ಗಣಿನಾಡು ಬಳ್ಳಾರಿ ಮೀರಿಸುವಂತಿದೆ ಚಿತ್ರದುರ್ಗ ಸುತ್ತಮುತ್ತ ಮೈನ್ಸ್ ಲಾರಿಗಳ ಅಬ್ಬರ!
ಗಣಿನಾಡು ಅಂದ್ರೆ ಬಳ್ಳಾರಿ ನೆನಪಾಗುತ್ತೆ. ಆದ್ರೆ ಬಳ್ಳಾರಿಯನ್ನೆ ಮೀರಿಸುವಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯುತ್ತಿದೆ ಗಣಿಗಾರಿಕೆ. ಇಲ್ಲಿ ಓಡಾಡುವ ಗಣಿ ಲಾರಿಗಳಿಂದ ಜನರು ಹೈರಾಣಾಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.21): ಗಣಿನಾಡು ಅಂದ್ರೆ ಬಳ್ಳಾರಿ ನೆನಪಾಗುತ್ತೆ. ಆದ್ರೆ ಬಳ್ಳಾರಿಯನ್ನೆ ಮೀರಿಸುವಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯುತ್ತಿದೆ ಗಣಿಗಾರಿಕೆ. ಇಲ್ಲಿ ಓಡಾಡುವ ಗಣಿ ಲಾರಿಗಳಿಂದ ಜನರು ಹೈರಾಣಾಗಿದ್ದಾರೆ.
ನೋಡಿ ಹೀಗೆ ದಾರಿಯುದ್ದಕ್ಕೂ ಸಾಲುಗಟ್ಟಿ ಓಡಾಡುವ ಗಣಿ ಲಾರಿಗಳು! ಗಣಿ ಧೂಳಿಗಗೆ ಕೆಂಪಗೆ ಕಲರ್ ಫುಲ್ ಆದ ರಸ್ತೆ ಬದಿಯ ಜಮೀನುಗಳು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ. ಹೌದು, ಒಂದಲ್ಲ ಎರಡಲ್ಲ ಬರೋಬ್ಬರಿ 300 ರಿಂದ 400 ಅಡಿ ಆಳದವರೆಗೂ ಸುರುಳಿ ಸುರುಳಿ ಆಕಾರದಲ್ಲಿ ನಡೆಯುತ್ತಿರೋ ಕಬ್ಬಿಣದ ಗಣಿಗಾರಿಕೆ. ಲಾರಿ ಗಳ ಓಡಾಟದಿಂದಾಗಿ ರಸ್ತೆ ಬದಿಯ ಜಮೀನಿನಲ್ಲಿರುವ ಬಾಳೆ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಸರ್ವನಾಶವಾಗ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಅಲ್ದೇ ಈವರೆಗೆ ಕೇವಲ1 ಮಿಲಿಯನ್ ಟನ್ ಮಾತ್ರ ಲಾರಿಗಳಲ್ಲಿ ಮೈನ್ಸ್ ಸಾಗಣೆ ನಡೆಯುತ್ತಿತ್ತು. ಇದರಿಂದಾಗಿ ಇಲ್ಲಿನ ರಸ್ತೆಗಳೆಲ್ಲಾಹದಗೆಟ್ಟಿದ್ದವು.ಇದರ ಬೆನ್ನಲ್ಲೇ ಈಗ ಅದನ್ನು ನಾಲ್ಕು ಮಿಲಿಯನ್ ಟನ್ ಸಾಗಣೆ ಗೆ ಅನುಮತಿ ನೀಡಲು ಜಿಲ್ಲಾಡಳಿತ ಮುಂದಾಗಿರೋದು ಇಲ್ಲಿನ ಗ್ರಾಮಸ್ಥರಲ್ಲಿ ಬಾರಿ ಆತಂಕ ಸೃಷ್ಟಿಸಿದೆ.
ಚಿತ್ರದುರ್ಗದಲ್ಲಿ ಗಣಿಗಾರಿಗೆ ವಿರೋಧಿಸಿ ಅಂಬೇಡ್ಕರ್ ಸೇನೆ ಬೃಹತ್ ಪ್ರತಿಭಟನೆಗೆ ಪ್ಲಾನ್
ಇನ್ನು ಭೀಮಸಮುದ್ರ, ಹಿರೇ ಗುಂಟನೂರು, ಮಾನಂಗಿ, ಹಾಗು ಸಿದ್ದಾಪುರದ ಗ್ರಾಮದ ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುವ 10 ಕಿಲೋಮೀಟರ್ ರಸ್ತೆ ನರಕಕ್ಕೆ ಸಮ ಎನ್ನುವಂತಾಗಿದೆ. ಅಲ್ಲದೇ ಲಾರಿಗಳ ಓಡಾಟದಿಂದಾಗಿ ಮಕ್ಕಳನ್ನು ಮನೆಯಿಂದ ಹೊರ ಬಿಡದೇ ಕೂಡಿ ಹಾಕುವಂತಾಗಿದ್ದೂ, ಮಕ್ಕಳ ಆರೋಗ್ಯ ಮೇಲೂ ದುಷ್ಪರಿಣಾಮ ಬೀರುವ ಭೀತಿ ಶುರುವಾಗಿದೆ. ಹೀಗಾಗಿ ಗಣಿಗಾರಿಕೆಗೆ ಬ್ರೇಕ್ ಹಾಕುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.
ಒಟ್ಟಾರೆ ಗಣಿಗಾರಿಕೆಯಿಂದ ಕೋಟೆನಾಡಿನ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ.ಜಮೀನಿನಲ್ಲಿ ಬೆಳೆದ ಬೆಳೆ ಹಾಳಾಗ್ತಿದೆ.ರಸ್ತೆಗಳು ವಿನಾಶದ ಅಂಚಿನಲ್ಲಿವೆ.ಹೀಗಾಗಿ ವೇಗವಾಗಿ ಓಡಾಡುವಗಣಿ ಲಾರಿಗಳ ಮದ್ಯೆ ಜನರು ಆತಂಕದಿಂದ ಬದುಕುವಂತಾಗಿದೆ.