Asianet Suvarna News Asianet Suvarna News

ರಾಜ್ಯದಲ್ಲಿ ಮತಾಂತರ ಸದ್ದು: ಸಿಎಂ ಭೇಟಿಯಾದ ಕ್ರೈಸ್ತ ನಿಯೋಗ

* ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮತಾಂತರ 
* ಮುಖ್ಯಮಂತ್ರಿ ಭೇಟಿಯಾದ ಕ್ರೈಸ್ತ ಬಿಷಪ್
* ಮತಾಂತರ ಮಾಡ್ತಿದ್ದಾರೆ ಎನ್ನುವ ಆರೋಪವನ್ನು ತಳ್ಳಿಹಾಕಿದ ಪೀಟರ್ ಮಚಾಡೋ

Christian delegation Meets CM Basavaraj Bommai at Bengaluru rbj
Author
Bengaluru, First Published Sep 22, 2021, 6:24 PM IST

ಬೆಂಗಳೂರು, (ಸೆ.22): ರಾಜ್ಯದಲ್ಲಿ ಸದ್ಯ ಮತಾಂತರ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಸದನದಲ್ಲೂ ಮತಾಂತರದ ಬಗ್ಗೆ ಚರ್ಚೆಯಾಗುತ್ತಿದೆ.

ಕ್ರಿಶ್ಚಿಯನ್ (christian)ಮಿಷನರಿಗಳು ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ತೋಡಿಕೊಂಡ ಬೆನ್ನಲ್ಲೇ  ಇದರ ವಿರುದ್ಧ ಖಂಡಿತ ಒಳ್ಳೆಯ ಬಿಲ್ ತರ್ತೇವೆ, ಖಂಡಿತವಾಗಿ ನಮ್ಮ ಸರ್ಕಾರ ಇದನ್ನು ಸಹಿಸಲ್ಲ ಎಂದು ವಿಧಾನ ಸೌಧದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanedra) ಭರವಸೆ ನೀಡಿದ್ದಾರೆ.

ಇದರ ಮಧ್ಯೆ ಕ್ರೈಸ್ತ ಬಿಷಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಇಂದು (ಸೆ.22) ವಿಧಾನಸೌಧದಲ್ಲಿ (Vidhana Soudha) ಭೇಟಿಯಾಗಿದ್ದು, ಮತಾಂತರದ ಬಗ್ಗೆ ಚರ್ಚೆ ನಡೆಸಿದರು.

ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ ಗೋಳು!

ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಾ. ಪೀಟರ್ ಮಚಾಡೋ, ನಾವು ಯಾರು ಮತಾಂತರ ಮಾಡುತ್ತಿಲ್ಲ. ನಾವೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಇದ್ದೇವೆ. ಇದನ್ನ ದೊಡ್ಡ ವಿಷಯ ಮಾಡೋದು ಸರಿಯಲ್ಲ. ನಮ್ಮ ಧರ್ಮದವರಿಗೆ ನೈತಿಕತೆ ಇದೆ‌. ಜನರಿಗೆ ನಾವು  ಫೋರ್ಸ್ ಮಾಡಿಲ್ಲ. ಇದಕ್ಕಾಗಿ ಕಾಯ್ದೆ ಮಾಡುವ ಅಗತ್ಯ ಇಲ್ಲ ಎಂದರು.

ನಾವು ಮತಾಂತರ ಮಾಡೋದಕ್ಕೆ ಇಲ್ಲ. ಪ್ರತಿಯೊಬ್ಬ ಧರ್ಮಧ್ಯಕ್ಷರ ಹೆಸರಲ್ಲಿ ನೂರಾರು ಶಾಲಾ,ಕಾಲೇಜು,ಆಸ್ಪತ್ರೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚಾಗಿ ಮಕ್ಕಳಿದ್ದಾರೆ. ಒಬ್ಬರಿಗೂ ಮತಾಂತರ ಮಾಡಲು ನಾವು ಹೇಳಿಲ್ಲ. ಅಪ್ಪಿತಪ್ಪಿ ಸಣ್ಣ ಘಟನೆಯಾಗಿದ್ದು ದೊಡ್ಡ ವಿಷಯ ಮಾಡೋದು ಸರಿಯಲ್ಲ. ನಾವು ಸಿಎಂಗೆ ಹೇಳಿದ್ದೇವೆ. ನಮಗೆ ಗೊತ್ತಿದೆ ನೀವ್ಯಾರು ಹಾಗಲ್ಲ ಅಂತ ಸಿಎಂ ಹೇಳಿದ್ದಾರೆ. ಯಾರೋ ಮಸಿ ಬಳಿಯುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios