Asianet Suvarna News Asianet Suvarna News

ಚಿತ್ರದುರ್ಗ ಕಲುಷಿತ ನೀರಲ್ಲಿ ಕಾಲರಾ ಅಂಶ: ಲ್ಯಾಬ್‌ ವರದಿ

ಮೂರು ಮಂದಿ ಸಾವಿಗೀಡಾಗಿ ನೂರಾರು ಮಂದಿ ಅಸ್ವಸ್ಥರಾಗಲು ಕಾರಣವಾಗಿದ್ದ ಕವಾಡಿಗರ ಹಟ್ಟಿಗೆ ಪೂರೈಕೆಯಾಗಿದ್ದ ನೀರಲ್ಲಿ ಕಾಲರಾ ಮಾದರಿಗಳು ಪತ್ತೆಯಾಗಿವೆ ಎಂದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ.

Cholera content in Chitradurga contaminated water Lab report rav
Author
First Published Aug 4, 2023, 10:28 AM IST

ಚಿತ್ರದುರ್ಗ (ಆ.4) :  ಮೂರು ಮಂದಿ ಸಾವಿಗೀಡಾಗಿ ನೂರಾರು ಮಂದಿ ಅಸ್ವಸ್ಥರಾಗಲು ಕಾರಣವಾಗಿದ್ದ ಕವಾಡಿಗರ ಹಟ್ಟಿಗೆ ಪೂರೈಕೆಯಾಗಿದ್ದ ನೀರಲ್ಲಿ ಕಾಲರಾ ಮಾದರಿಗಳು ಪತ್ತೆಯಾಗಿವೆ ಎಂದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ. ಈ ಮಧ್ಯೆ ಘಟನೆಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಇಬ್ಬರು ಎಂಜಿನಿಯರ್‌ ಸೇರಿ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಇಬ್ಬರು ವಾಲ್‌್ವಮ್ಯಾನ್‌ಗಳನ್ನು ವಜಾ ಮಾಡಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಆದೇಶ ಹೊರಡಿಸಿದ್ದಾರೆ.

ಜು.31ರಂದು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ವಾಂತಿ, ಭೇದಿಯ ಸ್ಯಾಂಪಲ… ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈಗ ಆ ವರದಿ ಬಹಿರಂಗವಾಗಿದ್ದು, ್ಖಜಿಚ್ಟಿಟ spಛ್ಚಿಜಿಛಿs ಜ್ಟಟಡ್ಞಿ ಜ್ಞಿ ್ಚ್ಠ್ಝಠ್ಠಿ್ಟಛಿ (ಕಾಲರಾ ಮಾದರಿಗಳು) ಪತ್ತೆಯಾಗಿವೆ. ನೀರಿನ ಸೂಕ್ಷ್ಮಾಣು ಜೀವಿ ಪರೀಕ್ಷಾ ವರದಿ ಇದಾಗಿದ್ದು, ಕುಡಿಯಲು ಯೋಗ್ಯವಲ್ಲವೆಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಇಡೀ ಏರಿಯಾ ಜನ ಆಸ್ಪತ್ರೆಗೆ ದಾಖಲು!

3 ಮಂದಿ ಸಸ್ಪೆಂಡ್‌:

ನಗರದ ಎಲ್ಲ ಕುಡಿಯುವ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ಲೀಕೇಜ್‌ಗಳನ್ನು ದುರಸ್ತಿಗೊಳಿಸಿ, ಕ್ಲೋರಿನೇಷನ್‌ ಮಾಡಲು ಹಲವು ಬಾರಿ ತಿಳಿಸಲಾಗಿದ್ದರೂ ಈ ವಿಚಾರದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಆರ್‌.ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್‌.ಆರ್‌.ಕಿರಣ್‌ ಕುಮಾರ್‌ ಹಾಗೂ ಒಬ್ಬ ನೀರು ಸರಬರಾಜು ಸಹಾಯಕನನ್ನು ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ. ಜತೆಗೆ ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವಾಲ್‌್ವ ಮ್ಯಾನ್‌ಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇವರಲ್ಲಿ ಇಬ್ಬರು ಎಂಜಿನಿಯರ್‌ಗಳ ಮೇಲೆ ಇಲಾಖಾ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸನ್ನೂ ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾಡಿದ್ದಾರೆ.

ಏತನ್ಮಧ್ಯೆ ಗುರುವಾರವೂ ಕವಾಡಿಗರಹಟ್ಟಿಯ 24 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು. ಕಲುಷಿತ ನೀರು ಸೇವಿಸಿ ಈವರೆಗೂ ಒಟ್ಟು 132 ಮಂದಿ ಅಸ್ವಸ್ಥರಾಗಿದ್ದು, ಅವರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಲಿ 122 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಶಯ ಪ್ರವೃತ್ತಿಯ ಪತಿರಾಯ; ಪತ್ನಿ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿ ವಿಕೃತಿ!

ರಸ್ತೆ ತಡೆ, ಟೈರಿಗೆ ಬೆಂಕಿ:

ಘಟನೆ ನಡೆದು ಮೂರು ದಿನವಾದರೂ ಶಾಸಕ ವೀರೇಂದ್ರ ಪಪ್ಪಿ ಕವಾಡಿಗರಹಟ್ಟಿಗೆ ಆಗಮಿಸಿಲ್ಲ, ಸಾವಿಗೀಡಾದ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ, ಆಸ್ಪತ್ರೆಗೂ ಭೇಟಿ ನೀಡಿಲ್ಲವೆಂದು ಆರೋಪಿಸಿ ನೂರಾರು ಸಂಖ್ಯೆಯಲ್ಲಿ ಜನ ಸೊಲ್ಲಾಪುರ-ಮಂಗಳೂರು ಹೆದ್ದಾರಿ ತಡೆ ಮಾಡಿ ಆಕ್ರೋಶ ವ್ಯಕ್ತಡಿಸಿದರು. ಈ ವೇಳೆ ಒಂದಿಷ್ಟುಮಂದಿ ಟೈರ್‌ಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು. ಆಗ ಪೊಲೀಸರು ಕೆಲ ಪ್ರತಿಭಟನಾಕರರನ್ನು ಬಂಧಿಸಿ ಕರೆದೊಯ್ದರು. ನಂತರ ಶಾಸಕ ವೀರೇಂದ್ರ ಪಪ್ಪು ಅವರು ಹಟ್ಟಿಗೆ ಆಗಮಿಸಿ ಸಮಸ್ಯೆ ಆಲಿಸಿದರು.

Follow Us:
Download App:
  • android
  • ios