗ ಆಲೆ ಗುಂಡಿಗೆ ಬಿದ್ದು ಗಾಯ

ಚಿತ್ರದುರ್ಗ: ಆಲೆ ಗುಂಡಿಯಲ್ಲಿ ಕೆಂಡ ಹಾಯುವಾಗ ಪುಟ್ಟಕಂದಮ್ಮನ ಜೊತೆ ಕಾಲು ಜಾರಿ ವ್ಯಕ್ತಿಯೋರ್ವ ಕೆಂಡದಲ್ಲಿ ಬಿದ್ದ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊಹರಂ ಹಬ್ಬದ ಹಿನ್ನೆಲೆ ಕೆಂಡ ಹಾಯುವಾಗ ಘಟನೆ ನಡೆದಿದೆ. ರಮೇಶ್‌ ಎಂಬಾತ ತಮ್ಮನ ಮಗನ ಜೊತೆ ಕೆಂಡ ತುಳಿಯುವಾಗ ಆಯತಪ್ಪಿ ಕೆಂಡದಲ್ಲಿ ಬಿದ್ದಿದ್ದಾರೆ. ಕೆಂಡದಲ್ಲಿ ಬಿದ್ದ ವ್ಯಕ್ತಿ ಮಗುನಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಬಾಗಲಕೋಟೆ: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದುಗಳಿಂದ ಮೊಹರಂ ಆಚರಣೆ..!